- ಶ್ರೀ ವಾಣಿ ಕಲೆ, ಸಾಹಿತ್ಯ ಅಧ್ಯಯನ ಕೇಂದ್ರದಲ್ಲಿ ಉಪಾಕರ್ಮ ಧಾರ್ಮಿಕ ವಿಧಿ ವಿಧಾನ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಸಾವಿರಾರು ವರ್ಷಗಳ ಹಿಂದೆ ವೇದ ಮಂತ್ರಗಳನ್ನು ರಚಿಸಿ ಹಿಂದೂ ಧರ್ಮಕ್ಕೆ ನೀಡಿದ ಋಷಿ ಮುನಿಗಳಿಗೆ ಉಪಾಕರ್ಮ ದಂದು ತರ್ಪಣ ನೀಡಿ ಋಣ ಭಾರ ಕಳೆದುಕೊಳ್ಳಬೇಕು ಎಂದು ಮೃಗವಧೆಯ ಅಭಿನಂದನ್ ಭಟ್ ಹೇಳಿದರು.ಪಟ್ಟಣದ ಶ್ರೀ ವಾಣಿ ಕಲೆ ಮತ್ತು ಸಾಹಿತ್ಯ ಅಧ್ಯಯನ ಕೇಂದ್ರದ ಆವರಣದಲ್ಲಿ ಉಪಾಕರ್ಮ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿ ಮಾತನಾಡಿದರು. ಗುರಿ ಸಾಧಿಸಬೇಕಾದರೆ ಪ್ರತಿಯೊಬ್ಬ ಮನುಷ್ಯನು ಐದು ವಿಧವಾದ ದೇವಋಣ, ಪಿತೃಋಣ, ಮನುಷ್ಯ, ಭೂತ, ಋಷಿ ಋಣಗಳನ್ನು ವೇದೋಕ್ತ ಮಾರ್ಗದಿಂದ ಅನುಸರಿಸಿ ತೀರಿಸಬೇಕು. ಮನುಷ್ಯನ ಸುಖ ದುಃಖಗಳಿಗೆ ಜನ್ಮ ಜನ್ಮಾಂತರದಲ್ಲಿ ಮಾಡಿರುವ ಕರ್ಮ ಫಲಗಳೇ ಕಾರಣವಾಗಿರುತ್ತವೆ. ಈ ಕರ್ಮ ಫಲಗಳನ್ನು ಕಳೆದು ಭಗವಂತನ ಅನುಗ್ರಹ ಪಡೆಯುವುದೇ ಸಾಧನೆ ಎಂದರು.
ಶೋಡಷ ಕರ್ಮದಲ್ಲಿ ಉಪನಯನ ಒಂದು ಕರ್ಮವಾಗಿದ್ದು ಅದರ ಮುಂದುವರಿದ ಭಾಗವೇ ಉಪಾಕರ್ಮ. ಉಪಾಕರ್ಮ ದಂದು ವೇದಾಧ್ಯಯನ ಮಾಡಲು ಪ್ರಶಸ್ತ ದಿನವಾಗಿದ್ದು ಕೆಲವೆಡೆ ಇಂದಿಗೂ ನೂರಾರು ವಟುಗಳು ವೇದಾಧ್ಯಯನದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು. ಕೂಟ ಮಹಾಜಗತ್ತಿನ ಜಯಪುರ ಹಾಗೂ ಕೊಪ್ಪ ಅಂಗ ಸಂಸ್ಥೆಯ ವಕ್ತಾರ ಯಜ್ಞ ಪುರುಷ ಹೇರಳೆ ಮಾತನಾಡಿ, ಆಧುನಿಕತೆ ಭರಾಟೆಯಲ್ಲಿ ಸಂಪ್ರದಾಯಗಳು ದೂರವಾಗುತ್ತಿದೆ. ಪ್ರತಿಯೊಬ್ಬರು ಸಂಪ್ರದಾಯ ಮುಂದುವರಿಸಿಕೊಂಡು ಹೋಗಬೇಕು ಹಾಗೂ ಮಕ್ಕಳಿಗೆ ಸಂಪ್ರದಾಯದ ಅರಿವು ಮೂಡಿಸಬೇಕು ಎಂದರು.ಪುರೋಹಿತರಾದ ಮಂಜುನಾಥ್ ಭಟ್, ಸುನೀಲ್ ಭಟ್, ಮಾರ್ಕಾಂಡಯ ಭಟ್, ರಾಮಕೃಷ್ಣ ಭಟ್, ನಾಗರಾಜ್ ಭಟ್, ರಂಗನಾಥ್ ಹೊಳ್ಳ, ಶಿವಸ್ವಾಮಿ ಮತ್ತಿತರರು ಹಾಜರಿದ್ದರು. ೦೬ಬಿಹೆಚ್‌ಆರ್ ೩:ಬಾಳೆಹೊನ್ನೂರಿನ ಶ್ರೀ ವಾಣಿ ಕಲೆ ಮತ್ತು ಸಾಹಿತ್ಯ ಅಧ್ಯಯನ ಕೇಂದ್ರದ ಆವರಣದಲ್ಲಿ ಉಪಾಕರ್ಮ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.