ದೇಶದ ಏಕತೆ, ಸಮಗ್ರತೆಗೆ ಪಟೇಲರ ಕೊಡುಗೆ ಅಪಾರ: ಕಾಗೇರಿ

KannadaprabhaNewsNetwork |  
Published : Nov 07, 2025, 02:45 AM IST
6ಎಚ್.ಎಲ್.ವೈ-1: ಗುರುವಾರ ಹಳಿಯಾಳ ಪಟ್ಟಣದಲ್ಲಿ ನಡೆದ ಏಕತಾ ನಡಿಗೆಯಲ್ಲಿ ಕೆನರಾ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಜಿ ಶಾಸಕ ಸುನೀಲ ಹೆಗಡೆ ಹಾಗೂ ಪಕ್ಷದ ಪ್ರಮುಖರು ಹೆಜ್ಜೆ ಹಾಕಿದರು. | Kannada Prabha

ಸಾರಾಂಶ

ನಮ್ಮ ದೇಶದ ಏಕತೆ ಹಾಗೂ ಸಮಗ್ರತೆಗೆ ಸರ್ದಾರ ಪಟೇಲರ ಕೊಡುಗೆಯು ಅಪಾರವಾಗಿದೆ. ಆಖಂಡ ಭಾರತದ ಕನಸನ್ನು ಹೊತ್ತಿದ್ದ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರು ಜೀವನ ರಾಷ್ಟ್ರಭಕ್ತಿಯು ನಮಗೆಲ್ಲಾ ಆದರ್ಶಮಯವಾಗಬೇಕು.

ಹಳಿಯಾಳದಲ್ಲಿ ನಡೆದ ಏಕತಾ ನಡಿಗೆಯಲ್ಲಿ ಉತ್ಸಾಹದ ಹೆಜ್ಜೆ ಹಾಕಿದ ಸಾವಿರಾರು ಜನಕನ್ನಡಪ್ರಭ ವಾರ್ತೆ ಹಳಿಯಾಳ

ನಮ್ಮ ದೇಶದ ಏಕತೆ ಹಾಗೂ ಸಮಗ್ರತೆಗೆ ಸರ್ದಾರ ಪಟೇಲರ ಕೊಡುಗೆಯು ಅಪಾರವಾಗಿದೆ. ಆಖಂಡ ಭಾರತದ ಕನಸನ್ನು ಹೊತ್ತಿದ್ದ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರು ಜೀವನ ರಾಷ್ಟ್ರಭಕ್ತಿಯು ನಮಗೆಲ್ಲಾ ಆದರ್ಶಮಯವಾಗಲಿ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕರೆ ನೀಡಿದರು.

ಗುರುವಾರ ಪಟ್ಟಣದ ಶಿವಾಜಿ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಏಕತಾ ನಡಿಗೆ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಏಕ ಭಾರತ ಶ್ರೇಷ್ಠ ಭಾರತ:

ಸರ್ದಾರ ಪಟೇಲರ ಜನ್ಮದಿನವನ್ನು ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ರಾಷ್ಟ್ರೀಯ ಏಕತಾ ದಿನವೆಂದು ಆಚರಿಸುತ್ತಿದ್ದೆವೆ, ಈ ವರ್ಷ 150ನೇ ಜನ್ಮದಿನಾಚರಣೆಯಾಗಿರುವುದರಿಂದ ದೇಶದೆಲ್ಲೆಡೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ರಾಷ್ಟ್ರಭಕ್ತಿಯನ್ನು ಉತ್ತೇಜಿಸುವುದು ನಮ್ಮ ಉದ್ದೇಶವಾಗಿದೆ ಎಂದರು. ಏಕತಾ ನಡಿಗೆಯ ಉದ್ದೇಶ ತಿಳಿಹೇಳಿದ ಅವರು ದೇಶದ ಏಕತೆಯಲ್ಲಿ ಯುವಕರು ಪ್ರಮುಖ ಪಾತ್ರ ವಹಿಸಬೇಕು ಎಂದು ಅವರು ಸ್ವದೇಶಿ ವಸ್ತುಗಳ ಬಳಕೆ ಆತ್ಮನಿರ್ಭರ ಭಾರತದ ಬಗ್ಗೆ ಯುವಸಮೂಹಕ್ಕೆ ಕಿವಿಮಾತುಗಳನ್ನು ಹೇಳಿದ ಅವರು ಪಟೇಲರು ಕಂಡ ಏಕ ಭಾರತ ಶ್ರೇಷ್ಠ ಭಾರತ ಕನಸು ಕಲ್ಪನೆಯನ್ನು ಸಾಕಾರಗೊಳಿಸುವ ಜವಾಬ್ದಾರಿ ಎಲ್ಲರದ್ದಾಗಿದೆ ಎಂದರು.

