ಮುಂಡರಗಿ: ಪಿಒಕೆ ಮರಳಿ ಪಡೆಯುವುದು ಭಾರತೀಯ ಯೋಧರ ಗುರಿಯಾಗಿದ್ದು, ದೇಶದ ಸೈನ್ಯ ಸಾಕಷ್ಟು ಪ್ರಬಲವಾಗಿದೆ. ದೇಶಕ್ಕಾಗಿ ಶ್ರಮಿಸುತ್ತಿರುವ ಯೋಧರಿಗೆ ಪ್ರತಿಯೊಬ್ಬ ಭಾರತೀಯರೂ ಗೌರವ ಕೊಡಬೇಕು ಎಂದು ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಮಾಜಿ ಸೈನಿಕ ರಮೇಶ ಮಾತನಾಡಿ, ನಮ್ಮ ದೇಶದ ಬಗ್ಗೆ ಮತ್ತು ಯೋಧರ ಬಗ್ಗೆ ಪ್ರತಿಯೊಬ್ಬರೂ ಅಭಿಮಾನ ಹೊಂದಿರಬೇಕು. ದೇಶಕ್ಕೆ ಅನ್ನ ನೀಡುವ ರೈತರಿಗೆ ಮತ್ತು ದೇಶದ ಗಡಿ ಕಾಯುವ ಯೋಧರಿಗೆ ಕೊಡುವ ಗೌರವ ಸೈನಿಕರಲ್ಲಿ ಮತ್ತಷ್ಟು ಶಕ್ತಿ ತುಂಬಲು ಸಾಧ್ಯ ಎಂದರು.
ಬಿಜೆಪಿ ಮುಂಡರಗಿ ಮಂಡಲದ ಅಧ್ಯಕ್ಷ ಹೇಮಗಿರೀಶ ಹಾವಿನಾಳ, ಕೊಟ್ರೇಶ ಅಂಗಡಿ ಮಾತನಾಡಿ, ಉಗ್ರರನ್ನು ಸದೆಬಡಿದ ನಮ್ಮ ಯೋಧರನ್ನು ಇಡೀ ದೇಶವೇ ಸ್ಮರಿಸಿ, ಬೆಂಬಲಿಸುತ್ತಿದೆ. ದೇಶವನ್ನು ಸದಾ ಸಂರಕ್ಷಿಸಿಕೊಳ್ಳುವಂತಹ ಶಕ್ತಿ ಭಾರತಕ್ಕಿದ್ದು, ಉಗ್ರರನ್ನು ಪೋಷಿಸುವ ದೇಶಕ್ಕೆ ತಕ್ಕ ಪಾಠ ಕಲಿಸಲಾಗುತ್ತಿದೆ. ದೇಶದ ಯೋಧರಿಗೆ ಗೌರವ ಮತ್ತು ಬೆಂಬಲಿಸುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯವಾಗಿದೆ ಎಂದರು.ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ಸದಸ್ಯರಾದ ಜ್ಯೋತಿ ಹಾನಗಲ್, ತಿಮ್ಮಪ್ಪ ದಂಡಿನ, ಎಸ್.ಎಸ್. ಗಡ್ಡದ, ಪ್ರಶಾಂತಗೌಡ ಗುಡದಪ್ಪನವರ, ರವೀಂದ್ರಗೌಡ ಪಾಟೀಲ, ಶಿವಕುಮಾರ ಕುರಿ, ರಂಗಪ್ಪ ಕೋಳಿ, ರಮೇಶ ಹುಳಕಣ್ಣವರ, ಮೈಲಾರಪ್ಪ ಕಲಕೇರಿ, ಅಶೋಕ ಚೂರಿ, ಪವಿತ್ರಾ ಕಲ್ಲಕುಟಿಗರ, ಅರುಣಾ ಪಾಟೀಲ, ಪುಷ್ಪಾ ಉಕ್ಕಲಿ, ಅಂಬವ್ವ ಕಟ್ಟೀಮನಿ, ಬಸವರಾಜ ಚಿಗಣ್ಣವರ, ಮಾರುತಿ ನಾಗರಹಳ್ಳಿ, ಶ್ರೀನಿವಾಸ ಅಬ್ಬಿಗೇರಿ, ಪರಶುರಾಮ ಕರಡಿಕೊಳ್ಳ, ಗಿರೀಶ ಶೀರಿ, ಧ್ರುವಕುಮಾರ ಹೂಗಾರ, ದಾವಲ ನಮಾಜಿ, ವೆಂಕಪ್ಪ ಪುರದ, ಬಸನಗೌಡ ಪಾಟೀಲ, ಅಂದಪ್ಪ ಉಳ್ಳಾಗಡ್ಡಿ, ಜಿಲ್ಲಾ ಮಾಜಿ ಸೈನಿಕ ಸಂಘದ ಅಧ್ಯಕ್ಷ ಬಸಲಿಂಗಪ್ಪ ಮುಂಡರಗಿ, ತಾಲೂಕಾಧ್ಯಕ್ಷ ವಾಸಪ್ಪ ಕಾಶಭೋವಿ, ರೇವಣಸಿದ್ದಯ್ಯ, ವೆಂಕಪ್ಪ ಕಲಹಾಳ, ಹನುಮಂತಪ್ಪ ಮೇಗೂರ, ಶರಣಪ್ಪ ಹಲವಾಗಲಿ, ಗೌಸು ನದಾಫ್, ರಾಘವೇಂದ್ರ ಹಡಪದ ಪಾಲ್ಗೊಂಡಿದ್ದರು.