-25 ವರ್ಷ ರಾಜಕೀಯ ಜೀವನದ ಸುವರ್ಣ ಮಹೋತ್ಸವ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಕಲಬುರಗಿ
ರಾಜಕೀಯ ನಾಯಕತ್ವದಿಂದ ಸುದೀರ್ಘವಾಗಿ 25 ವರ್ಷಗಳಿಂದ ಸಮಾಜಸೇವೆ ಮಾಡುತ್ತಿರುವ ಪವನಕುಮಾರ ಬಿ ವಳಕೇರಿಯವರ ನಾಯಕತ್ವ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ ಎಂದು ಶಾಸಕ ಅಲ್ಲಮ ಪ್ರಭು ಪಾಟೀಲ ಹೇಳಿದರು.ನಗರದ ಹೊರವಲಯದಲ್ಲಿರುವ ನಂದಿಕೂರು ಗ್ರಾಮದಲ್ಲಿ ಏರ್ಪಡಿಸಿದ್ದ ವಳಕೆರಿಯವರ 25 ವರ್ಷಗಳ ರಾಜಕೀಯ ಜೀವನದ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಲಬುರ್ಗಿ ವಿದ್ಯುತ್ ಶಕ್ತಿ ನಿಗಮದ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ ಬಡಿಗೇರ ಮಾತನಾಡಿ, ಜಿಲ್ಲೆಯ ರಾಜಕೀಯ ಕ್ಷೇತ್ರದಲ್ಲಿ ವಳಕೇರಿ ಕುಟುಂಬದ ಪಾತ್ರ ಅನನ್ಯ, ರಾಷ್ಟ್ರೀಯ ಹೆದ್ದಾರಿಯ ಸುಧಾರಣೆ, ಕಲ್ಬುರ್ಗಿ ಕೇಂದ್ರ ಕಾರಾಗೃಹದಲ್ಲಿರುವ ಅವ್ಯವಸ್ಥೆಯ ವಿರುದ್ಧ ಹೋರಾಡಿ ನಂದಿಕೂರ್ ಗ್ರಾಮಸ್ಥರಿಗೆ ರುದ್ರಭೂಮಿಗಾಗಿ ಜಿಲ್ಲಾಧಿಕಾರಿಯಿಂದ ಅಧಿಕೃತ ಎರಡು ಎಕರೆ ಜಮೀನು ಕೊಡಿಸಿದ್ದಾರೆ. ಮೂಲಭೂತ ಸೌಕರ್ಯ ಕಲ್ಪಿಸಿದ ಕೀರ್ತಿ ವಳಕೇರಿಗೆ ಸಲ್ಲುತ್ತದೆ ಎಂದರು.
ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಪವನಕುಮಾರ ವಳಕೇರಿ, ನೊಂದ ಜನರ ಕಣ್ಣೀರು ಒರೆಸುವುದರೊಂದಿಗೆ ಸಮಾಜ ಸೇವೆಗೆ ಪೂರ್ಣ ಸಮಯ ಕೊಡುತ್ತೆನೆಂದು ಹೇಳಿದರು.