ಕನ್ನಡಪ್ರಭ ವಾರ್ತೆ ಮೈಸೂರು
ಕಲಾಮಂದಿರಲ್ಲಿ ಸಾವರ್ಕರ್ ಪ್ರತಿಷ್ಠಾನ ಮೈಸೂರು ವತಿಯಿಂದ ಹಮ್ಮಿಕೊಂಡಿದ್ದ 142 ನೇ ಸಾವರ್ಕರ್ ಜಯಂತಿ ಪ್ರಯುಕ್ತ ವೀರ ಸಾವರ್ಕರ್ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಬಾಲ್ಯದಲ್ಲಿಯೇ ಬಾಲಗಂಗಾಧರ ತಿಲಕ್ ಅವರ ಪ್ರೇರಣೆಯಿಂದ ಸ್ವಾತಂತ್ರ್ಯ ಹೋರಾಟದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಸಾವರ್ಕರ್ ಅವರು, ತಮ್ಮ ಕ್ರಾಂತಿಕಾರಿ ಹೋರಾಟದ ಮೂಲಕ ಬ್ರಿಟಿಷರನ್ನು ದೇಶದಿಂದ ತೊಲಗಿಸಲು ಮಾಡಿದ್ದ ಸಂಕಲ್ಪ ಸದಾ ಸ್ಫೂರ್ತಿಯಾಗಿದೆ. ಹಿಂದುತ್ವವನ್ನು ಮನುಕುಲದ ಸ್ಫೂರ್ತಿ ಮತ್ತು ಚೈತನ್ಯದ ಸೆಲೆಯಾಗಿ ಗುರುತಿಸುವ ಸಾವರ್ಕರ್ ಹಿಂದುತ್ವದಿಂದಲೇ ಹಿಂದುಸ್ಥಾನ ಉಳಿದಿದೆ ಎನ್ನುತ್ತಾರೆ. ಅವರಿಗೆ ಹಿಂದುತ್ವ ಒಂದು ಪದವಲ್ಲ. ಅದು ಇತಿಹಾಸ. ಇಸ್ಲಾಂನ ಖಡ್ಗದ ಹೊಡೆತದಿಂದ ಜಗತ್ತಿನ ಅನೇಕ ರಾಷ್ಟ್ರಗಳು ರಾಷ್ಟ್ರಗಳಾಗಿಯೇ ಉಳಿಯಲಿಲ್ಲ. ಆದರೆ ಭಾರತ ಉಳಿದಿದ್ದರೆ ಹಿಂದುತ್ವವೇ ಈ ದೇಶದ ಆತ್ಮ ಎಂದರು.60 ರಿಂದ 65 ವರ್ಷ ದೇಶಕೋಸ್ಕರ ಪ್ರತಿಯೊಂದು ಹನಿ ರಕ್ತವನ್ನು ವೀರ ಸಾವರ್ಕರ್ ಹರಿಸಿದ್ದಾರೆ. ಭಾರತ ಸರ್ಕಾರ ಸಾವರ್ಕರ್ ಅವರ ಸೇವೆ ಪಡೆಯಬೇಕಿತ್ತು. ರಾಜಗುರು- ಭಗತ್ ಸಿಂಗ್ ಮುಂತಾದ ಕ್ರಾಂತಿ ಕಾರಿಗಳ ಬಗ್ಗೆ ಸುಳ್ಳು ಇತಿಹಾಸ ಬರೆಯಲಾಗಿದೆ. ಸಾವರ್ಕರ್ ಅವರನ್ನು ವೀರ್ ಎಂದು ಮೊದಲ ಬಾರಿಗೆ ಭಗತ್‌ಸಿಂಗ್ ಬಲವಂತ್ ಹಿಂದಿ ಪತ್ರಿಕೆಯಲ್ಲಿ ಬರೆಯುತ್ತಾರೆ. 1901 ರಲ್ಲಿ ಸಾವರ್ಕರ್ ಮಿತ್ರ ಮಂಡಳಿ ಸೊಸೈಟಿ ಆರಂಭಿಸಿದರು. ಯುವಕರನ್ನು ಬಡಿದೆಬ್ಬಸಿದ್ದಾಗಿ ಅವರು ಹೇಳಿದರು.
ನೆಹರು ತೀರಿ ಹೋಗಿದ್ದಾರೆ ಎಂದು ಸಾವರ್ಕರ್ ಜನ್ಮದಿನ ಮಾಡಲಿಲ್ಲ. ಅಲ್ಲದೆ ಅವರು ತೀರಕೊಂಡಾಗ ಯಾವುದೇ ಸಂಸ್ಕಾರ ಮಾಡಬೇಡಿ ಅಂದಿದ್ದರು. ದೇಶದ ಭಕ್ತರು ಸಾವರ್ಕರ್ ಅವರ ವಿಚಾರಗಳನ್ನು ಮನೆ ಮನೆಗೆ ತಲುಪಿಸಬೇಕು. ಸಾವರ್ಕರ್ ಹಿಂದುತ್ವಕ್ಕೆ ಬೆಂಬಲ ನೀಡಬೇಕು. ಹಿಂದೂಗಳು ಬಹುಸಂಖ್ಯಾತರಾದರೆ ಸಂವಿಧಾನ ಬೆಲೆ ಬರುತ್ತದೆ ಎಂದರು.