ಸಂಸ್ಕೃತಿ, ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡಿ: ಶರತ್ ಬಚ್ಚೇಗೌಡ

KannadaprabhaNewsNetwork |  
Published : Dec 24, 2024, 12:48 AM IST
ಫೋಟೋ : 23 ಹೆಚ್‌ಎಸ್‌ಕೆ 1 ಮತ್ತು 21 ಹೊಸಕೋಟೆ ತಾಲೂಕಿನ ಕಸಬಾ ಹೋಬಳಿ ಉಪ್ಪಾರಹಳ್ಳಿ ಮದ್ದೂರಮ್ಮ ದೇವಿ ಜಾತ್ರಾ ಮಹೋತ್ಸವ ಪ್ರಯುಕ್ತ ಉತ್ತಮ ರಾಸುಗಳ ಮಾಲೀಕರಿಗೆ ಬಹುಮಾನಗಳನ್ನು ಶಾಸಕ ಶರತ್ ಬಚ್ಚೇಗೌಡ ವಿತರಿಸಿದರು. | Kannada Prabha

ಸಾರಾಂಶ

ಆಧುನಿಕತೆಯ ಕೊಡಲಿಪೆಟ್ಟು ಕೃಷಿ ಕ್ಷೇತ್ರದ ಮೇಲೆ ವ್ಯಾಪಕವಾಗಿ ಬೀರಿದ್ದು ಕೃಷಿ ಭೂಮಿ ಕಣ್ಮರೆಯಾಗಿ ದೊಡ್ಡ ದೊಡ್ಡ ಕಟ್ಟಡಗಳು ನಿರ್ಮಾಣ ಆಗುತ್ತಿದೆ.

ಕನ್ನಡಪ್ರಭ ವಾರ್ತೆ ಹೊಸಕೋಟೆ ಗ್ರಾಮೀಣ ಭಾಗದ ಸಂಸ್ಕೃತಿ, ಸಂಪ್ರದಾಯ ಪರಂಪರೆಯನ್ನು ಉಳಿಸಿ, ಬೆಳೆಸುವುದರ ಮೂಲಕ ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.ತಾಲೂಕಿನ ಕಸಬಾ ಹೋಬಳಿಯ ಉಪ್ಪಾರಹಳ್ಳಿ ಮದ್ದೂರಮ್ಮ ದೇವಿ ಜಾತ್ರಾ ಮಹೋತ್ಸವದಲ್ಲಿ ಉತ್ತಮ ರಾಸುಗಳ ಮಾಲೀಕರಿಗೆ ಬಹುಮಾನ ವಿತರಿಸಿ ಮಾತನಾಡಿದರು.ಆಧುನಿಕತೆಯ ಕೊಡಲಿಪೆಟ್ಟು ಕೃಷಿ ಕ್ಷೇತ್ರದ ಮೇಲೆ ವ್ಯಾಪಕವಾಗಿ ಬೀರಿದ್ದು ಕೃಷಿ ಭೂಮಿ ಕಣ್ಮರೆಯಾಗಿ ದೊಡ್ಡ ದೊಡ್ಡ ಕಟ್ಟಡಗಳು ನಿರ್ಮಾಣ ಆಗುತ್ತಿದೆ. ಇದರಿಂದ ಕೃಷಿ ಹೈನುಗಾರಿಕೆ ತೆರೆಮರೆಗೆ ಸರಿಯುತ್ತಿದೆ. ಮಧ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೃಷಿಯನ್ನು ಉಪಯೋಗಿಸುವ ದೃಷ್ಟಿಯಿಂದ ಹಲವಾರು ಯೋಜನೆಗಳನ್ನು ಜಾರಿ ಮಾಡಿದೆ. ಹೊಸಕೋಟೆ ತಾಲೂಕಿನ ರೈತರಿಗೆ ₹70 ಲಕ್ಷ ವೆಚ್ಚದಲ್ಲಿ ಟಿಲ್ಲರ್, ರೋಟರ್, ಚಾಪ್ ಕಟ್ಟರ್, ಸೇರಿದಂತೆ ಹಲವಾರು ಸಾಮಾಗ್ರಿ ನೀಡಲಾಗಿದೆ.

