ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ: ಡಾ.ಕೃಷ್ಣರಾಜ

 18 ವರ್ಷ ತುಂಬಿದ ಅರ್ಹ ಯುವ ಮತದಾರರು ತಪ್ಪದೇ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕ ಡಾ.ಕೃಷ್ಣರಾಜ ಹೇಳಿದರು.

KannadaprabhaNewsNetwork | Published : Apr 26, 2024 7:55 PM IST / Updated: Apr 27 2024, 09:28 AM IST

 ಚಿಕ್ಕೋಡಿ :  18 ವರ್ಷ ತುಂಬಿದ ಅರ್ಹ ಯುವ ಮತದಾರರು ತಪ್ಪದೇ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕ ಡಾ.ಕೃಷ್ಣರಾಜ ಹೇಳಿದರು.

ಪಟ್ಟಣದ ಸಿಇಟಿ ಸಂಸ್ಥೆಯ ಆರ್.ಡಿ.ಕಾಲೇಜು ಆಟದ ಮೈದಾನದಲ್ಲಿ ಜಿಲ್ಲಾಡಳಿತ ಬೆಳಗಾವಿ, ತಾಲೂಕು ಆಡಳಿತ ಚಿಕ್ಕೋಡಿ, ತಾಲೂಕು ಪಂಚಾಯತಿ, ತಾಲೂಕು ಸ್ವೀಪ್‌ ಸಮಿತಿ, ಶಿಕ್ಷಣ ಇಲಾಖೆ, ಪುರಸಭೆ ಸಹಯೋಗದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ -2024 ರ ನಿಮಿತ್ತ ಮತದಾನ ಜಾಗೃತಿಯ ಸ್ವೀಪ್‌ ಚಟುವಟಿಕೆಯ ಕ್ರಿಕೆಟ್‌ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳನ್ನು ಪ್ರಜೆಗಳು ಆಯ್ಕೆ ಮಾಡುವ ಅವಕಾಶ ಇರುವುದರಿಂದ ಪ್ರತಿಯೊಬ್ಬರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂದು ಕೋರಿದರು.ಚಿಕ್ಕೋಡಿ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಚಿಕ್ಕೋಡಿ ವಿಭಾಗಮಟ್ಟದ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಚಿಕ್ಕೋಡಿ, ನಿಪ್ಪಾಣಿ, ಹುಕ್ಕೇರಿ, ರಾಯಬಾಗ, ಕಾಗವಾಡ, ಅಥಣಿ ತಾಲೂಕಿನಿಂದ ತಂಡಗಳು ಭಾಗವಹಿಸಿದ್ದವು. ಚಿಕ್ಕೋಡಿ ತಾಲೂಕಿನ ತಂಡ ಪ್ರಥಮ ಬಹುಮಾನ ಪಡೆದುಕೊಂಡಿತು. ಹುಕ್ಕೇರಿ ತಂಡವು ದ್ವಿತೀಯ ಬಹುಮಾನ ಪಡೆದುಕೊಂಡಿತು. ನಿಪ್ಪಾಣಿ ತಂಡ ತೃತಿಯ ಬಹುಮಾನಕ್ಕೆ ತೃಪ್ತಿಗೊಂಡಿತು.

ಲೆಕ್ಕಾಧಿಕಾರಿಗಳಾದ ಗಂಗಾಹಿರೇಮಠ, ತಹಸೀಲ್ದಾರ್‌ ಚಿದಂಬರ ಕುಲಕರ್ಣಿ ಹಾಗೂ ಸ್ವೀಪ್‌ ಸಮಿತಿ ಅಧ್ಯಕ್ಷರು ಹಾಗೂತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಜಗದೀಶ ಕಮ್ಮಾರ, ಕ್ಷೇತ್ರಶಿಕ್ಷಣಾಧಿಕಾರಿ ಡಿ.ಎನ್‌.ಮಕ್ಕನಮರಡಿ, ಪುರಸಭೆಯ ಮುಖ್ಯಾಧಿಕಾರಿ ಮಹಾಂತೇಶ ನಿಡವಣಿ, ಸಹಾಯಕ ನಿರ್ದೇಶಕರು(ಗ್ರಾಉ) ಶಿವಾನಂದ ಶಿರಗಾಂವೆ, ಸಹಾಯಕ ನಿರ್ದೇಶಕ (ಪಂ.ರಾ) ಎಸ್.ಎಸ್.ಮಠದ, ಡಿ.ಐ.ಇ.ಸಿ ಸಂಯೋಜಕರಾದ ಪ್ರಮೋದ ಗೋಡೆಕರ, ಎಸ್.ಬಿ.ಎಂ ಸಂಯೋಜಕರಾದ ಬಾಹುಬಲಿ ಮಳವಂಕಿ, ಐ.ಇ.ಸಿ ಸಂಯೋಜಕ ರಂಜಿತ ಕಾರ್ಣಿಕ, ಎಂ.ಐ.ಎಸ್‌ ಸಂಯೋಜಕ ಚೇತನ ಶಿರಹಟ್ಟಿ, ಆಡಳಿತ ಸಹಾಯಕ ಅಕ್ಷಯ ಠಕ್ಕಪ್ಪಗೋಳ, ಸ್ವೀಪ್ ಎನ್‌ಆರ್‌ಎಲ್‌ಎಂ ಸೂಪರವೈಸರ್‌ ಬಸವರಾಜ ಉಪಸ್ಥಿತರಿದ್ದರು.

Share this article