ದೇಶಭಕ್ತಿ, ಸ್ವಾತಂತ್ರ್ಯದ ಕಿಚ್ಚು ಚೆನ್ನಮ್ಮ

KannadaprabhaNewsNetwork |  
Published : Oct 24, 2025, 01:00 AM IST
ಹೂವಿನಹಡಗಲಿಯ ತಾಲೂಕ ಕಚೇರಿಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ ಜಯಂತಿ ಆಚರಿಸಲಾಯಿತು.  | Kannada Prabha

ಸಾರಾಂಶ

ಸ್ವಾತಂತ್ರ್ಯದ ಕಿಚ್ಚು ಸ್ವಾಭಿಮಾನದ ಸಂಕೇತವಾಗಿರುವ ವೀರಮಾತೆಯ ಸಾಧನೆ ಮತ್ತು ಹೋರಾಟದ ಬದುಕು ಎಲ್ಲರಿಗೂ ಮಾದರಿಯಾಗಿದೆ

ಹೂವಿನಹಡಗಲಿ: ಸ್ವಾತಂತ್ರ್ಯದ ಬೆಳ್ಳಿ ಚುಕ್ಕಿ ಎಂದು ಕರೆಯಲ್ಪಡುವ ಕಿತ್ತೂರು ರಾಣಿ ಚೆನ್ನಮ್ಮನ ದೇಶ ಭಕ್ತಿ, ಸ್ವಾತಂತ್ರ್ಯದ ಕಿಚ್ಚು ಸ್ವಾಭಿಮಾನದ ಸಂಕೇತವಾಗಿರುವ ವೀರಮಾತೆಯ ಸಾಧನೆ ಮತ್ತು ಹೋರಾಟದ ಬದುಕು ಎಲ್ಲರಿಗೂ ಮಾದರಿಯಾಗಿದೆ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಕೊಟ್ರಗೌಡ ಹೇಳಿದರು.

ಇಲ್ಲಿನ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮನ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಮ್ಮ ಮಕ್ಕಳಿಗೆ ಕಿತ್ತೂರು ರಾಣಿ ಚೆನ್ನಮ್ಮನ ಬದುಕು ಮತ್ತು ಹೋರಾಟ ಹಾದಿಯನ್ನು ಇತಿಹಾಸವನ್ನು ತಿಳಿಸುವ ಪ್ರಯತ್ನ ಮಾಡಬೇಕಿದೆ. ಸ್ವಾಭಿಮಾನ ಸಂಕೇತವಾಗಿರುವ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ವೀರ ಮಹಿಳೆಯಾಗಿದ್ದಾಳೆ. ಕೇವಲ ಜಯಂತಿ ಆಚರಣೆ ಮಾಡಿದರೆ ಸಾಲದು ಅವರ ತತ್ವಾದರ್ಶಗಳನ್ನು ಅರಿತು ನಡೆಯಬೇಕಿದೆ ಎಂದರು.

ಪುನೀತ್‌ ದೊಡ್ಮನಿ ಮಾತನಾಡಿ, ಚೆನ್ನಮ್ಮನ ಹೋರಾಟದ ಕಿಚ್ಚಿಗೆ ಬ್ರಿಟಿಷರು ಧೂಳೀಪಟವಾಗಿದ್ದರು, ಆದರೆ ನಮ್ಮ ದೇಶದವರೆ ಬ್ರಿಟಿಷರ ಜತೆಗೆ ಕೈ ಜೋಡಿಸಿ ಚೆನ್ನಮ್ಮನನ್ನು ಬ್ರಿಟಿಷರ ಮುಂದೆ ಮಂಡಿಯೂರುವಂತೆ ಮಾಡಿದ್ದು ದುರದುಷ್ಟಕರ ಸಂಗತಿ ಎಂದರು.

ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ತಾಲೂಕ ಅಧ್ಯಕ್ಷ ಕೆ.ಎಸ್‌.ಶಾಂತನಗೌಡ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರೇಡ್‌-2 ತಹಸೀಲ್ದಾರ್‌ ಸಲೀಂ ಮಾತನಾಡಿದರು.

ಕಿತ್ತೂರು ರಾಣಿ ಚೆನ್ನಮ್ಮ ಟ್ರಸ್ಟ್‌ ಅಧ್ಯಕ್ಷ ಸೊಪ್ಪಿನ ವೀರಣ್ಣ, ಕೋಡಿಹಳ್ಳಿ ಮುದುಕಪ್ಪ, ಪರಶೆಟ್ಟಿ ಕೇಶಪ್ಪ, ಓಲಿ ಈಶಪ್ಪ, ಬೀರಬ್ಬಿ ಬಸವರಾಜ, ಚಂದ್ರಪ್ಪ, ಬೆನ್ನೂರು ರುದ್ರಪ್ಪ, ಗಡಗಿ ಕೃಷ್ಣ, ಬಾವಿಮನಿ ಕೊಟ್ರೇಶ, ಕಣದಾಳ ಶಂಕ್ರಪ್ಪ, ಪರಮೇಶ್ವರಗೌಡ, ಬಿ.ಬಿ. ಅಸುಂಡಿ, ಕೆ.ಪತ್ರೇಶ, ಲೋಕಪ್ಪ ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಕಿತ್ತೂರು ರಾಣಿ ಚೆನ್ನಮ್ಮನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು