ಸೇವಿಸುವ ಆಹಾರ ಪದ್ಧತಿಯಲ್ಲಿ ಗಮನ ಹರಿಸಿ

KannadaprabhaNewsNetwork |  
Published : Apr 29, 2026, 04:00 AM IST
ಬೀಳಗಿ | Kannada Prabha

ಸಾರಾಂಶ

ಮನುಷ್ಯ ತನ್ನ ಅನುಕೂಲಕ್ಕೆ ತಕ್ಕಂತೆ ಬದುಕುವ ಶೈಲಿಯಿಂದ ಹಲವಾರು ಪದ್ಧತಿಗಳನ್ನು ಮರೆತು ಬದುಕು ಸಾಗಿಸುತ್ತಿರುವ ಪರಿಣಾಮ ಆರೋಗ್ಯದಲ್ಲಿ ಏರುಪೇರು ಜೊತೆಗೆ ಗಂಭೀರ ಕಾಯಿಲೆಗೆ ಬಲಿಯಾಗುತ್ತಿದ್ದಾರೆ ಎಂದು ಉಜ್ಜಯಿನಿ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ಮನುಷ್ಯ ತನ್ನ ಅನುಕೂಲಕ್ಕೆ ತಕ್ಕಂತೆ ಬದುಕುವ ಶೈಲಿಯಿಂದ ಹಲವಾರು ಪದ್ಧತಿಗಳನ್ನು ಮರೆತು ಬದುಕು ಸಾಗಿಸುತ್ತಿರುವ ಪರಿಣಾಮ ಆರೋಗ್ಯದಲ್ಲಿ ಏರುಪೇರು ಜೊತೆಗೆ ಗಂಭೀರ ಕಾಯಿಲೆಗೆ ಬಲಿಯಾಗುತ್ತಿದ್ದಾರೆ ಎಂದು ಉಜ್ಜಯಿನಿ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

ತಾಲೂಕಿನ ಸುಕ್ಷೇತ್ರ ಗಿರಿಸಾಗರದ ಕಲ್ಯಾಣ ಹಿರೇಮಠದಲ್ಲಿ ಮಹಾತಪಸ್ವಿ ಸಂಗನಬಸವ ಶಿವಾಚಾರ್ಯ ಸ್ವಾಮಿಗಳ ಜಾತ್ರಾ ಮಹೋತ್ಸವ ಹಾಗೂ ಸರ್ವ ಧರ್ಮ ಸಾಮೂಹಿಕ ವಿವಾಹ ಹಾಗೂ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಕರ್ತವ್ಯ ನಿಷ್ಠೆ, ಸಮಯ ಪ್ರಜ್ಞೆ ಜೊತೆಗೆ ಸೇವಿಸುವ ಆಹಾರ ಪದ್ಧತಿಯಲ್ಲಿ ಗಮನ ಹರಿಸಬೇಕು. ಬದಲಾದ ಕಾಲಘಟ್ಟದಲ್ಲಿ ಎಲ್ಲ ರಂಗದಲ್ಲೂ ಜಾಗೃತಿ ವಹಿಸುವುದು ಅವಶ್ಯಕತೆ ಇದೆ ಎಂದು ತಿಳಿಸಿದರು.ಮನುಷ್ಯ ಸ್ವಾರ್ಥಿಯಾಗದೇ ನಿರಂತರ ಶ್ರಮ ಕಾಯಕ ಮಾಡುತ್ತ ಜೀವನ ಸಾಗಿಸಿದರೆ ಅಂತವರ ಆರೋಗ್ಯ,ವಿಶ್ವಾಸ ಮತ್ತು ಇತರರನ್ನು ಗೌರವಿಸುವ ಗುಣ ಬೆಳೆಯಬಲ್ಲದು. ಎಂತಹ ಸಾಧನೆ ಕೆಲಸವಾಗಿದ್ದರೂ ಸಾಧಿಸುವ ಗುರಿ ಆತನ ಶ್ರಮದಿಂದ ಬೆಳೆಯುತ್ತದೆ ಎಂದರು.ಗಿರಿಸಾಗರ ಕಲ್ಯಾಣ ಹಿರೇಮಠದ ಸಂಗನಬಸವ ಶಿವಾಚಾರ್ಯರ ಜಾತ್ರಾ ಮಹೋತ್ಸವದಲ್ಲಿ ೧೫ ಜೋಡಿ ನವ ವಧು ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು,ನೂತನ ದಂಪತಿಗಳು ಸುಖ ಜೀವನದೊಂದಿಗೆ ಆದರ್ಶ ದಂಪತಿಗಳಾಗಿ ಬದುಕಿ ಹೆಣ್ಣ ಆಗಲಿ ಗಂಡಾಗಲಿ ಮಕ್ಕಳಿಗೆ ಸಮಾನ ಶಿಕ್ಷಣ ಸಂಸ್ಕಾರ ನೀಡಿ ನಾಡಿನ ಭವಿಷ್ಯದ ಪ್ರಜೆಗಳನ್ನಾಗಿ ಮಾಡಿ, ಅತ್ತೆ ಮತ್ತು ಸೊಸೆ ತಾಯಿ ಮಗಳಂತೆ ಬದುಕಬೇಕು ಎಂದು ತಿಳಿಸಿದರು.ರುದ್ರಮುನಿ ಶಿವಾಚಾರ್ಯರು ಮಾತನಾಡಿ, 1994ರಿಂದಲೂ ಮಠದಲ್ಲಿ ಸತತವಾಗಿ ಸಾಮೂಹಿಕ ವಿವಾಹ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರಲಾಗುತ್ತಿದೆ. 12ನೇ ಶತಮಾನದಿಂದ 20ನೇ ಶತಮಾನದವರೆಗೆ ಐತಿಹಾಸಿಕ ಮಹತ್ವ ಪಡೆದಿರುವ ಈ ಮಠವು ಅಧ್ಯಾತ್ಮ ಮತ್ತು ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದೆ. ಬೀಳಗಿ ತಾಲೂಕಿನಲ್ಲೇ ಅತಿ ವಿಜೃಂಭಣೆಯಿಂದ ನಡೆಯುವ ಜಾತ್ರೆ ಇದಾಗಿದೆ ಎಂದು ತಿಳಿಸಿದರು.ಶ್ರೀಗುರು ಸಂಗನಬಸವ ಶಿವಾಚಾರ್ಯರು ಹಾಗೂ ಮುಕ್ತಿನಾಥ ಶಿವಾಚಾರ್ಯರ ಗದ್ದುಗೆಗಳಿಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ ಮತ್ತು ಮಂಗಳಾರತಿ ನೆರವೇರಲಾಯಿತು. ಉಜ್ಜಯನಿ ಸದ್ಧರ್ಮ ಸಿಂಹಾಸನಾಧೀಶ್ವರ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಸಾನ್ನಿಧ್ಯದಲ್ಲಿ ಅದ್ಧೂರಿ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಿತು. ಸಮಾರಂಭದಲ್ಲಿ ನಿಡಗುಂದಿಯ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು, ಬಿಲ್ ಕೆರೂರ ಬಿಲ್ವಾಶ್ರಮದ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಮುತ್ತತ್ತಿ ಹಿರೇಮಠದ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಕೊಣ್ಣೂರ ಹೊರಗಿನಮಠದ ವಿಶ್ವಪ್ರಭುದೇವ ಶಿವಾಚಾರ್ಯ ಮಹಾಸ್ವಾಮಿಗಳು, ಮಸೂತಿ ಜಗಧೀಶ್ವರಮಠದ ಪ್ರಭುಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು, ಸಿಂದಗಿ ಸಾರಂಗಮಠದ ಡಾ.ಪ್ರಭುಸಾರಂಗದೇವರ ಶಿವಾಚಾರ್ಯ ಮಹಾಸ್ವಾಮಿಗಳು, ಬೀಳಗಿ ಕಲ್ಮಠದ ಗುರುಪಾದ ಶಿವಾಚಾರ್ಯ ಮಹಾಸ್ವಾಮಿಗಳು, ಕುಂದರಗಿ ಚರಂತಿಮಠದ ವೀರಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಆಲಮಟ್ಟಿ ಪುರವರ ಹಿರೇಮಠದ ಡಾ.ರುದ್ರಮುನಿದೇವರು, ಗಣ್ಯರಾದ ಕುಮಾರ್ ಯಳ್ಳಿಗುತ್ತಿ, ಪ್ರವೀಣ್ ಪಾಟೀಲ್, ಗುರುರಾಜ ಲೂತಿ ಸೇರಿದಂತೆ ಅನೇಕರು ಇದ್ದರು.ಗಿರಿಸಾಗರ ಗ್ರಾಮದಲ್ಲಿ ಪ್ರತಿ ವರ್ಷವೂ ಅದ್ಧೂರಿ ಜಾತ್ರಾ ಮಹೋತ್ಸವ ಸಮಾರಂಭ ಹಮ್ಮಿಕೊಂಡು ಭಕ್ತರ ಮನಸ್ಸಿನಲ್ಲಿ ಉತ್ತಮ ಸಂದೇಶ ಬೆಳೆಸುವ ಕಾರ್ಯ ಮಾಡುತ್ತಿರುವ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳ ಕಾರ್ಯ ಮೆಚ್ಚುವಂತದ್ದು. ಕಾಶಿ ಯಾತ್ರೆ ಮಾಡುವುದು ಜ್ಞಾನ, ಮೋಕ್ಷ ಹಾಗೂ ಶಿವ ನಿಷ್ಠೆಗಾಗಿ, ಜಾತ್ರೆಗಳಲ್ಲಿಯೇ ಶ್ರೀಶೈಲ ಮಲ್ಲಿಕಾರ್ಜುನ ಜಾತ್ರೆ ಅದ್ಧೂರಿಯಾದರೇ ಗಿರಿಸಾಗರ ಗ್ರಾಮದ ಜಾತ್ರೆಯೂ ಅದ್ಧೂರಿಯಾಗಿ ನೆಡೆಯುತ್ತಿದೆ.

-ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು, ಉಜ್ಜಯಿನಿ ಪೀಠದ ಜಗದ್ಗುರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟಾಪರ್‌ ರ್‍ಯಾಂಕ್‌ ಕೊಟ್ಟ ಶಾಲೆಯಲ್ಲಿ ಸೌಲಭ್ಯಗಳೇ ಇಲ್ಲ
ಕುಡಿಯುವ ನೀರಿಗೆ ಅಧಿಕಾರಿಗಳು ತುರ್ತು ಸ್ಪಂದಿಸಿ