ಬಿಪಿಎಲ್‌ನಿಂದ ಪಿಸಿಬಿ ಘಟಕ ಸ್ಥಾಪನೆ

KannadaprabhaNewsNetwork | Updated : May 30 2024, 09:17 AM IST

ಸಾರಾಂಶ

ಪ್ರಿಂಟೆಡ್‌ ಸರ್ಕ್ಯೂಟ್‌ ಬೋರ್ಡ್‌ಗಳ(ಪಿಸಿಬಿ) ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಪಿಸಿಬಿ ಘಟಕ ಸ್ಥಾಪನೆಗೆ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡಿರುವುದಾಗಿ ಬಿಪಿಎಲ್‌ ಸಂಸ್ಥೆ ತಿಳಿಸಿದೆ.

ಬೆಂಗಳೂರು : ಪ್ರಿಂಟೆಡ್‌ ಸರ್ಕ್ಯೂಟ್‌ ಬೋರ್ಡ್‌ಗಳ(ಪಿಸಿಬಿ) ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಪಿಸಿಬಿ ಘಟಕ ಸ್ಥಾಪನೆಗೆ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡಿರುವುದಾಗಿ ಬಿಪಿಎಲ್‌ ಸಂಸ್ಥೆ ತಿಳಿಸಿದೆ.

ಕೇಂದ್ರ ಸರ್ಕಾರದ ಮೇಕ್‌ ಇನ್‌ ಇಂಡಿಯಾ ಯೋಜನೆಯೊಂದಿಗೆ ಕೈಜೋಡಿಸಿ ಈ ಘಕವನ್ನು ಸ್ಥಾಪನೆ ಮಾಡಿದ್ದು ಮುಂದಿನ ದಿನಗಳಲ್ಲಿ ಪಿಸಿಬಿ ವ್ಯಾಪ್ತಿಯ ವಿಸ್ತರಣೆಗೆ ಸಹಕಾರಿಯಾಗಲಿದೆ. ಎಲೆಕ್ಟ್ರಾನಿಕ್ಸ್‌ ವಲಯದಲ್ಲಿ ಭಾರತದ ಸ್ವಾವಲಂಬನೆಯನ್ನು ಜಾಗತಿಕ ಮಟ್ಟದಲ್ಲಿ ಹೆಚ್ಚಿಸುವ ಉದ್ದೇಶದಿಂದ ಪಿಸಿಬಿ ಆರಂಭಿಸಲಾಗಿದೆ. ಈ ಪಿಸಿಬಿ ಘಟಕಗಳು ಅತ್ಯಾಧುನಿಕ ಸುಧಾರಿತ ಮೂಲಸೌಕರ್ಯಗಳನ್ನು ಒಳಗೊಂಡಿವೆ. ಪಿಸಿಬಿ ಉತ್ಪಾದನೆಗಾಗಿಯೇ ಉತ್ತಮ ಗುಣಮುಟ್ಟದ ಕೊಠಡಿಗಳನ್ನು ನಿರ್ಮಿಸಲಾಗಿದೆ.

ಹಾಗೆಯೇ ಪಿಸಿಬಿ ಉತ್ಪಾದನೆಗಾಗಿ 100ಕೆ ಕ್ಲೀನ್‌ರೂಮ್‌ಗಳ ಸ್ಥಾಪನೆಯಾದ್ದು, ಉತ್ಪಾದನೆಗೆ ಬೇಕಾದ ತಾಮ್ರದ ಶೇಖರಣೆಯನ್ನು ಸಹ ಮಾಡಿಕೊಳ್ಳಲಾಗಿದೆ. ಈ ಸಂಗ್ರಹದಿಂದ ಕಾರ್ಯನಿರ್ವಹಣೆ ಸುಗಮದಿಂದ ಸಾಗಲಿದ್ದು, ಆರ್‌ಎಫ್‌ ಆಂಟೆನಾ, ಆಟೋಮೋಟಿವ್ ಮತ್ತು ವಿದ್ಯುತ್ ಪರಿವರ್ತನೆಯಂತಹ ವಿಶೇಷ ವಿಭಾಗಗಳನ್ನು ಸಿದ್ಧಪಡಿಸಲಾಗಿದೆ. ಸ್ಟೇಟ್-ಆಫ್-ದಿ-ಆರ್ಟ್ ಟೆಸ್ಟಿಂಗ್ ವ್ಯವಸ್ಥೆಗಾಗಿ ಸೂಕ್ಷ್ಮ-ವಿಭಾಗದ ಪರಿಶೀಲನೆಯೂ ನಡೆಯುತ್ತಿದೆ.

ಭಾರತದಲ್ಲಿ ಪಿಸಿಬಿ ಮಾರುಕಟ್ಟೆ ಗಮನಾರ್ಹವಾಗಿ ಬೆಳವಣಿಗೆಯಾಗುತ್ತಿದೆ. 2024 ರಿಂದ 2032 ರವರೆಗೆ ಶೇ.18.1ರಷ್ಟು ಬೆಳವಣಿಗೆಯಾಗಲಿದೆ ಎಂದು ಅಂದಾಜಿಸಲಾಗಿದೆ. 2032 ರ ವೇಳೆಗೆ ಪಿಸಿಬಿ ಮಾರುಕಟ್ಟೆ 20.17 ಬಿಲಿಯನ್ ಡಾಲರ್ ತಲುಪುವ ನಿರೀಕ್ಷೆಯಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸುತ್ತಾರೆ. ಬಿಪಿಎಲ್‌ ವಿಸ್ತರಣೆಗೆ ಈ ಕಾರ್ಯಕ್ಕೆ ಸರ್ಕಾರದಿಂದಲೂ ಬೆಂಬಲ ಸಿಗಲಿದೆ.

ಪಿಸಿಬಿ ತಯಾರಿಕೆಯಲ್ಲಿ ಬಿಪಿಎಲ್ ಅಪಾರ ಅನುಭವ ಹೊಂದಿದೆ. 1989ರಿಂದಲೂ ಜಪಾನ್‌ನ ಸ್ಯಾನ್ಯೊದಿಂದ ತಾಂತ್ರಿಕ ನೆರವಿನೊಂದಿಗೆ ಪಿಸಿಬಿ ಉತ್ಪಾದನೆ ಮಾಡಲಾಗುತ್ತಿದೆ. ಕಳೆದ ಆರ್ಥಿಕ ವರ್ಷದಲ್ಲಿಯೂ ಬಿಪಿಎಲ್ ತನ್ನ ಉದ್ಯಮ ವಿಸ್ತರಣೆಗಾಗಿ ₹15 ಕೋಟಿ ಹೂಡಿಕೆ ಮಾಡಿತ್ತು ಎಂದು ಸಂಸ್ಥೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

Share this article