ಕ್ರೀಡೆಗಳಲ್ಲಿ ಭಾಗವಹಿಸಿ ಉತ್ತಮ ಆರೋಗ್ಯ ಪಡೆಯಿರಿ: ಆಶಯ್ ಮಧು

KannadaprabhaNewsNetwork |  
Published : Dec 29, 2024, 01:16 AM IST
28ಕೆಎಂಎನ್ ಡಿ18 | Kannada Prabha

ಸಾರಾಂಶ

ದೈಹಿಕ ಚಟುವಟಿಕೆ ಮುಂದುವರಿದ ಭಾಗವೇ ಕ್ರೀಡೆ. ಪ್ರತಿಯೊಬ್ಬರೂ ಚಿಕ್ಕವಯಸ್ಸಿನಿಂದಲೇ ಕ್ರಿಡೆಯ ಬಗ್ಗೆ ಆಸಕ್ತಿ ಹಾಗೂ ಮಹತ್ವವನ್ನು ಅರಿತುಕೊಳ್ಳಬೇಕಾದ ಅಗತ್ಯವಿದೆ. ಕ್ರೀಡಾಕೂಟಗಳ ಮಹತ್ವವನ್ನು ಅರಿತು ಕ್ರಿಡೆಗಳನ್ನು ಅಬಿವೃದ್ಧಿಪಡಿಸುವ ಮನೋಬಾವ ಬೆಳೆಸಿಕೊಂಡು ಇಂದಿನ ಯುವಜನತೆಯು ಕ್ರೀಡೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಬೇಕು.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಪ್ರತಿಯೊಬ್ಬರೂ ಕ್ರೀಡಾಭಿಮಾನ ಬೆಳೆಸಿಕೊಂಡು ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಉತ್ತಮ ಆರೋಗ್ಯ ಪಡೆಯಬೇಕು ಎಂದು ಭಾರತೀ ಎಜುಕೇಷನ್ ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಆಶಯ್ ಮಧು ಸಲಹೆ ನೀಡಿದರು.

ಜಿ.ಮಾದೇಗೌಡ ಸ್ಮಾರಕ ಕ್ರೀಡಾಂಗಣದಲ್ಲಿ ಮಧು ಜಿ.ಮಾದೇಗೌಡ ಅಭಿಮಾನಿ ಬಳಗ ಮತ್ತು ಅರ್ಜುನಪುರಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದಿಂದ ಮಧು ಜಿ.ಮಾದೇಗೌಡರ 60 ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.

ದೈಹಿಕ ಚಟುವಟಿಕೆ ಮುಂದುವರಿದ ಭಾಗವೇ ಕ್ರೀಡೆ. ಪ್ರತಿಯೊಬ್ಬರೂ ಚಿಕ್ಕವಯಸ್ಸಿನಿಂದಲೇ ಕ್ರಿಡೆಯ ಬಗ್ಗೆ ಆಸಕ್ತಿ ಹಾಗೂ ಮಹತ್ವವನ್ನು ಅರಿತುಕೊಳ್ಳಬೇಕಾದ ಅಗತ್ಯವಿದೆ ಹೇಳಿದರು.

ಕ್ರೀಡಾಕೂಟಗಳ ಮಹತ್ವವನ್ನು ಅರಿತು ಕ್ರಿಡೆಗಳನ್ನು ಅಬಿವೃದ್ಧಿಪಡಿಸುವ ಮನೋಬಾವ ಬೆಳೆಸಿಕೊಂಡು ಇಂದಿನ ಯುವಜನತೆಯು ಕ್ರೀಡೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಬೇಕೆಂದು ಕಿವಿ ಮಾತು ಹೇಳಿದರು.

ಈ ವೇಳೆ ಅರ್ಜುನಪುರಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು. ಮುಖಂಡ ಕಾರ್ಕಹಳ್ಳಿ ಸ್ವರೂಪ್ ಬಸವೇಗೌಡ, ಅರ್ಜುನಪುರಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ನಗರಕೆರೆ ಪ್ರಸನ್ನಕುಮಾರ್, ಉಪಾಧ್ಯಕ್ಷ ಅವಿನಂದನ್ ಕಾರ್ಯದರ್ಶಿ ಶಂಕರ್, ದೀಪು, ನಯನ್ ಕುಮಾರ್, ಶಿವಕುಮಾರ್, ವರಗರಹಳ್ಳಿ ಸೋಮು, ದೈಹಿಕ ಶಿಕ್ಷಣ ನಿರ್ದೇಶಕರಾದ ಸುನೀಲ್ ಕುಮಾರ್, ಶೋಭಾ ಸೇರಿದಂತೆ ಮತ್ತಿತರಿದ್ದರು.

