ಕನ್ನಡಪ್ರಭ ವಾರ್ತೆ ರಾಯಚೂರು
ಶರತ್ ಚಂದ್ರರ ‘ಪಥೇರ ದಾಬಿ’ ಕೇವಲ ಒಂದು ಕಥೆಯಲ್ಲ, ಅಂದು ಬ್ರಿಟಿಷರ ಎದೆ ನಡುಗಿಸಿ,ಕ್ರಾಂತಿಯ ಕಿಚ್ಚು ಹೊತ್ತಿಸಿದ ದೇಶಪ್ರೇಮದ ದಾರಿದೀಪ. ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಹೋರಾಡಲು ನಿಷ್ಕಲ್ಮಶ ದೇಶಪ್ರೇಮ ಎಷ್ಟು ಮುಖ್ಯ ಎಂಬುದನ್ನು ಈ ಕೃತಿ ಸಾರುತ್ತದೆ. ಸಮಾಜದಲ್ಲಿ ಬೇರೂರಿರುವ ಮೂಢನಂಬಿಕೆಗಳು, ಜಾತಿಪದ್ಧತಿ ಮತ್ತು ಗುಲಾಮಗಿರಿಯನ್ನು ದಿಟ್ಟತನದಿಂದ ವಿರೋಧಿಸುವ ಸ್ವಾಭಿಮಾನವನ್ನು ಕಲಿಸಿಕೊಡುವ ಈ ಕಾದಂಬರಿ ಈಗಲೂ ನಮಗೆ ಪ್ರಸ್ತುತ. ಇಂತಹ ಸಂದರ್ಭದಲ್ಲಿ ಇದರಲ್ಲಿನ ಕ್ರಾಂತಿಕಾರಿ ಅಂಶಗಳನ್ನು ಮೈ ಗೂಡಿಸಿಕೊಳ್ಳುವುದು ನಮ್ಮ ಮುಂದಿರುವ ತುರ್ತು ಅಗತ್ಯ ಎಂದರು.
ಗೋಷ್ಠಿಯ ಅಧ್ಯಕ್ಷತೆಯನ್ನು ಎಐಡಿಎಸ್ಒ ರಾಜ್ಯ ಉಪಾಧ್ಯಕ್ಷರಲ್ಲಿ ಒಬ್ಬರಾದ ಅಪೂರ್ವ ಅವರು ವಹಿಸಿದ್ದರು. ಎಸ್‌ಯುಸಿಐ(ಸಿ) ರಾಜ್ಯ ಕಾರ್ಯದರ್ಶಿ ಕೆ. ಉಮಾ, ಎಐಡಿಎಸ್ಒ ಅಖಿಲ ಭಾರತ ಮಾಜಿ ಅಧ್ಯಕ್ಷ ವಿ. ಎನ್ ರಾಜಶೇಖರ್, ರಾಜ್ಯ ಅಧ್ಯಕ್ಷ ಅಶ್ವಿನಿ ಕೆ ಎಸ್, ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್, ರಾಜ್ಯ ಉಪಾಧ್ಯಕ್ಷರುಗಳಾದ ಹಣಮಂತ ಎಸ್ ಎಚ್, ಅಭಯ ದಿವಾಕರ್, ಅಪೂರ್ವ, ರಾಜ್ಯ ಖಜಾಂಚಿ ಸುಭಾಷ್ ಬೆಟ್ಟದಕೊಪ್ಪ, ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕಲ್ಯಾಣ್ ಕುಮಾರ್, ವಿನಯ ಚಂದ್ರ ರವರು ವೇದಿಕೆ ಮೇಲಿದ್ದರು. ರಾಜ್ಯದ ಮೂಲೆ - ಮೂಲೆಗಳಿಂದ ಬಂದ ಇಡೀ ರಾಜ್ಯದ ನೂರಾರು ಎಐಡಿಎಸ್ಒ ವಿದ್ಯಾರ್ಥಿ ಕಾರ್ಯಕರ್ತರು ಈ ಶಿಬಿರದಲ್ಲಿ ಪಾಲ್ಗೊಂಡಿದ್ದರು.