ರಾಮನಗರ: ವಿಶೇಷ ಚೇತನರು ಕಾರ್ಪೊರೇಟ್ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗವನ್ನು ಊಹಿಸುವುದು ಅಸಾಧ್ಯ. ಆದರೆ, ಇಲ್ಲೊಬ್ಬ ಮಹಿಳೆ ವಿಶೇಷ ಚೇತನರಿಗಾಗಿಯೇ ಬೆಂಗಳೂರಿನಲ್ಲಿ ಐಟಿ-ಬಿಪಿಒ ಕಂಪನಿ ತೆರೆದು ಉದ್ಯೋಗದಾತೆ ಆಗಿರುವುದು ಮಾತ್ರವಲ್ಲದೆ ಅವರ ಬಾಳಿನ ಬೆಳಕಾಗಿದ್ದಾರೆ. ಈ ಅದಮ್ಯ ಸೇವೆಯನ್ನು ಪರಿಗಣಿಸಿ ಅವರಿಗೆ ಭಾರತ ಸರ್ಕಾರ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.
ವಿಶೇಷ ಚೇತನರಿಗೆ ಉದ್ಯೋಗ ನೀಡಿ ಕ್ರಾಂತಿಕಾರಿ ಸಾಧನೆ ಮಾಡಿದ ಪವಿತ್ರ ವೈ.ಸುಂದರೇಶನ್ ಅವರ ಗುರುತರ ಸೇವೆಯನ್ನು ಪರಿಗಣಿಸಿ ಭಾರತ ಸರ್ಕಾರ 2025ನೇ ಸಾಲಿನ ರಾಷ್ಟ್ರೀಯ ವಿಶೇಷಚೇತನರ ಸಬಲೀಕರಣ ಪ್ರಶಸ್ತಿ ನೀಡಿ ಗೌರವಿಸಿರುವುದು ನಾಡಿಗೆ ಹೆಮ್ಮೆ ತರಿಸಿದೆ.
ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ದಿವ್ಯಾಂಗ ಸಬಲೀಕರಣ ಇಲಾಖೆ (ಡಿಸೆಂಬರ್ 3) ನವದೆಹಲಿಯಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ವಿಶೇಷಚೇತನರ ದಿನಾಚರಣೆ ಸಮಾರಂಭದಲ್ಲಿ ಸ್ವತಃ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೇ ಪವಿತ್ರ ವೈ. ಸುಂದರೇಶನ್ ಅವರಿಗೆ ರಾಷ್ಟ್ರೀಯ ವಿಶೇಷಚೇತನರ ಸಬಲೀಕರಣ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದ್ದಾರೆ.ಯಾರಿದು ಪವಿತ್ರ ವೈ.ಸುಂದರೇಶನ್ ? :
ಈ ದಂಪತಿ ಕಣ್ಣಿಗೆ ವಿಶೇಷಚೇತನ ಯುವಕನೊಬ್ಬ ರಸ್ತೆ ದಾಟುತ್ತಿರುವುದನ್ನು ಗಮನಿಸಿದರು. ಆಗ ಪವಿತ್ರ ಅವರ ಆಲೋಚನೆಯ ದಿಕ್ಕೇ ಬದಲಾಗಿ ವಿಂದ್ಯಾ ಇ-ಇನ್ಫೋಮೀಡಿಯಾ ಎಂಬ ಸಂಸ್ಥೆಯ ಹುಟ್ಟಿಗೆ ಕಾರಣವಾಯಿತು.
ವಿಶೇಷ ಚೇತನರ ಪಾಲಿನ ಆಶಾಕಿರಣ :
ಕಾಲ್ ಸೆಂಟರ್‌ಗಳ ನಿರ್ವಹಣೆ, ಡೇಟಾ ಎಂಟ್ರಿ, ಡೇಟಾ ಮ್ಯಾನೇಜ್‌ಮೆಂಟ್ ಕಾರ್ಯಗಳನ್ನು ಹೊರಗುತ್ತಿಗೆ ಆಧಾರದಲ್ಲಿ ನಿರ್ವಹಿಸುತ್ತಿರುವ ವಿಂದ್ಯಾ ಕಂಪನಿಗೆ ಗ್ರಾಹಕರು ಒಮ್ಮೆ ಬಂದರೆ ಸಾಕು, ಇಲ್ಲಿನ ಗುಣಮಟ್ಟ, ಕಾರ್ಯದಕ್ಷತೆ ಮತ್ತು ಬದ್ಧತೆ ನೋಡಿ ಕಾಯಂ ಗ್ರಾಹಕರಾಗಿ ಸೇವೆಗಳನ್ನು ಪಡೆದುಕೊಳ್ಳುತ್ತಾರೆ.
ದಿವ್ಯಾಂಗರ ಜನರಿಗೆ ಸಮಾನ ಅವಕಾಶಗಳನ್ನು ಕಲ್ಪಿಸುವುದು. ವೃತ್ತಿಪರ ತರಬೇತಿ ನೀಡಿ ಆತ್ಮವಿಶ್ವಾಸ ತುಂಬುವ, ಸೂಕ್ತ ಮಾರ್ಗದರ್ಶನದ ಮೂಲಕ ಅವರ ಕೌಶಲಗಳನ್ನು ಹೆಚ್ಚಿಸಿ, ಕೆಲಸಕ್ಕೆ ಅಣಿಗೊಳಿಸುತ್ತಿರುವ ವಿಂದ್ಯಾ ಇ ಇನ್ಫೋಮೀಡಿಯಾ ಕಂಪನಿ ವಿಶೇಷಚೇತನರು, ಮಹಿಳೆಯರು, ಆರ್ಥಿಕ ದುರ್ಬಲರ ಪಾಲಿಗೆ ಆಶಾಕಿರಣವಾಗಿ ಬೆಳೆದಿದೆ.
