ಪವನ್ ಮೇಟಿ ಕಾರ್ಯ ಶ್ಲಾಘನೀಯ: ಕರಬಸಪ್ಪ ಹಂಚಿನಾಳ

KannadaprabhaNewsNetwork |  
Published : Nov 19, 2026, 02:15 AM IST
ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಸ್ಕೂಲ್ ಬ್ಯಾಗ್ ಮತ್ತು ನೋಟ್‌ಬುಕ್‌ಗಳನ್ನು ವಿತರಿಸಲಾಯಿತು. | Kannada Prabha

ಸಾರಾಂಶ

ಪವನ್ ಮೇಟಿ ತಾನು ದುಡಿದ ಹಣದಲ್ಲಿ ಶಾಲಾ ಮಕ್ಕಳಿಗೆ ಬ್ಯಾಗ್ ಮತ್ತು ನೋಟ್‌ಬುಕ್ ವಿತರಿಸುತ್ತಿರುವ ಕಾರ್ಯ ಶ್ಲಾಘನೀಯ.

ಶಾಲಾ ಮಕ್ಕಳಿಗೆ ಬ್ಯಾಗ್ ಮತ್ತು ನೋಟ್‌ಬುಕ್ ವಿತರಣೆಕನ್ನಡಪ್ರಭ ವಾರ್ತೆ ಮುಂಡರಗಿ

ಪವನ್ ಮೇಟಿ ತಾನು ದುಡಿದ ಹಣದಲ್ಲಿ ಶಾಲಾ ಮಕ್ಕಳಿಗೆ ಬ್ಯಾಗ್ ಮತ್ತು ನೋಟ್‌ಬುಕ್ ವಿತರಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಬಿಜೆಪಿ ಮುಖಂಡ ಕರಬಸಪ್ಪ ಹಂಚಿನಾಳ ಹೇಳಿದರು.

ಪುರಸಭೆ ವ್ಯಾಪ್ತಿಯ ರಾಮೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರ ಜನ್ಮದಿನದ ನಿಮಿತ್ತ ಅವರ ಅಭಿಮಾನಿ ಬಳಗದ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಸ್ಕೂಲ್ ಬ್ಯಾಗ್ ಮತ್ತು ನೋಟ್‌ಬುಕ್‌ಗಳನ್ನು ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಸಂಸದರ ಜನ್ಮದಿನದ ಅಂಗವಾಗಿ 2019ರಿಂದ ನಿರಂತರವಾಗಿ ಬೃಹತ್ ರಕ್ತದಾನ ಶಿಬಿರ, ಕೋವಿಡ್ ಸಂಕಷ್ಟದ ಸಮಯದಲ್ಲಿ ಅಂಬೇಡ್ಕರ್ ನಗರದ 300ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಆಹಾರದ ಕಿಟ್‌ಗಳ ವಿತರಣೆ, ನಗರವನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕರಿಗೆ ಪಾದಪೂಜೆ ಮಾಡಿ ಬಟ್ಟೆ ವಿತರಿಸುವುದು, ಬ್ಯಾಲವಾಡಗಿ ಗುಡಿಸಲು ನಿವಾಸಿಗಳಿಗೆ ಬಟ್ಟೆ ಮತ್ತು ರೇಷನ್ ಕಿಟ್ ವಿತರಣೆ ಸೇರಿದಂತೆ ಅನೇಕ ಜನೋಪಯೋಗಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಇವರಿಗೆ ಚಂದ್ರಣ್ಣ ನಾವಿ ಬೆನ್ನೆಲುಬಾಗಿ ನಿಂತಿದ್ದಾರೆ ಎಂದರು.ಪ್ರಮುಖರಾದ ಕೊಟ್ರೇಶ ಅಂಗಡಿ, ರಜನಿಕಾಂತ ದೇಸಾಯಿ, ಡಾ. ಕುಮಾರಸ್ವಾಮಿ ಹಿರೇಮಠ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜನ್ಮದಿನವನ್ನು ಹೋಟೆಲ್‌ಗಳಲ್ಲಿ ಕೇಕ್ ಕತ್ತರಿಸಿ, ಅನಾವಶ್ಯಕ ಖರ್ಚು ಮಾಡಿ ಆಚರಿಸುವವರೇ ಹೆಚ್ಚು. ಆದರೆ, ಪವನ್ ಮೇಟಿ ಪ್ರತಿ ವರ್ಷ ತೇಜಸ್ವಿ ಸೂರ್ಯ ಅವರ ಜನ್ಮದಿನ ಅತ್ಯಂತ ಅರ್ಥಪೂರ್ಣವಾಗಿ ಆಚರಿಸುತ್ತಾ ಬಂದಿದ್ದಾರೆ. ಇವರ ಈ ಸಮಾಜಮುಖಿ ಕಾರ್ಯ ಇತರರಿಗೂ ಪ್ರೇರಣೆಯಾಗಲಿ ಎಂದರು.ಆಯೋಜಕ ಹಾಗೂ ತೇಜಸ್ವಿಸೂರ್ಯ ಅಭಿಮಾನಿ ಬಳಗದ ಅಧ್ಯಕ್ಷ ಪವನ್ ಮೇಟಿ ಮಾತನಾಡಿ, ಜನ್ಮದಿನವನ್ನು ಕೇವಲ ಮೋಜು-ಮಸ್ತಿಗೆ ಸೀಮಿತಗೊಳಿಸದೆ, ಸಮಾಜಮುಖಿ ಕಾರ್ಯಗಳ ಮೂಲಕ ಆಚರಿಸುವ ಸಂಪ್ರದಾಯವನ್ನು ನಾವು ನಮ್ಮ ಸ್ನೇಹಿತರು ಹಾಗೂ ಗುರು-ಹಿರಿಯರ ಮಾರ್ಗದರ್ಶನದಲ್ಲಿ ಚಂದ್ರಣ್ಣ ನಾವಿಯವರ ಬೆಂಬಲದೊಂದಿಗೆ ಕಳೆದ ಎಂಟು ವರ್ಷಗಳಿಂದ ಮುಂಡರಗಿ ತಾಲೂಕಿನಲ್ಲಿ ನಡೆಸಿಕೊಂಡು ಬಂದಿದ್ದೇವೆ ಎಂದು ವಿವರಿಸಿದರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಉಮೇಶ ದಂಡಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅವರ ಪರವಾಗಿ ಸದಸ್ಯ ಬಸವರಾಜ ತಿಗರಿ ಮಾತನಾಡಿದರು.

