ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ರೈಲ್ವೆ ನಿಲ್ದಾಣ ಆವರಣದಲ್ಲಿ ಇನ್ನು ಮುಂದೆ ನಿಗದಿಪಡಿಸಿರುವ ಸ್ಥಳದಲ್ಲಿ ಮಾತ್ರ ವಾಹನಗಳನ್ನು ನಿಲ್ಲಿಸಬೇಕು. ನಿಲ್ದಾಣದ ಆವರಣದಲ್ಲಿ ಯಾರೇ ಆಗಲಿ ಅಕ್ರಮವಾಗಿ ನಿಲುಗಡೆ ಮಾಡಿದರೆ ಗಂಟೆಗೆ ಇಷ್ಟು ಎಂದು ನಿಗದಿಪಡಿಸಿರುವ ಶುಲ್ಕದ ಜೊತೆಗೆ ದಂಡ ಪಾವತಿಸುವುದು ಕಡ್ಡಾಯವಾಗಿದೆ.
ರಾಜ್ಯದ ವಿವಿಧ ಭಾಗಗಳ ಭಾರತೀಯ ರೈಲ್ವೆ ನಿಲ್ದಾಣಗಳಲ್ಲಿ ಪಾರ್ಕಿಂಗ್ ಸೌಲಭ್ಯವಿದ್ದು, ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳಿಗೆ ಗಂಟೆಯ ಆಧಾರದ ಮೇಲೆ ಶುಲ್ಕ ವಿಧಿಸಲಾಗುತ್ತದೆ. ಆದರೆ ಚಿಕ್ಕಬಳ್ಳಾಪುರದಲ್ಲಿ ಇದುವರೆಗೂ ಯಾವುದೇ ರೀತಿಯ ಪೆ ಅಂಡ್ ಪಾರ್ಕಿಂಗ್ ಇಲ್ಲದ ಕಾರಣ ರೈಲ್ವೆ ನಿಲ್ದಾಣದ ಆವರಣದಲ್ಲಿ ರೈಲ್ವೆ ಪ್ರಯಾಣಕರು ಮಾತ್ರವಲ್ಲದೆ ಸಾರ್ವಜನಿಕ ಬಹುತೇಕರು ಎಲ್ಲೆಂದಿರಲ್ಲಿ ವಾಹನಗಳನ್ನು ಅಡ್ಡಾದಿಡಿಯಾಗಿ ನಿಲ್ಲಿಸಿ ಹೋಗುತಿದ್ದರು. ಈ ಬಗ್ಗೆ ಪೊಲೀಸರು ಹಾಗೂ ರೈಲ್ವೆ ಅಧಿಕಾರಿಗಳು ಸಿಬ್ಬಂದಿ ವರ್ಗ ರೈಲ್ವೆ ಆವರಣದಲ್ಲಿ ವಾಹನಗಳನ್ನು ನಿಲ್ಲಿಸಬೇಡಿ ಎಂದು ಎಷ್ಟೇ ಹೇಳಿದರು ಕೇಳುತಿರಲಿಲ್ಲ. ರೈಲ್ವೆ ಪ್ರಯಾಣಿಕರಿಗೆ ಇದೊಂದು ರೀತಿಯ ಕಿರಿಕಿರಿ ಆಗುತಿತ್ತು. ಈಗ ಇದೆಲ್ಲದ್ದಕ್ಕೂ ಬ್ರೇಕ್ ಬಿದ್ದಿದೆ.ಸಿಸಿ ಟಿವಿ ಅಳವಡಿಕೆ ಮುಖ್ಯ:
ಪಾರ್ಕಿಂಗ್ ನಿಯಮಗಳು ಮತ್ತು ಶುಲ್ಕ:
ಶುಲ್ಕದ ರಚನೆ (ಸಾಮಾನ್ಯ): ಮೊದಲ 2 ಗಂಟೆಗಳವರೆಗೆ ಸೈಕಲ್‌ಗಳಿಗೆ ರು. 5 ದ್ವಿಚಕ್ರ ವಾಹನಗಳಿಗೆ ರು. 20 ಮತ್ತು ನಾಲ್ಕು ಚಕ್ರದ ವಾಹನಗಳಿಗೆ ರು. 40, ನಂತರ ಪ್ರತಿ ಹೆಚ್ಚುವರಿ ಗಂಟೆಗೆ ಕ್ರಮವಾಗಿ ರು.10 ಮತ್ತು ರು. 20 ವಿಧಿಸಲಾಗುತ್ತದೆ.ಡ್ರಾಪ್-ಆಫ್ ಲೇನ್:
ಪ್ರಯಾಣಿಕರನ್ನು ಬಿಡಲು 0-5ನಿಮಿಷಗಳವರೆಗೆ ಉಚಿತ, ಆದರೆ ನಂತರ ಶುಲ್ಕ ವಿಧಿಸಲಾಗುತ್ತದೆ.ಸುರಕ್ಷತೆ:
ಜಿಲ್ಲಾ ಕೇಂದ್ರದಲ್ಲಿನ ಚಿಕ್ಕಬಳ್ಳಾಪುರ ರೈಲ್ವೆ ನಿಲ್ದಾಣದಲ್ಲಿ ಸಿಸಿಟಿವಿ (ಸಿಸಿಟಿವಿ) ಅಳವಡಿಕೆಗೆ ಈಗಾಗಲೇ ಸಮೀಕ್ಷೆ ನಡೆಸಿದ್ದು ಸಿಸಿಟಿವಿ ಅಳವಡಿಸುವ ಜಾಗವನ್ನು ಗುರ್ತುಪಡಿಸಲಾಗಿದೆ. ಸದ್ಯದಲ್ಲಿಯೇ ಸಿಸಿಟಿವಿ ಬರಲಿದೆ ಎಂದು ತಿಳಿಸಿರುವ ರೈಲ್ವೆ ಅಧಿಕಾರಿ ಸದ್ಯ ವಾಹನಗಳ ಸುರಕ್ಷತೆಗಾಗಿ ಭದ್ರತಾ ಸಿಬ್ಬಂದಿ ಇರಲಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ವಾಹನ ನಿಲುಗಡೆ ಮಾಡಲು ಬರುವ ಎಲ್ಲರು ನಿಮ್ಮ ವಾಹನಗಳ ಸುರಕ್ಷತೆಗಾಗಿ ನಿಲ್ದಾಣ ಆವರಣದ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸಬೇಕು. ಅಲ್ಲದೆ ಭದ್ರತಾ ಸಿಬ್ಬಂದಿಯ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಮನವಿ ಮಾಡಿದ್ದಾರೆ. ಅನಧಿಕೃತ ಪಾರ್ಕಿಂಗ್ ಮಾಡಿದರೆ ಟೋಯಿಂಗ್ ಶುಲ್ಕ ಮತ್ತು ದಂಡ ವಿಧಿಸಲಾಗುತ್ತದೆಂದು ಅಧಿಕಾರಿಗಳು ಪತ್ರಿಕೆಗೆ ತಿಳಿಸಿದರು.ಸಿಕೆಬಿ-1 ಮತ್ತು2 ಚಿಕ್ಕಬಳ್ಳಾಪುರ ನಗರದ ರೈಲ್ವೆ ನಿಲ್ದಾಣದ ಪಾರ್ಕಿಂಗ್ ನಿಯಮಗಳು ಮತ್ತು ಶಲ್ಕ ಸೂಚನೆಯೊಂದಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿರುವುದು