ಪಾವಗಡ: ವಿವಿಧ ದೇವಸ್ಥಾನದಲ್ಲಿ ವಿಶೇಷ ಹೂವಿನ ಅಲಂಕಾರ

KannadaprabhaNewsNetwork |  
Published : Jan 11, 2025, 12:45 AM IST
ಫೋಟೋ 10ಪಿವಿಡಿ1ಪಾವಗಡ ಪಟ್ಟಣದ ಶಿರಾರಸ್ತೆಯ ಪಕ್ಕ ದೇವಗಿರಿಯ ಶ್ರೀ ವೆಂಕಟರಮಣಸ್ವಾಮಿ,ಶನೈಚ್ಚರಸ್ವಾಮಿ ಹಾಗೂ ಟೋಲ್‌ಗೇಟ್‌ನ ಚೌಡಶ್ವರಿ ದೇಗುಲದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನೆರೆವೇರಿಸಿದ್ದು ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸಿದರು.10ಪಿವಿಡಿ2ಪಟ್ಟಣದ ಶ್ರೀ ಅಮ್ಮ ಕನ್ನಿಕಾಪರಮೇಶ್ವರಿ ದೇವಸ್ಥಾನಕ್ಕೆ ಶಾಸಕ ಎಚ್‌.ವಿ.ವೆಂಕಟೇಶ್‌ ಹಾಗೂ ಬ್ಯಾಂಕ್‌ ವ್ಯವಸ್ಥಾಪಕ ಅಶೋಕ್‌ ಮುಖಂಡ ಶಂಕರರೆಡ್ಡಿ ತೆರಳಿ ಪೂಜಾ ಕಾರ್ಯಕ್ರಮ ನೆರೆವೇರಿಸಿದರು. | Kannada Prabha

ಸಾರಾಂಶ

ವೈಕುಂಠ ಏಕಾದಶಿ ಪ್ರಯುಕ್ತ ಶುಕ್ರವಾರ ನಗರದ ಹೊರವಲಯದಲ್ಲಿನ ಶಿರಾ ರಸ್ತೆಯ ದೇವಗಿರಿ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ವೆಂಕಟೇಶ್ವರ ಸ್ವಾಮಿ ಹಾಗೂ ಶ್ರೀ ಶನೇಶ್ಚರಸ್ವಾಮಿ, ವೇಣುಗೋಪಾಲಸ್ವಾಮಿ ಶ್ರೀ ಚೌಡೇಶ್ವರಿ ದೇವಾಲಯ, ಕೃಷ್ಣಾಪುರದ ವೆಂಕಟರಮಣಸ್ವಾಮಿ, ಕಣಿವೆ ನರಸಿಂಹಸ್ವಾಮಿ ಹಾಗೂ ಕೋಟೆ ಆಂಜನೇಯಸ್ವಾಮಿ,ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.

ಕನ್ನಡಪ್ರಭ ವಾರ್ತೆ ಪಾವಗಡ,

ವೈಕುಂಠ ಏಕಾದಶಿ ಪ್ರಯುಕ್ತ ಶುಕ್ರವಾರ ನಗರದ ಹೊರವಲಯದಲ್ಲಿನ ಶಿರಾ ರಸ್ತೆಯ ದೇವಗಿರಿ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ವೆಂಕಟೇಶ್ವರ ಸ್ವಾಮಿ ಹಾಗೂ ಶ್ರೀ ಶನೇಶ್ಚರಸ್ವಾಮಿ, ವೇಣುಗೋಪಾಲಸ್ವಾಮಿ ಶ್ರೀ ಚೌಡೇಶ್ವರಿ ದೇವಾಲಯ, ಕೃಷ್ಣಾಪುರದ ವೆಂಕಟರಮಣಸ್ವಾಮಿ, ಕಣಿವೆ ನರಸಿಂಹಸ್ವಾಮಿ ಹಾಗೂ ಕೋಟೆ ಆಂಜನೇಯಸ್ವಾಮಿ,ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.ಇಲ್ಲಿನ ಶ್ರೀ ಅಂಜನೇಯಸ್ವಾಮಿ ಹಾಗೂ ಶನಿಮಹಾತ್ಮಸ್ವಾಮಿ ಮತ್ತು ದೇವಗಿರಿಯ ಶ್ರೀ ವೆಂಕಟರಮಣಸ್ವಾಮಿ ದೇವಸ್ಥಾನಗಳಿಗೆ ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದ್ದು ದೇವಸ್ಥಾನಕ್ಕೆ ಭೇಟಿ ನೀಡಿದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಶ್ರೀ ವೆಂಕಟೇಶ್ವರಸ್ವಾಮಿ ಪೂಜಾ ಕಾರ್ಯಕ್ರಮಗಳು ವಿಶೇಷ ಅಲಂಕಾರದೊಂದಿಗೆ ನೆರವೇರಿಸಲಾಗಿತ್ತು. ದೇವಾಲಯದ ಆಡಳಿತ ಮಂಡಳಿಯ ಸಮರ್ಪಕ ವ್ಯವಸ್ಥೆ ಮತ್ತು ಆಧ್ಯಾತ್ಮಿಕ ವಾತಾವರಣ ಕಲ್ಪಿಸಿದ್ದ ಹಿನ್ನೆಲೆಯಲ್ಲಿ ಭಕ್ತರಿಗೆ ಹೆಚ್ಚು ಆನಂದ ನೀಡಿತು.

ಶಾಸಕ ಎಚ್‌.ವಿ. ವೆಂಕಟೇಶ್‌ ಪಟ್ಟಣದ ಶ್ರೀ ಕನ್ನಿಕಾಪರಮೇಶ್ವರಿ ಅಮ್ಮನ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ನೆರವೇರಿಸಿದರು. ಬಳಿಕ ಕೋಟೆ ಆಂಜನೇಯಸ್ವಾಮಿ ಮತ್ತು ವೆಂಕಟರಮಣಸ್ವಾಮಿ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಈ ವೇಳೆ ಶಾಸಕ ಎಚ್‌.ವಿ.ವೆಂಕಟೇಶ್‌ ಮಾತನಾಡಿ, ಏಕಾದಶಿ ಪ್ರಯುಕ್ತ ದೇವಸ್ಥಾನಕ್ಕೆ ತೆರಳಿ ಪೂಜೆ ಕಾರ್ಯಕ್ರಮ ನೆರವೇರಿಸಿದ್ದು, ತಾಲೂಕಿನ ಜನತೆಗೆ ಒಳ್ಳೆಯದಾಗಲಿ ಹಾಗೂ ಸರ್ಕಾರ ಯೋಜನೆಯ ಅಭಿವೃದ್ಧಿ ಕಾರ್ಯಗಳು ಯಶಸ್ವಿಯಾಗಿ ಸಾಗಿ, ಮಳೆ ಬೆಳೆ ಹಾಗೂ ಸಮೃದ್ಧಿಯ ಜೀವನ ಜನತೆಗೆ ಭಗವಂತ ಕಲ್ಪಿಸಲಿ ಎಂದು ಪ್ರಾರ್ಥಿಸಿರುವುದಾಗಿ ಹೇಳಿದರು.

ಇದೇ ವೇಳೆ ಮುಖಂಡರಾದ ಸುದೇಶ್‌ಬಾಬು, ಎ.ಶಂಕರರೆಡ್ಡಿ, ಬ್ಯಾಂಕ್‌ ಅಶೋಕ್‌, ವಿಶ್ವನಾಥ್‌, ಕನಿಕಲಬಂಡೆ ಅನಿಲ್‌ಕುಮಾರ್‌ ಇತರೆ ಗಣ್ಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