ವಿಶೇಷಚೇತನರ ಶೈಕ್ಷಣಿಕ ಅರ್ಹತೆ, ಪ್ರತಿಭೆ, ಸಾಮರ್ಥ್ಯಕ್ಕೆ ಅನುಗುಣವಾಗಿ ಸೂಕ್ತ ಉದ್ಯೋಗ ನೀಡುವವರು ಇಲ್ಲ. ಎಲ್ಲ ಅರ್ಹತೆ ಇದ್ದರೂ ಅಂಗವೈಕಲ್ಯದ ಕಾರಣ ಕೆಲಸ ಕೊಡದೆ ತಿರಸ್ಕರಿಸುವವರೇ ಹೆಚ್ಚು. ಆದರೆ, ವಿಂದ್ಯಾ ಇ - ಇನ್ಫೋಮೀಡಿಯಾ ಕಂಪನಿ ಮೂಲಕ ವಿಶೇಷಚೇತನರಿಗೆ ಉದ್ಯೋಗಾವಕಾಶ ಕಲ್ಪಿಸಿರುವ ಪವಿತ್ರ ವೈ.ಸುಂದರೇಶನ್ ಕಾರ್ಯ ವೈಖರಿ ಇತರರಿಗೆ ಮಾದರಿಯಾಗಿದೆ. ಇಂತಹ ಮಹಿಳೆ ನಮ್ಮೊಂದಿಗೆ ಇರುವುದು ಹೆಮ್ಮೆಯ ವಿಚಾರ.
ಕೋಟ್ ................
ವಿಂದ್ಯಾ ನನ್ನ ಹಿರಿಯ ಮಗಳ ಹೆಸರು. ವಿಂದ್ಯಾ ಇ - ಇನ್ಫೋ ಮೀಡಿಯಾ ಪ್ರೈವೆಟ್ ಲಿಮಿಟೆಡ್ ನನ್ನ ಎರಡನೇ ಮಗಳು. ತನುಶ್ರೀ ಮೂರನೇ ಮಗಳು. ನನ್ನಿಬ್ಬರು ಮಕ್ಕಳಂತೆ ಕಂಪನಿಗೂ ಪೋಷಣೆ ಮತ್ತು ಪ್ರೀತಿ ಬೇಕು. ಸಾಮಾನ್ಯರಂತೆ ಮತ್ತು ಅವರಿಗಿಂತ ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡಬಲ್ಲರು ಎಂಬುದನ್ನು ವಿಶೇಷಚೇತನರು ತೋರಿಸಿ ಕೊಟ್ಟಿದ್ದಾರೆ. ದಿವ್ಯಾಂಗಜನರು ನಮ್ಮನ್ನು ಬೇರೆಯವರಂತೆ ನೋಡದೆ ತಮ್ಮಲ್ಲೊಬ್ಬರೆಂದು ಭಾವಿಸಿರುವುದು ಖುಷಿಯ ವಿಚಾರ. ಭಾರತ ಸರ್ಕಾರ ನನಗೆ ನೀಡಿರುವ ರಾಷ್ಟ್ರೀಯ ಪ್ರಶಸ್ತಿ ದಿವ್ಯಾಂಗಜನರಿಗೆ ಅರ್ಪಿಸುತ್ತೇನೆ.- ಪವಿತ್ರ ವೈ.ಸುಂದರೇಶನ್ , ವ್ಯವಸ್ಥಾಪಕ ನಿರ್ದೇಶಕಿ, ವಿಂದ್ಯಾ ಇ - ಇನ್ಫೋಮೀಡಿಯಾ ಪ್ರೈ.ಲಿ.
9ಕೆಆರ್ ಎಂಎನ್ 1,2.ಜೆಪಿಜಿ1.ನವದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಪವಿತ್ರ ವೈ. ಸುಂದರೇಶನ್ ಅವರಿಗೆ ರಾಷ್ಟ್ರೀಯ ವಿಶೇಷಚೇತನರ ಸಬಲೀಕರಣ ಪ್ರಶಸ್ತಿ ಪ್ರದಾನ ಮಾಡಿದರು.
2.ರಾಷ್ಟ್ರೀಯ ವಿಶೇಷಚೇತನರ ಸಬಲೀಕರಣ ಪ್ರಶಸ್ತಿ ಪುರಸ್ಕೃತೆ ಪವಿತ್ರ ವೈ.ಸುಂದರೇಶನ್ ಅವರನ್ನು ಗ್ರೇಟರ್ ಬೆಂಗಳೂರು ಬಿಡದಿ ಸ್ಮಾರ್ಟ್ ಸಿಟಿ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ವರದರಾಜುಗೌಡ ಅಭಿನಂದಿಸಿದರು. ಕಂಪನಿ ಸಿಇಒ ಅಶೋಕ್ ಗಿರಿ, ನಿವೃತ್ತ ಅಧಿಕಾರಿ ಅಶ್ವತ್ಥರಾಮ್ , ಮುಖಂಡ ಶರತ್ ಕೆಂಪಣ್ಣ ಇದ್ದರು.---------------------------------------