ಕೆ.ಎಂ.ದೊಡ್ಡಿ:
ಧ್ವಜಾರೋಹಣ ನೆರವೇರಿಸಿದ ಯೋಧ ಸುರೇಶ್, ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಮಹನೀಯರ ಹೋರಾಟಗಳು, ತ್ಯಾಗ ಮತ್ತು ಬಲಿದಾನ ಕಾರಣವಾಗಿದೆ ಎಂದರು.
ಇಂದಿನ ಸೈನಿಕರು ದೇಶದ ಗಡಿ ರಕ್ಷಣೆಯಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದು, ಅವರ ಸೇವೆಗೆ ಪ್ರತಿಯೊಬ್ಬ ನಾಗರಿಕರೂ ಗೌರವ ಸಲ್ಲಿಸಬೇಕು ಎಂದು ತಿಳಿಸಿದರು. ಈ ವೇಳೆ ಶಾಲೆ ಅಧ್ಯಕ್ಷೆ ಡಾ.ಸೌಮ್ಯ ರಾಜೇಶ್, ಕಾರ್ಯದರ್ಶಿ ಶಿವಮ್ಮ ಶಿವಕುಮಾರ್, ಟ್ರಸ್ಟಿಯಾದ ತೇಜಸ್ವಿನಿ ತಿಪ್ಪಾರೇಗೌಡ , ಆಡಳಿತ ಅಧಿಕಾರಿ ಪ್ರಭಾವತಿ ಸುರೇಶ್ ಮತ್ತು ಪ್ರಾಂಶುಪಾಲೆ ಕೆ.ಎಸ್. ಶೃತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಮಹನೀಯರ ಆದರ್ಶ ಯುವ ಜನಾಂಗಕ್ಕೆ ಸ್ಫೂರ್ತಿ: ಚಿಕ್ಕ ಬೋರಯ್ಯ
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗ ಬಲಿದಾನ ಇಂದಿನ ಯುವ ಜನಾಂಗಕ್ಕೆ ಸ್ಫೂರ್ತಿ ಯಾಗಬೇಕು ಎಂದು ಮುಖ್ಯ ಶಿಕ್ಷಕ ಚಿಕ್ಕ ಬೋರಯ್ಯ ತಿಳಿಸಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುರೇಶ್ ಧ್ವಜಾರೋಹಣ ನೆರವೇರಿಸಿದರು. ಎಚ್.ಎಲ್.ನಾಗರಾಜು ಸಮಾರಂಭ ಉದ್ಘಾಟಿಸಿದರು.
ಟ್ರ್ಯಾಕ್ಟರ್ ಶೋ ರೂಮ್ ಮಾಲೀಕ ಮದನ್ ಅವರು ಶಾಲಾ ವಿದ್ಯಾರ್ಥಿಗಳಿಗೆ ಟ್ರ್ಯಾಕ್ ಶೂಟ್ ವಿತರಿಸಿದರು.