ಅದ್ಧೂರಿಯಾಗಿ ನೆರವೇರಿದ ಚೆಲುಮೆ ರುದ್ರಸ್ವಾಮಿ ರಥೋತ್ಸವ । ಸ್ವಾಮಿಯ ಪವಾಡ ಬಗ್ಗೆ ಮಾಹಿತಿ
ಕನ್ನಡಪ್ರಭ ವಾರ್ತೆ ಚಳ್ಳಕೆರೆಚೆಲುಮೆ ರುದ್ರಸ್ವಾಮಿ ಕಳೆದ ಹಲವಾರು ವರ್ಷಗಳಿಂದ ಇಲ್ಲಿ ನೆಲೆಸಿ ಸಾವಿರಾರು ಭಕ್ತರಿಗೆ ಆಶೀರ್ವಾದಿಸಿದ್ದಾರೆ. ಇಂತಹ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುದರಿಂದ ನೆಮ್ಮದಿ ಪ್ರಾಪ್ತಿಯಾಗುತ್ತದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ತಾಲೂಕಿನ ಜಾಜೂರು ಗ್ರಾಪಂ ವ್ಯಾಪ್ತಿಯ ನಾಗಗೊಂಡನಹಳ್ಳಿ ಚೆಲುಮೆರುದ್ರಸ್ವಾಮಿ ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಚೆಲುಮೆರುದ್ರಸ್ವಾಮಿ ದಯದಿಂದ ಈ ಭಾಗದ ಜನರಲ್ಲಿ ಸುಖ, ನೆಮ್ಮದಿ ನೆಲೆಸಿದೆ. ಪ್ರತಿ ವರ್ಷವೂ ಭಕ್ತರು ಶ್ರದ್ದೆಯಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತ ಬಂದಿದ್ಧಾರೆ. ಚಿತ್ರದುರ್ಗ ಬೃಹನ್ಮಮಠದ ಮುರುಘಾರಾಜೇಂದ್ರ ಶರಣರ ಆಡಳಿತದಲ್ಲಿ ಇನ್ನೂ ಅಭಿವೃದ್ಧಿ ಹೊಂದಲಿ ಎಂದರು.ಆಡಳಿತ ಮಂಡಳಿ ಡಾ.ಬಸವಕುಮಾರಸ್ವಾಮಿ ಮಾತನಾಡಿ, ಎಷ್ಟೇ ಕಾರ್ಯ ಒತ್ತಡ ಇರಲಿ ಶಾಸಕ ಟಿ.ರಘುಮೂರ್ತಿ ಚೆಲುವೆರುದ್ರಸ್ವಾಮಿ ಸನ್ನಿಧಿಗೆ ಬಂದು ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ಮಠದ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡುತ್ತಾ ಬಂದಿದ್ಧಾರೆ. ಈ ಸ್ವಾಮಿಯ ಧಯೆಯಿಂದ ಶಾಸಕರು ಸಣ್ಣ ಕೈಗಾರಿಕೆ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿದ್ಧಾರೆ. ಮುಂದಿನ ದಿನಗಳಲ್ಲಿ ಅವರಿಗೆ ರಾಜಕೀಯ ಕ್ಷೇತ್ರದಲ್ಲಿ ಹೆಚ್ಚಿನ ಸ್ಥಾನಮಾನ ಸಿಗುವಂತಾಗಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.