ಶಾಲಾ ಮುಖ್ಯೋಪಾಧ್ಯಾಯ ಡಾ. ನಿಂಗು ಸೊಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭ ಹೇಮಗಿರೀಶ ಹಾವಿನಾಳ, ಎಸ್.ವಿ. ಪಾಟೀಲ್, ಚಂದ್ರು ನಾವಿ, ಮಲ್ಲಣ್ಣ ಹಣಜಿ, ಅಜ್ಜಪ್ಪ ಲಿಂಬಿಕಾಯಿ, ಕಾಶಿನಾಥ ಶಿರಬಡಗಿ, ಪವಿತ್ರಾ ಕಲ್ಲುಕುಟಗರ್, ವೀಣಾ ಬೂದಿಹಾಳ, ಕವಿತಾ ಉಳ್ಳಾಗಟ್ಟಿ, ಶಿವಪ್ಪ ಚಿಕ್ಕಣ್ಣವರ, ಬನ್ನೆಪ್ಪ ಚೂರಿ, ಸಿದ್ದು ದೇಸಾಯಿ, ಮಹೇಶ ಬಾಗಳಿ, ಮುತ್ತು ಅಳವಂಡಿ, ನಿಂಗರಾಜ ಮೇಗಳಮನಿ, ಸೋಮು ಹಕ್ಕಂಡಿ, ರಾಮಣ್ಣ ಪುಂಡಪ್ಪ ತಿಗರಿ ಸೇರಿದಂತೆ ಅನೇಕರಿದ್ದರು. ಪ್ರಶಾಂತ ಗುಡದಪ್ಪನವರ ಸ್ವಾಗತಿಸಿ, ಎಂ.ಆರ್. ಗುಗ್ಗರಿ ನಿರೂಪಿಸಿ, ಬಿ.ಎಚ್. ಹಲವಾಗಲಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಿವಿಯ ಸಮಸ್ಯೆಯನ್ನು ಕಡೆಗಣಿಸಬಾರದು : ಡಾ. ಪವನ್ ಕುಮಾರ್
ನಮ್ಮಲ್ಲಿರುವ ತಪ್ಪುಗಳನ್ನು ತೊಡೆದು ಹಾಕುವುದೇ ಆಧ್ಯಾತ್ಮ: ಪ್ರೊ. ನಂದನ್ ಪ್ರಭು