ಮತದಾನದ ಪವಿತ್ರ ಕಾರ್ಯದಲ್ಲಿ ಭಾಗವಹಿಸಿ: ಗಾಣಿಗೇರ

KannadaprabhaNewsNetwork |  
Published : Apr 09, 2024, 12:48 AM IST
ಫೋಟೋ- 8ಜಿಬಿ6 | Kannada Prabha

ಸಾರಾಂಶ

ಮತದಾನ ಮಾಡುವ ಪವಿತ್ರ ಕಾರ್ಯದಲ್ಲಿ ಎಲ್ಲರೂ ಮತ್ತು ವಿಶೇಷವಾಗಿ ಎಲ್ಲಾ ಯುವಕರು ಕಡ್ಡಾಯವಾಗಿ ಭಾಗವಹಿಸುವುದರ ಮುಖಾಂತರ ಸದೃಢವಾದ ದೇಶವನ್ನು ಕಟ್ಟುವುದರಲ್ಲಿ ಕೈ ಜೋಡಿಸಬೇಕು.

ಕನ್ನಡಪ್ರಭ ವಾರ್ತೆ ಕಲಬುರಗಿ

ಮತದಾನ ಮಾಡುವ ಪವಿತ್ರ ಕಾರ್ಯದಲ್ಲಿ ಎಲ್ಲರೂ ಮತ್ತು ವಿಶೇಷವಾಗಿ ಎಲ್ಲಾ ಯುವಕರು ಕಡ್ಡಾಯವಾಗಿ ಭಾಗವಹಿಸುವುದರ ಮುಖಾಂತರ ಸದೃಢವಾದ ದೇಶವನ್ನು ಕಟ್ಟುವುದರಲ್ಲಿ ಕೈ ಜೋಡಿಸಬೇಕು ಎಂದು ಅಂಬೇಡ್ಕರ್‌ ಕಾಲೇಜಿನ ಪ್ರಾಚಾರ್ಯ ಡಾ. ವಿಜಯಕುಮಾರ ಗಾಣಿಗೇರ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

ಹೈ.ಕ.ಶಿ. ಸಂಸ್ಥೆಯ, ಎಂ.ಎಸ್. ಇರಾಣಿ ಪದವಿ ಮಹಾವಿದ್ಯಾಲಯ, ಕಲಬುರಗಿ, ರಾಷ್ಟೀಯ ಸೇವಾ ಯೋಜನೆ, ಭಾರತ ಸರ್ಕಾರದ, ಕ್ರೀಡಾ ಮತು ಯುವ ಸಬಲೀಕರಣ ಇಲಾಖೆ, ಮತ್ತು ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ ಸಂಯುಕ್ತಾಶ್ರಯದಲ್ಲಿ ಶಹೀಧ್ ದಿವಸದ (ಬಲಿದಾನ ದಿವಸ) ಅಂಗವಾಗಿ “ಮತದಾನದ ಜಾಗೃತಿ, ಚುನಾವಣೆಯಲ್ಲಿ ಯುವಕರ ಪಾತ್ರ ಮತ್ತು ಸ್ವಚ್ಛತಾ ಚಟುವಟಿಕೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಎಂಎಸ್‌ಐ ಪ್ರಾಚಾರ್ಯ ಡಾ. ರಾಜಶೇಖರ ವಿ. ಬೀರನಳ್ಳಿ ಮಾತನಾಡಿ ಪ್ರಜಾಪ್ರಭುತ್ವವದ ವ್ಯವಸ್ಥೆಯನ್ನು ಉಳಿಸುವಲ್ಲಿ ಯುವಕರ ಪಾತ್ರ ಬಹಳ ಪ್ರಮುಖವಾದದು. ಮತ್ತು ಇದರ ಅಳಿವು - ಉಳಿವು ಯುವಕರ ಕೈಯಲ್ಲಿದೆ ಎಂದರು. ಎನ್ನೆಸ್ಸೆಸ್‌ ಅಧಿಕಾರಿ ಡಾ. ಪ್ರಾಣೇಶ ಪ್ರಾಸ್ತಾವಿಕ ಮಾತನ್ನಾಡಿದರು, ಡಾ. ರೇಣುಕಾದೇವಿ ಪಾಟೀಲ ನಿರೂಪಿಸಿದರು. ಡಾ. ಶಂಕ್ರಪ್ಪ ಕೆ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾರತೀಯರ ಕರೆತರಲು ವಿಶೇಷ ವಿಮಾನ ಮಾಡಿ: ಮೋದಿಗೆ ಸಿಎಂ ಸಿದ್ದು ಪತ್ರ
100ಕ್ಕೂ ಕನ್ನಡಿಗರ ಹೊತ್ತು ಬಂತು ಮೊದಲ ವಿಮಾನ