ಮಾಜಿ ಶಾಸಕ ಸುನೀಲ ಹೆಗಡೆ, ವಿಪ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾಜಿ ನರಸಾನಿ, ತಹಸೀಲ್ದಾರ ಫಿರೋಜಷಾ ಸೋಮನಕಟ್ಟಿ, ಹಾಗೂ ಬಿಜೆಪಿ ಮುಖಂಡರು ಇದ್ದರು.

ಪಟ್ಟಣದಲ್ಲಿ ಏಕತಾ ನಡಿಗೆ:

ಸಭಾ ಕಾರ್ಯಕ್ರಮದ ನಂತರ ಪಟ್ಟಣದ ಮುಖ್ಯ ರಸ್ತೆ ಬೀದಿಯಲ್ಲಿ ಏಕತಾ ನಡಿಗೆ ನಡೆಯಿತು. ಬಸವೇಶ್ವರ ವೃತದ ಮೂಲಕ, ಬಸ್ ಸ್ಟ್ಯಾಂಡ್ ರಸ್ತೆ, ಮೇದಾರ ಗಲ್ಲಿ ಕ್ರಾಸದಿಂದ ಸಂಗೋಳ್ಳಿ ರಾಯಣ್ಣ ವೃತ್ತದ ಮೂಲಕ ಮುಖ್ಯ ಮಾರುಕಟ್ಟೆಯ ರಸ್ತೆಯ ಮೂಲಕ ಶಿವಾಜಿ ವೃತಕ್ಕೆ ತೆರಳಿ ಅಲ್ಲಿಂದ ತಾಲೂಕಾಡಳಿತ ಸೌಧದ ಆವರಣದಲ್ಲಿ ಮುಕ್ತಾಯಗೊಂಡಿತು. ಮುಗಿಲು ಮುಟ್ಟುವ ರಾಷ್ಟ್ರಭಕ್ತಿಯ ಘೋಷಣೆಗಳು, ವಾದ್ಯಮೇಳಗಳ ನಿನಾದಗಳು ಮೆರಗನ್ನು ತಂದರೇ, ನೂರಾರು ಜನರು ಪಟ್ಟಣದ ವಿವಿಧ ಕಾಲೇಜುಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು ಬಿಜೆಪಿ ಕಾರ್ಯಕರ್ತರು ಏಕತಾ ನಡಿಗೆಯಲ್ಲಿ ಹೆಜ್ಜೆ ಹಾಕಿದರು.

ಬಿಜೆಪಿ ಮಂಡಲ ಅಧ್ಯಕ್ಷ ವಿಠ್ಠಲ ಸಿದ್ದಣ್ಣನವರ, ಪ್ರಮುಖರಾದ ಶ್ರೀನಿವಾಸ ಘೋಟ್ನೇಕರ, ಅನಿಲ ಮುತ್ನಾಳೆ, ಗಣಪತಿ ಕರಂಜೇಕರ, ವಿ.ಎಂ. ಪಾಟೀಲ, ಸಂತೋಷ ಘಟಕಾಂಬ್ಳೆ, ಹರಿದಾಸ ಬೊಬ್ಲಿ, ಜಿಲ್ಲಾ ಪದಾಧಿಕಾರಿಗಳು, ಮೋರ್ಚಾ ಪದಾಧಿಕಾರಿಗಳು, ಶಕ್ತಿ ಕೇಂದ್ರದ ಪ್ರಮುಖರು, ಪುರಸಭೆ ಮತ್ತು ಗ್ರಾಪಂ ಸದಸ್ಯರು ಹಾಗೂ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ
ರಾಗಾ-ವೈಷ್ಣವ್‌ ಉದ್ಯೋಗ ಸೃಷ್ಟಿ ‘ಕ್ರೆಡಿಟ್‌ ವಾರ್’