ಪಾವಗಡ: ಕರುವನ್ನು ಹೊತ್ತೊಯ್ದ ಚಿರತೆ

KannadaprabhaNewsNetwork |  
Published : Jan 18, 2024, 02:04 AM IST
ಫೋಟೋ 17ಪಿವಿಡಿ1ಪಾವಗಡ,ತಾ,ಮಂಗಳವಾಡ ಗ್ರಾಮದಲ್ಲಿ ರೈತ ದೊಡ್ಡಣ್ಣನಿಗೆ ಸೇರಿದ್ದ  ಕೊಟ್ಟಿಗೆಯೊಂದಕ್ಕೆ ನುಗಿದ್ದ ಚಿರಿತೆಯೊಂದ ಕರುವೊಂದನ್ನು ಹುಣಸೇ ಮರಕ್ಕೆ ಹೊತ್ಯೊಯ್ದು ದೇಹದ ಅರ್ಧ ಭಾಗ ತಿಂದು ಪರಾರಿಯಾಗಿದೆ.    | Kannada Prabha

ಸಾರಾಂಶ

ಪಾವಗಡದಲ್ಲಿ ಕರುವನ್ನು ಹೊತ್ತೊಯ್ದ ಚಿರತೆ

ಕನ್ನಡಪ್ರಭ ವಾರ್ತೆ ಪಾವಗಡ

ತಾಲೂಕಿನ ಪಳವಳ್ಳಿ ಗ್ರಾಮ ಹೊರವಲಯದಲ್ಲಿ ದಾಳಿ ನಡೆಸಿ, ಎರಡು ಕುರಿ ಸಾವನ್ನಪ್ಪಿದ್ದ ಬೆನ್ನಲೆ, ಏಕಾಏಕಿ ಕೊಟ್ಟಿಗೆಗೆ ನುಗ್ಗಿದ್ದ ಚಿರತೆಯೊಂದು ಏಳು ತಿಂಗಳ ಕರುವೊಂದನ್ನು ಹುಣಸೆ ಮರದ ಮೇಲಕ್ಕೆ ಎಳೆದೊಯ್ದುವ ಮೂಲಕ ಕೊಂದು ತಿಂದ ಘಟನೆ ಮಂಗಳವಾರ ಮಧ್ಯರಾತ್ರಿ ತಾಲೂಕಿನ ಮಂಗಳವಾಡ ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಮಂಗಳವಾಡ ಗ್ರಾಮದ ಕರಿಯಮ್ಮ ದೇವಸ್ಥಾನದ ಹಿಂಭಾಗದಲ್ಲಿ ವಾಸವಿರುವ ದೊಡ್ಡಣ್ಣ ಎನ್ನುವ ರೈತನಿಗೆ ಸೇರಿದ್ದ ಕರು ಇದಾಗಿದ್ದು, ರಾತ್ರಿ ಸಮಯದಲ್ಲಿ ದನ ಕರುಗಳನ್ನು ಕೊಟ್ಟಿಗೆಯೊಂದರಲ್ಲಿ ಒಂದೆಡೆ ಕಟ್ಟಿ ಹಾಕಿದ್ದರು. ಮಧ್ಯರಾತ್ರಿ ಏಕಾಏಕಿ ದನದ ಕೊಟ್ಟಿಗೆಗೆ ನುಗ್ಗಿದ ಚಿರತೆ, ಗಂಡು ಕರುವಿನ ಮೇಲೆ ದಾಳಿ ನಡೆಸಿ ಸಮೀಪದಲ್ಲಿ ಇರುವ ಹುಣಸೆ ಮರವೊಂದರ ಮೇಲೆ ಎಳೆಯ್ದುದ್ದು ಅರ್ಧ ದೇಹವನ್ನು ತಿಂದು ಉಳಿದ ದೇಹವನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದೆ. ರೈತ ದೊಡ್ಡಣ್ಣ ಬೆಳಿಗ್ಗೆ ದನದ ಕೊಟ್ಟಿಗೆ ಹೋದ ವೇಳೆ ಕರು ನಾಪತ್ತೆಯಾಗಿದ್ದನ್ನ ಗಮನಿಸಿ ಬೆಚ್ಚಿಬಿದ್ದಿದ್ದಾರೆ. ನಂತರ ಸಾರ್ವಜನಿಕ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ಹುಣಿಸೇಮರದ ಕೊಂಬೆಯೊಂದರ ಮೇಲೆ ಕುರುವಿನ ಅರ್ಧ ದೇಹ ನೇತಾಡುತ್ತಿದ್ದನ್ನು ಕಂಡು ಗಾಬರಿಗೊಂಡ ಅವರು ಕೂಡಲೇ ಆರಣ್ಯ ಹಾಗೂ ಪಶುಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಕಳೆದ ವಾರದ ಹಿಂದಷ್ಟೆ ತಾಲೂಕಿನ ಕೆಂಚಗಾನಹಳ್ಳಿ ಹೊರವಲಯದಲ್ಲಿ ಮೇವಿಗಾಗಿ ಹೋಗಿದ್ದ ವೇಳೆ ದಾಳಿ ನಡೆಸಿ ಅರ್ಧಂಬರ್ಧ ತಿಂದು ಪರಾರಿಯಾದ ಪರಿಣಾಮ ಎರಡು ಕುರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದವು. ಇತ್ತೀಚಿನ ದಿನಗಳಲ್ಲಿ ಕಸಬಾ ಹಾಗೂ ತಾಲೂಕಿನ ನಿಡಗಲ್‌ ಹೋಬಳಿ ವ್ಯಾಪ್ತಿಯ ಮಂಗಳವಾಡ, ಅರಸೀಕೆರೆ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಚಿರತೆ ಹಾಗೂ ಕರಡಿಗಳ ಹಾವಳಿ ಹೆಚ್ಚಾಗುತ್ತಿದ್ದು ಈ ಭಾಗದ ಗ್ರಾಮೀಣ ಜನತೆ ಭಯಾಭೀತರಾಗಿದ್ದಾರೆ. ರಾತ್ರಿ ವೇಳೆ ಬೆಳೆ ಸಂರಕ್ಷಣೆ ಹಾಗೂ ಪಂಪುಸೆಟ್ ನೀರೆತ್ತಲು ನೀರಾವರಿ ಜಮೀನುಗಳ ಬಳಿ ಹೋಗಲು ಗಾಬರಿಗೊಂಡಿರುವುದಾಗಿ ಆನೇಕ ಮಂದಿ ಆರೋಪಿಸಿದ್ದಾರೆ. ಈ ಕುರಿತು ಸಂಬಂಧ ಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ವಹಿಸುವಂತೆ ಒತ್ತಾಯಿಸಿದ್ದಾರೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