ಆರೋಪಿಗಳನ್ನು ಬಂಧಿಸಲು ಪೊಲೀಸರು ಮೀನಾಮೇಷ: ಎಂ.ಸಿ.ಶಿವರಾಜು

ಮದ್ದೂರು:

ತಾಲೂಕಿನ ಚಾಮನಹಳ್ಳಿಯಲ್ಲಿ ಪರಿಶಿಷ್ಟ ಯುವಕರ ಮೇಲೆ ಸವರ್ಣೀಯ ಯುವಕರು ಜಾತಿ ನಿಂದನೆ, ಹಲ್ಲೆ ಮತ್ತು ದೌರ್ಜನ್ಯ ನಡೆಸಿ ಗಲಾಟೆ ಮಾಡಿದ್ದರೂ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಮೀನಾಮೇಷ ತೋರುತ್ತಿದ್ದಾರೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣಾ ಪಡೆ ಭಾರತ ಸಂಘಟನೆ ರಾಜ್ಯಾಧ್ಯಕ್ಷ ಎಂ.ಸಿ.ಶಿವರಾಜು ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.13ರ ರಾತ್ರಿ ಗ್ರಾಮದ ಅಂಗಡಿಯಲ್ಲಿ ವಸ್ತುಗಳನ್ನು ಕೊಳ್ಳಲು ಹೋದಾಗ 20 ಮಂದಿ ಸವರ್ಣೀಯರು ಜಾತಿನಿಂದನೆ ಮಾಡಿ ಹಲ್ಲೆ ಮಾಡಿದ್ದಾರೆ. ಈ ಸಂಬಂಧ ಡಿ.14 ರಂದು ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರೂ ಇದುವರೆಗೂ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ ಎಂದರು.

ಸದರಿ ಅಂಗಡಿಯಲ್ಲಿ ಮದ್ಯ ಮಾರಾಟ ಮಾಡಿ ಗ್ರಾಮದ ಯುವಕರನ್ನು ಕುಡಿತಕ್ಕೆ ಮತ್ತು ತಂಬಾಕು ಚಟುವಟಿಕೆಗಳಿಗೆ ದಾಸರನ್ನಾಗಿಸುತ್ತಿದ್ದಾರೆ. ಅಂಗಡಿ ಮಳಿಗೆ ಬಳಿ ಪರಿಶಿಷ್ಟರನ್ನು ಕಂಡರೆ ಕೆಂಡ ಕಾರುವುದು, ತೇಜೋವಧೆ ಮಾಡುವುದು, ದೌರ್ಜನ್ಯ ಎಸಗುವ ಘಟನೆಗಳು ನಡೆಯುತ್ತಿದೆ. ಇದರಿಂದ ಜೀವಭಯ ಎದುರಿಸುವಂತಾಗಿದೆ. ಕೂಡಲೇ ಪೊಲೀಸರು ಈಗಾಗಲೇ ನೀಡಿರುವ ದೂರಿನನ್ವಯ 9 ಮಂದಿ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದರು.

ಕೂಡಲೇ ಆರೋಪಿಗಳನ್ನು ಬಂಧಿಸದಿದ್ದರೆ ಗ್ರಾಮದಿಂದ ಮಂಡ್ಯ ಜಿಲ್ಲಾಧಿಕಾರಿ ಕಚೇರಿವರೆಗೂ ಪಾದಯಾತ್ರೆಯ ಮೂಲಕ ತಮಟೆ ಚಳುವಳಿ ಮಾಡಲಾಗುವುದು ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಚಂದ್ರಕುಮಾರ್, ಶೇಷಾದ್ರಿ, ರಾಜೇಶ್, ಕಾರ್ತಿಕ್ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