ಐತಿಹಾಸಿಕ ಪರಂಪರೆ ಮುಂದಿನ ಪೀಳಿಗೆಗೂ ತಲುಪಿಸಿ-ತಹಸೀಲ್ದಾರ್‌ ರೇಣುಕಾ

KannadaprabhaNewsNetwork |  
Published : Oct 07, 2024, 01:39 AM IST
ಫೊಟೊ : 4ಎಚ್‌ಎನ್‌ಎಲ್1 ಹಾನಗಲ್ಲಿನಲ್ಲಿ ನಾಡಹಬ್ಬ ಉತ್ಸವ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾಡದೇವಿ ಭುವನೇಶ್ವರಿದೇವಿ ಪ್ರತಿಷ್ಠಾಪನೆಯನ್ನು ತಹಸೀಲ್ದಾರ ಎಸ್.ರೇಣುಕಾ ನೆರವೇರಿಸಿದರು. ಮಮತಾ ಆರೇಗೊಪ್ಪ, ವೀಣಾ ಗುಡಿ, ವೈ.ಕೆ.ಜಗದೀಶ, ಉದಯ ನಾಸಿಕ, ಕೆ.ಎಲ್.ದೇಶಪಾಂಡೆ, ಮಂಜಣ್ಣ ನಾಗಜ್ಜನವರ, ನಾಗಪ್ಪ ಸವದತ್ತಿ ಇದ್ದರು.   | Kannada Prabha

ಸಾರಾಂಶ

ನಮ್ಮ ಐತಿಹಾಸಿಕ ಪರಂಪರೆ ಹಾಗೂ ಸಂಪ್ರದಾಯಗಳನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೂ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನಾಡಹಬ್ಬವನ್ನು ನಮ್ಮ ಧಾರ್ಮಿಕ ಹಾಗೂ ಸಂಸ್ಕೃತಿಯ ಆಚರಣೆಗಾಗಿ ಅರ್ಥಪೂರ್ಣವಾಗಿ ಆಚರಿಸುವಂತಾಗಬೇಕು ಎಂದು ತಹಸೀಲ್ದಾರ್ ಎಸ್. ರೇಣುಕಾ ಕರೆ ನೀಡಿದರು.