ಮರಳು ಮುಟ್ಟಿ ಪ್ರಸಾದವನ್ನಾಗಿ ಪವಾಡ ಮಾಡುತ್ತಿದ್ದರು:ಚಲುಮೆ ರುದ್ರಸ್ವಾಮಿ ನಾಗಗೊಂಡನಹಳ್ಳಿ ಬಳಿ ಹರಿಯುವ ವೇದಾವತಿ ನದಿಯ ದಂಡೆಯ ಮೇಲೆ ಇರುವ ಈಶ್ವರ ದೇವಾಲಯದಲ್ಲಿ ಪೂಜೆ ಮಾಡುತ್ತಿದ್ದರು. ಇಲ್ಲಿನ ಸುತ್ತ ಮುತ್ತಲಿನ ಜನರು ನದಿ ಬಳಿ ದನಗಳನ್ನು ಮೇಯಿಸಲು ಬರುತ್ತಿದ್ದರಂತೆ. ಆ ಸಮಯದಲ್ಲಿ ಸ್ವಾಮಿಗೆ ಹುಡುಗರು ಹಾಲನ್ನು ನೀಡುತ್ತಿದ್ದರು. ಅದಕ್ಕೆ ಪ್ರತಿಯಾಗಿ ಸ್ವಾಮಿ ತಮ್ಮ ಬೆತ್ತದಿಂದ ಮರಳನ್ನು ಮುಟ್ಟಿ ಪ್ರಸಾದವನ್ನಾಗಿ ಪವಾಡ ಮಾಡುತ್ತಿದ್ದರು. ಅದನ್ನು ದನ ಕಾಯುವ ಹುಡುಗರು ಸೇವಿಸುತ್ತಿದರು ಎನ್ನುವ ಪ್ರತೀತಿ ಇದೆ. ಹೀಗೆ ಪವಾಡ ಮಾಡುತ್ತಿದ್ದ ಚೆಲುಮೆ ಸ್ವಾಮಿಯನ್ನು ಈ ಭಾಗದ ಸುತ್ತು ಮುತ್ತಲಿನ ಹಳ್ಳಿಯ ಜನರು ವಿಶೇಷ ಪೂಜೆ ಸಲ್ಲಿಸಿಸುತ್ತಾರೆ ಎಂದರು.
ಪ್ರತಿ ಮನೆಯಲ್ಲೂ ಚಲ್ಮೇಶ್, ಚಲುಮಪ್ಪ, ಚಲುಮೇರುದ್ರ, ಚಲುಮಕ್ಕ ಹೀಗೆ ಸ್ವಾಮಿಯ ಹೆಸರುಗಳು ಇಟ್ಟಿರುವ ನಿದರ್ಶನಗಳು ಇಂದಿಗೂ ಕಾಣಸಿಗುತ್ತವೆ. ಸ್ವಾಮಿಗೆ ಬೇಯಿಸಿದ ಅನ್ನದ ಬದಲಿ, ಈ ಮೊಳಕೆಕಟ್ಟಿದ ಕಾಳು, ಹಸಿಕಡಲೆ, ಬೆಲ್ಲ, ತೆಂಗಿನಕಾಯಿ, ನೆನೆಸಿದ ಅಕ್ಕಿಯಲ್ಲಿ ಪ್ರಸಾದ ಮಾಡಿ ಜಾತ್ರೆ, ರಥೋತ್ಸವ ಸಂದರ್ಭದಲ್ಲಿ ಭಾಗವಹಿಸುವ ಭಕ್ತರಿಗೆ ವಿತರಿಸುವುದು ಇಂದಿಗೂ ನಡೆದು ಬಂದಿದೆ ಎನ್ನುತ್ತಾರೆ ಹಿರಿಯರು ಎಂದರು.ಬೃಹನ್ಮಮಠಖಾಸಮಠ ಗುರುಮಠಕಲ್‌ನ ಶಾಂತವೀರಗುರು ಮುರುಘರಾಜೇಂದ್ರ ಮಹಾಸ್ವಾಮಿ, ಸಾದರಹಳ್ಳಿ ಸಿದ್ದಲಿಂಗಸ್ವಾಮಿ, ರೈತ ಮುಖಂಡ ಕೆ.ಪಿ.ಭೂತಯ್ಯ, ಓಬಣ್ಣ, ಅಶೋಕ್, ಸಂತೋಷ್, ಮಂಜುನಾಥ್, ರಾಜೇಶ್, ರಾಜಣ್ಣ, ಲೋಕಣ್ಣ, ತಿರುಮಲೇಶ್, ಮಂಜುನಾಥ್, ರಂಜನ್, ಸಂಪತ್‌ಕುಮಾರ್, ಸಣ್ಣೀರನಾಯಕ, ಜೆ.ಎನ್. ಶ್ರೀನಿವಾಸ್, ಹನುಮಂತರಾಯ, ನರಸಿಂಹಪ್ಪ, ರವಿಚಂದ್ರ, ದಳಪತಿ, ಚೆಲುಮಪ್ಪ, ತಿಪ್ಪೇಸ್ವಾಮಿ, ಕೆಂಪೇಗೌಡ, ನಾಗಭೂಷಣ ಇತರರು ಇದ್ದರು.