ಜನನ- ಮರಣ ಪತ್ರ ಶುಲ್ಕ ಕಡಿತಕ್ಕೆಒತ್ತಾಯ

KannadaprabhaNewsNetwork |  
Published : Feb 13, 2025, 12:46 AM IST
45 | Kannada Prabha

ಸಾರಾಂಶ

ಜನನ ಪತ್ರ ಮರಣ ಪತ್ರ ಪಡೆಯುವ ಪ್ರತಿಯ ಶುಲ್ಕವನ್ನ 5 ರು. ಗಳಿಂದ 50 ರು. ಗಳಿಗೆ ಏಕಾಏಕಿ ಹೆಚ್ಚಿಸಿದ್ದು

ಕನ್ನಡಪ್ರಭ ವಾರ್ತೆ ಮೈಸೂರುಜನನ- ಮರಣ ಪತ್ರ ಪಡೆಯುವುದಕ್ಕೆ ಸಾರ್ವಜನಿಕರು ದುಬಾರಿ ಶುಲ್ಕ ಪಾವತಿ ಮಾಡಿ ಪ್ರತಿದಿನ ಅಲೆಯುತ್ತಿದ್ದು, ನಗರದ ಸ್ಮಶಾನಗಳಲ್ಲಿ ಮರಣ ನೊಂದಣಿ ವಿವರವನ್ನು ಗಣಕೀಕೃತ ಮಾಡುವಂತೆ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ನಗರ ಘಟಕದಿಂದ ಮೈಸೂರು ಮಹಾ ನಗರಪಾಲಿಕೆಯ ಹೆಚ್ಚುವರಿ ಆಯುಕ್ತೆ ಎಸ್. ಕುಸುಮ ಕುಮಾರಿಗೆ ಮನವಿ ಮಾಡಿದರು.ಮನವಿ ಪತ್ರದಲ್ಲಿ ಮೈಸೂರು ನಗರದಲ್ಲಿ ಸ್ಮಶಾನ ಅಭಿವೃದ್ಧಿ ಪಡಿಸಿ ಸರಿಯಾದ ಮೂಲಭೂತ ವ್ಯವಸ್ಥೆಯನ್ನು ನಾಗರೀಕರಿಗೆ ಕಲ್ಪಿಸುವುದು ಪ್ರತಿಯೊಂದು ಮನೆಯಿಂದ ವಾರ್ಷಿಕ ತೆರಿಗೆ ಸಂಗ್ರಹ ಮಾಡುವ ಮೈಸೂರು ಮಹಾ ನಗರಪಾಲಿಕೆ ಆದ್ಯ ಕರ್ತವ್ಯ ಗ್ರಾಹಕ ಪಂಚಾಯತ್ ತಿಳಿಸಿದೆ.ಜನನ ಪತ್ರ ಮರಣ ಪತ್ರ ಪಡೆಯುವ ಪ್ರತಿಯ ಶುಲ್ಕವನ್ನ 5 ರು. ಗಳಿಂದ 50 ರು. ಗಳಿಗೆ ಏಕಾಏಕಿ ಹೆಚ್ಚಿಸಿದ್ದು, ಆರ್ಥಿಕ ನೀತಿಯ ವಿರೋಧ ಅವೈಜ್ಞಾನಿಕ ಕ್ರಮವಾಗಿದೆ, ಇದರಿಂದ ಮೈಸೂರಿನ ನಾಗರೀಕರು ಪರದಾಡುವಂತಾಗಿದೆ ಹಾಗಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ದರವನ್ನು ಎಂದಿನಂತೆ ಮಾರ್ಪಾಡುಗೊಳಿಸಬೇಕಿದೆ ಮತ್ತು ನಗರದ ಸ್ಮಶಾನಗಳಲ್ಲಿ ಅಂತ್ಯಕ್ರಿಯೆ ನಡೆಯುವ ಸಂಧರ್ಭದಲ್ಲಿ ಸತ್ತ ವ್ಯಕ್ತಿಗಳ ಮಾಹಿತಿ ನಮೂದಿಸುವ ಬಿಜಿಆರ್. ರಿಪೋರ್ಟ್ ಹೆಸರು, ಆಧಾರ್ ಕಾರ್ಡ್ ಸಂಖ್ಯೆ, ಮನೆ ವಿಳಾಸ, ಅಂತ್ಯಸಂಸ್ಕಾರ ಮಾಡುವ ವ್ಯಕ್ತಿಯ ಮಾಹಿತಿ ಸಮಯ ಜಿಪಿಎಸ್ ಫೋಟೋ ಏಕಕಾಲದಲ್ಲೆ ನಮೂದಿಸುವಂತೆ ಗಣಕೀಕೃತ ಮಾಡಿ ಪ್ರತಿದಿನ ಮೈಸೂರಿನ ಸ್ಮಶಾನದ ಅಂತ್ಯಸಂಸ್ಕಾರಗಳ ಮಾಹಿತಿಸ್ಥಳೀಯ ಸ್ಮಶಾನಗಳಲ್ಲಿ, ನಗರಪಾಲಿಕೆಯ ಸಂಭಂಧಪಟ್ಟ ಜನನ ಮರಣ ವಿಭಾಗ ಅಧಿಕಾರಿಯ ಬಳಿ ಸಕಾಲಕ್ಕೆ ಮಾಹಿತಿ ರವಾನೆಯಾಗುತ್ತದೆ. ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ನಗರ ಘಟಕದ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಬಿಜೆಪಿ ನಗರ ಉಪಾಧ್ಯಕ್ಷ ಜೋಗಿ ಮಂಜು, ನಿರೂಪಕ ಅಜಯ್ ಶಾಸ್ತ್ರಿ, ಮಹಾನ್ ಶ್ರೇಯಸ್ ಇದ್ದರು.

PREV

Recommended Stories

ಸರ್ಕಾರಿ ಯೋಜನೆ ತಲುಪಲು ‘ಅರಿವು’ ಕಾರ್ಯಕ್ರಮ ಸಹಕಾರಿ: ಯಶ್ಪಾಲ್‌ ಸುವರ್ಣ
ತಾಯಿ ಹೆಸರಿನಲ್ಲಿ ಒಂದು ಸಸಿ ಹಾಗೂ ಬೀಜದುಂಡೆ ಕಾರ್ಯಕ್ರಮಕ್ಕೆ ಚಾಲನೆ