ಹಾನಗಲ್ಲ: ನಮ್ಮ ಐತಿಹಾಸಿಕ ಪರಂಪರೆ ಹಾಗೂ ಸಂಪ್ರದಾಯಗಳನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೂ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನಾಡಹಬ್ಬವನ್ನು ನಮ್ಮ ಧಾರ್ಮಿಕ ಹಾಗೂ ಸಂಸ್ಕೃತಿಯ ಆಚರಣೆಗಾಗಿ ಅರ್ಥಪೂರ್ಣವಾಗಿ ಆಚರಿಸುವಂತಾಗಬೇಕು ಎಂದು ತಹಸೀಲ್ದಾರ್ ಎಸ್. ರೇಣುಕಾ ಕರೆ ನೀಡಿದರು.ಪಟ್ಟಣದ ಫ್ರೆಂಡ್ಸ ಅಸೋಸಿಯೇಶನ್ ಸಭಾಭವನದಲ್ಲಿ ನಾಡಹಬ್ಬ ಉತ್ಸವ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ನಾಡದೇವಿ ಭುವನೇಶ್ವರಿ ಪ್ರತಿಷ್ಠಾಪನೆ ನೆರವೇರಿಸಿ ಅವರು ಮಾತನಾಡಿದರು. ಹಾನಗಲ್ಲಿಗೆ ಪಾರಂಪರಿಕ ಇತಿಹಾಸವಿದೆ. ಇಲ್ಲಿ ಕುಮಾರ ಶಿವಯೋಗಿಗಳಂಥ ಸಂತ ಮಹಾಂತರು ನಡೆದಾಡಿದ್ದಾರೆ. ಹಾನಗಲ್ಲು ಪಾಂಡವರ ಅಜ್ಞಾತವಾಸದ ಇತಿಹಾಸವನ್ನೂ ಹೊಂದಿದೆ. ಸಂಸ್ಕೃತ ಶಾಸ್ತ್ರ ಪಂಡಿತರು, ವಿದ್ವಾಂಸರು ಬದುಕಿದ ಭೂಮಿ ಇದಾಗಿದೆ. ಇಲ್ಲಿನ ನಾಡಹಬ್ಬಕ್ಕೆ 87 ವರ್ಷಗಳ ಇತಿಹಾಸವಿರುವುದು ನಮ್ಮ ಹೆಮ್ಮೆಯಾಗಿದೆ. ನಾಡದೇವಿ ನಮ್ಮೆಲ್ಲರಲ್ಲಿ ಸೌಹಾರ್ದತೆ, ಒಗ್ಗಟ್ಟು, ಸಾಮರಸ್ಯ ಮೂಡಿಸಿ ಎಲ್ಲರೂ ಒಟ್ಟಾಗಿ ಬದುಕುವಂಥ ವಾತಾವರಣ ಕರುಣಿಸಲಿ ಎಂದು ಪ್ರಾರ್ಥಿಸೋಣ ಎಂದರು.ಪುರಸಭೆ ಅಧ್ಯಕ್ಷೆ ಮಮತಾ ಆರೇಗೊಪ್ಪ ಮಾತನಾಡಿ, ರಾಜ್ಯದಲ್ಲಿ ಮೈಸೂರು ದಸರಾ ನಂತರ ಹಾನಗಲ್ಲ ನಾಡುಹಬ್ಬ ಎಂದು ಈ ಮೊದಲು ಹೆಸರುವಾಸಿಯಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಧಾರ್ಮಿಕ ಮತ್ತು ಸಂಪ್ರದಾಯಿಕವಾಗಿ ಮಾತ್ರ ಆಚರಿಸುವಂತಾಗಿದೆ. ನಮ್ಮ ನಾಡಹಬ್ಬ ಮತ್ತೆ ಮೊದಲಿನಂತೆ ಅರ್ಥಪೂರ್ಣವಾಗಿ, ಹೊಸತನವನ್ನು ಮೈಗೂಡಿಸಿಕೊಂಡು ಹೊರಹೊಮ್ಮಬೇಕು. ಇದಕ್ಕಾಗಿ ಎಲ್ಲರೂ ಪಕ್ಷ, ಜಾತಿ, ಅಧಿಕಾರ ಎಲ್ಲವನ್ನೂ ಮರೆತು ಕೈಜೋಡಿಸಬೇಕು. ನವರಾತ್ರಿಯಂಥ ಹಬ್ಬದ ಆಚರಣೆಗಳನ್ನು ನಮ್ಮ ಮಕ್ಕಳವರೆಗೆ ಕೊಂಡೊಯ್ಯದಿದ್ದರೆ ಹಬ್ಬಗಳು ನಶಿಸಿ ಹೋಗುವ ಆತಂಕವಿದೆ. ಇದು ಹಿರಿಯರ ಜವಾಬ್ದಾರಿಯೂ ಹೌದು. ನಿತ್ಯ ಬದುಕಿನ ಜಂಜಾಟಗಳ ಮಧ್ಯೆಯೂ ಹಬ್ಬಗಳ ಅಗತ್ಯತೆಯನ್ನು ತಿಳಿಸಿಕೊಡಬೇಕು ಎಂದರು.ಪುರಸಭೆ ಉಪಾಧ್ಯಕ್ಷೆ ವೀಣಾ ಗುಡಿ, ಮುಖ್ಯಾಧಿಕಾರಿ ವೈ.ಕೆ. ಜಗದೀಶ, ಉದಯ ನಾಸಿಕ, ಕೆ.ಎಲ್. ದೇಶಪಾಂಡೆ ಮಾತನಾಡಿದರು. ಮಂಜಣ್ಣ ನಾಗಜ್ಜನವರ, ಪುರಸಭೆ ಮಾಜಿ ಅಧ್ಯಕ್ಷ ನಾಗಪ್ಪ ಸವದತ್ತಿ, ರವಿಚಂದ್ರ ಪುರೋಹಿತ, ಶಿವಯೋಗಿ ಅರಳೇಲಿಮಠ, ಕೃಷ್ಣಾ ಪೂಜಾರ, ಪ್ರೊ.ಸಿ. ಮಂಜುನಾಥ, ಸೋಮಶೇಖರ ಕೋತಂಬರಿ, ಮನೋಜ ಕಲಾಲ, ಅಶೋಕ ಆರೇಗೊಪ್ಪ, ರಾಜೇಶ ಗುಡಿ, ಪ್ರಶಾಂತ ಮುಚ್ಚಂಡಿ, ಶರಶ್ಚಂದ್ರ ದೇಸಾಯಿ, ಎಂ.ಎಲ್.ಕಾಮನಹಳ್ಳಿ, ಪ್ರಶಾಂತ ಪೂಜಾರ, ಡಿ.ಜಿ.ಕುಲಕರ್ಣಿ, ಸಂಜು ಬೇದ್ರೆ, ಸುಧಾಬಾಯಿ ದೇಶಪಾಂಡೆ, ಸುರೇಖಾ ಕುಲಕರ್ಣಿ ಉಪಸ್ಥಿತರಿದ್ದರು. ಗಿರೀಶ ದೇಶಪಾಂಡೆ, ರವಿ ಪೋತದಾರ ಕಾರ್ಯಕ್ರಮ ನಿರ್ವಹಿಸಿದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...