ಹೂಸ್ಟನ್ನಲ್ಲಿ ಮರ್ಚೆಂಟ್ ನೇವಿ ಅಧಿಕಾರಿಯಾಗಿ ಪವಿತ್ರಾ ನೇಮಕ

KannadaprabhaNewsNetwork |  
Published : Jun 12, 2026, 01:30 AM IST
11 ಬೀರೂರು 1ಅಮೆರಿಕಾದ ಮರ್ಚೆಂಟ್ ನೇವಿಯ ಅಧಿಕಾರಿಯಾಗಿ ನೇಮಕಗೊಂಡ ಪವಿತ್ರಾ ಸಿ. ನಾಯ್ಕರನ್ನು ಬೀರೂರು ಹೋಬಳಿಯ ಅಲದಹಳ್ಳಿಯಲ್ಲಿ ಅವರು ವ್ಯಾಸಂಗ ಮಾಡಿದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವತಿಯಿಂದ ಗೌರವಿಸಲಾಯಿತು | Kannada Prabha

ಸಾರಾಂಶ

ಬೀರೂರುಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆದು ಪರಿಶ್ರಮ ಮತ್ತು ಸಾಧನೆ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲೂ ಅವಕಾಶ ಪಡೆಯಬಹುದು ಎಂಬುದಕ್ಕೆ ಅಲದಹಳ್ಳಿಯ ಪವಿತ್ರಾ ಸಿ. ನಾಯ್ಕ ಮಾದರಿಯಾಗಿದ್ದಾರೆ ಎಂದು ಆಲದಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಎಂ.ಪಿ. ಸುಮಾ ಹೇಳಿದರು.

- ಆಲದಹಳ್ಳಿ ಯುವತಿಗೆ ಸನ್ಮಾನ

ಕನ್ನಡಪ್ರಭ ವಾರ್ತೆ, ಬೀರೂರು

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆದು ಪರಿಶ್ರಮ ಮತ್ತು ಸಾಧನೆ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲೂ ಅವಕಾಶ ಪಡೆಯಬಹುದು ಎಂಬುದಕ್ಕೆ ಅಲದಹಳ್ಳಿಯ ಪವಿತ್ರಾ ಸಿ. ನಾಯ್ಕ ಮಾದರಿಯಾಗಿದ್ದಾರೆ ಎಂದು ಆಲದಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಎಂ.ಪಿ. ಸುಮಾ ಹೇಳಿದರು. ಬೀರೂರು ಸಮೀಪದ ಆಲದಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಮೆರಿಕದ ಟೆಕ್ಸಾಸ್ ರಾಜ್ಯದ ಹೂಸ್ಟನ್ನಲ್ಲಿ ಮರ್ಚೆಂಟ್ ನೇವಿ ಅಧಿಕಾರಿಯಾಗಿ ನೇಮಕಗೊಂಡಿರುವ ಪವಿತ್ರಾ ಸಿ. ನಾಯ್ಕ ಅವರನ್ನು ಸನ್ಮಾನಿಸಿ ಮಾತನಾಡಿದರು.

''''''''ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ವಿದ್ಯಾರ್ಥಿಗಳು ತಮಗೆ ಸಿಗುವ ಅವಕಾಶ ವನ್ನು ಸದುಪಯೋಗಪಡಿಸಿಕೊಂಡರೆ ಯಶಸ್ಸಿನ ಹಾದಿಯಲ್ಲಿ ಸಾಗಬಹುದು. ಗ್ರಾಮದ ಸರ್ಕಾರಿ ಶಾಲೆ ಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಪವಿತ್ರಾ, ಬಳಿಕ ಮೊರಾರ್ಜಿ ವಸತಿ ಶಾಲೆಯಲ್ಲಿ ಪಿಯುಸಿ ವರೆಗೆ ವ್ಯಾಸಂಗ ಮಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡರು. ಮಂಗಳೂರಿನಲ್ಲಿ ಮೆರೈನ್ ಎಂಜಿನಿಯರಿಂಗ್, ಮುಂಬೈನಲ್ಲಿ ತರಬೇತಿ ಪಡೆದ ನಂತರ ಮರ್ಚೆಂಟ್ ನೇವಿ ಕ್ಷೇತ್ರದಲ್ಲಿ ಉದ್ಯೋಗ ಪಡೆದಿದ್ದಾರೆ'''''''' ಎಂದು ಹೇಳಿದರು.

''''''''ಪವಿತ್ರಾ ಅವರ ಸಾಧನೆ ಇಂದಿನ ಯುವ ಪೀಳಿಗೆಗೆ ಪ್ರೇರಣೆ. ತಮ್ಮ ಪರಿಶ್ರಮ ಮತ್ತು ಛಲದಿಂದ ಶಾಲೆ ಹಾಗೂ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ. ಅವರು ವಿದೇಶದಲ್ಲಿ ಕರ್ತವ್ಯ ನಿರ್ವಹಿಸಲು ತೆರಳುತ್ತಿರುವ ಹಿನ್ನೆಲೆ ಯಲ್ಲಿ ಗ್ರಾಮ ಮತ್ತು ಶಾಲೆ ಪರವಾಗಿ ಶುಭ ಹಾರೈಸಿ ಗೌರವಿಸಲಾಗುತ್ತಿದೆ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉಮೇಶ್ ಹಾಗೂ ಗ್ರಾಮಸ್ಥ ಮನು ಸ್ಮರಣಿಕೆ ನೀಡಿ ಶುಭ ಹಾರೈಸಿದರು.

ಸಹ ಶಿಕ್ಷಕರಾದ ಪೂರ್ಣಿಮಾ ಪಿ., ಶಕುಂತಲಾ ಬಿ.ಟಿ.. ಮಾಲಿನಿ, ಅಂಗನವಾಡಿ ಕಾರ್ಯಕರ್ತೆಯರಾದ ಪಾರ್ವತಿಬಾಯಿ, ಜ್ಯೋತಿ, ಸಾವಿತ್ರಿಬಾಯಿ ಹಾಗೂ ಗ್ರಾಮಸ್ಥರಾದ ರಾಮಾನಾಯ್ಕ, ಸೇವ್ಯಾನಾಯ್ಕ, ರಾಜಾನಾಯ್ಕ, ಸಿದ್ಧನಾಯ್ಕ ಇದ್ದರು.

11 ಬೀರೂರು 1ಅಮೆರಿಕಾದ ಮರ್ಚೆಂಟ್ ನೇವಿ ಅಧಿಕಾರಿಯಾಗಿ ನೇಮಕಗೊಂಡ ಪವಿತ್ರಾ ಸಿ. ನಾಯ್ಕರನ್ನು ಬೀರೂರು ಹೋಬಳಿಯ ಅಲದಹಳ್ಳಿಯಲ್ಲಿ ವ್ಯಾಸಂಗ ಮಾಡಿದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಿಂದ ಗೌರವಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೌಡಿಶೀಟರ್ ಮಂಜೇಶ್ ಹತ್ಯೆ ಕೇಸ್‌ ಹತ್ತು ಆರೋಪಿಗಳ ಬಂಧನ
ಮತದಾರರ ಪಟ್ಟಿಗೆ ಅರ್ಹ ಮತದಾರರ ಸೇರ್ಪಡೆ ಮುಖ್ಯ ಉದ್ದೇಶ