ಹೊಸಕೋಟೆ ಭಾಗದಲ್ಲಿ ರಾಗಿ ಬೆಳೆ ವ್ಯಾಪಕವಾಗಿ ಬೆಳೆಯುತ್ತಿದ್ದು, ಕಳೆದ ಕೆಲವು ದಿನಗಳ ಹಿಂದೆ ಬಂದ ಚಂಡಮಾರುತದಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಅದರಿಂದ ಇಷ್ಟೆಲ್ಲಾ ಸವಾಲುಗಳ ನಡುವೆಯೂ ರೈತರು ಕೃಷಿ ಭೂಮಿಯನ್ನು ಉಳಿಸಿಕೊಂಡು ಕೃಷಿ ಹೈನೋದ್ಯಮ ಮಾಡುವ ಮೂಲಕ ನಮ್ಮ ಪೂರ್ವಿಕರ ಆಚರಣೆಗಳನ್ನು ಉಳಿಸಬೇಕು ಎಂದರು.ರಾಜ್ಯ ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕ ಬಿ.ಎನ್. ಗೋಪಾಲಗೌಡ ಮಾತನಾಡಿ, ನಗರೀಕರಣ ಪರಿಣಾಮವಾಗಿ ರೈತರು ಕೃಷಿ, ಹೈನುಗಾರಿಕೆಯಿಂದ ವಿಮುಖರಾಗುತ್ತಿದ್ದು, ದನಗಳ ಜಾತ್ರೆ ಈಗ ಜನಗಳ ಜಾತ್ರೆ ಆಗುತ್ತಿದೆ. ಮನುಷ್ಯನ ಜೀವನ ಇಂದು ಯಾಂತ್ರಿಕ ಜೀವನ ಆಗುತ್ತಿದೆ. ಅಲ್ಪಸ್ವಲ್ಪ ಕೃಷಿ ಮಾಡುವ ರೈತರಿಗೆ ಕೂಲಿ ಕಾರ್ಮಿಕರೇ ಸಿಗುತ್ತಿಲ್ಲ. ಪರಿಣಾಮವಾಗಿ ಯಂತ್ರಗಳ ಮೊರೆ ಹೋಗಬೇಕಿದೆ. ಆದ್ದರಿಂದ ಸಾವಿರಾರು ಸಂಖ್ಯೆಯಲ್ಲಿ ದನಗಳನ್ನು ಸೇರಿಸಿ ಜಾತ್ರೆ ಮಾಡಲು ಕೃಷಿ ಹೈನೋದ್ಯಮ ಹೆಚ್ಚಾಗಬೇಕು ಎಂದರು.ತಾಪಂ ಕಾರ್ಯನಿರ್ವಹಣಾಧಿಕಾರಿ ನಾರಾಯಣಸ್ವಾಮಿ, ಜಾತ್ರಾ ಆಚರಣೆ ಸಮಿತಿ ಅಧ್ಯಕ್ಷ ಸಿ. ಮುನಿಯಪ್ಪ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಪೂಜೇನ ಅಗ್ರಹಾರ ಕೃಷ್ಣಮೂರ್ತಿ, ಬಮುಲ್ ನಿರ್ದೇಶಕ ಎಲ್‌ಎನ್‌ಟಿ ಮಂಜುನಾಥ್, ಬಿಎಂಆರ್‌ಡಿಎ ಸದಸ್ಯ ಡಾ.ಎಚ್.ಎಂ. ಸುಬ್ಬರಾಜು, ಕೊರಳೂರು ಸುರೇಶ್, ಅನುಗೊಂಡನಹಳ್ಳಿ ಕಾಂಗ್ರೆಸ್ ಮುಖಂಡ ಭೋಧನ ಹೊಸಹಳ್ಳಿ ಪ್ರಕಾಶ್, ತಾಪಂ ಮಾಜಿ ಸದಸ್ಯ ಡಿ.ಟಿ. ವೆಂಕಟೇಶ್, ಗ್ರಾಪಂ ಅಧ್ಯಕ್ಷೆ ಬಿಂದು, ಪಿಡಿಓ ಚೇತನ್ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.ಫೋಟೋ : 23 ಹೆಚ್‌ಎಸ್‌ಕೆ 1 ಮತ್ತು 21 ಹೊಸಕೋಟೆ ತಾಲೂಕಿನ ಕಸಬಾ ಹೋಬಳಿ ಉಪ್ಪಾರಹಳ್ಳಿ ಮದ್ದೂರಮ್ಮ ದೇವಿ ಜಾತ್ರಾ ಮಹೋತ್ಸವ ಪ್ರಯುಕ್ತ ಉತ್ತಮ ರಾಸುಗಳ ಮಾಲೀಕರಿಗೆ ಬಹುಮಾನಗಳನ್ನು ಶಾಸಕ ಶರತ್ ಬಚ್ಚೇಗೌಡ ವಿತರಿಸಿದರು.2 ಹೊಸಕೋಟೆ ತಾಲೂಕಿನ ಉಪ್ಪಾರಹಳ್ಳಿ ದನಗಳ ಜಾತ್ರೆ ಪ್ರಯುಕ್ತ ನಡೆದ ಮಕ್ಕಳ ಸಂತೆಯಲ್ಲಿ ಶಾಸಕ ಶರತ್ ಬಚ್ಚೇಗೌಡ ಮಕ್ಕಳೊಂದಿಗೆ ಮಾತುಕತೆ ನಡೆಸಿ ವಿವಿಧ ವಸ್ತುಗಳನ್ನು ಖರೀದಿ ಮಾಡಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