ಉದಯ ದುರ್ಗಪ್ಪಗೆ ಪಿಡಿಒ ಆಫ್ ದಿ ಮಂತ್ ಪ್ರಶಸ್ತಿ

KannadaprabhaNewsNetwork |  
Published : Feb 13, 2024, 12:45 AM IST
ಬೇಂಗ್ರೆ ಪಿಡಿಒ ಉದಯ ದುರ್ಗಪ್ಪ ಬೋರಕರ್ ಅವರಿಗೆ ಪಿಡಿಒ ಆಫ್‌ ದಿ ಮಂತ್ ಪ್ರಶಸ್ತಿಯನ್ನು ಪ್ರಸಾನಿಸಲಾಯಿತು. | Kannada Prabha

ಸಾರಾಂಶ

ಜಿಲ್ಲಾ ಪಂಚಾಯಿತಿಯಿಂದ ಪ್ರತಿ ತಿಂಗಳು ನೀಡಲಾಗುವ ಜಿಲ್ಲಾಮಟ್ಟದ ಪಿಡಿಒ ಆಫ್ ದಿ ಮಂತ್ ಪ್ರಶಸ್ತಿಯ ಜನವರಿ ತಿಂಗಳಿಗೆ ಭಟ್ಕಳ ತಾಪಂ ಪ್ರಭಾರ ಸಹಾಯಕ ನಿರ್ದೇಶಕ, ಬೇಂಗ್ರೆ ಪಿಡಿಒ ಉದಯ ದುರ್ಗಪ್ಪ ಬೋರಕರ್‌ಗೆ ಲಭಿಸಿದೆ.

ಕಾರವಾರ:

ಜಿಲ್ಲಾ ಪಂಚಾಯಿತಿಯಿಂದ ಪ್ರತಿ ತಿಂಗಳು ನೀಡಲಾಗುವ ಜಿಲ್ಲಾಮಟ್ಟದ ಪಿಡಿಒ ಆಫ್ ದಿ ಮಂತ್ ಪ್ರಶಸ್ತಿಯ ಜನವರಿ ತಿಂಗಳಿಗೆ ಭಟ್ಕಳ ತಾಪಂ ಪ್ರಭಾರ ಸಹಾಯಕ ನಿರ್ದೇಶಕ, ಬೇಂಗ್ರೆ ಪಿಡಿಒ ಉದಯ ದುರ್ಗಪ್ಪ ಬೋರಕರ್‌ಗೆ ಜಿಪಂ ಸಿಇಒ ಈಶ್ವರಕುಮಾರ ಕಾಂದೂ ಪ್ರಮಾಣ ಪತ್ರ ವಿತರಿಸಿ ಅಭಿನಂದಿಸಿದರು.

ಇಲ್ಲಿನ ಜಿಪಂ ಕಚೇರಿಯಲ್ಲಿ ಸೋಮವಾರ ಪ್ರಶಸ್ತಿ ನೀಡಲಾಯಿತು. ಪ್ರಶಸ್ತಿ ಸ್ವೀಕರಿಸಿದ ಉದಯ, ಗ್ರಾಮ ಮಟ್ಟದಲ್ಲಿ ಸಮಸ್ಯೆಗಳ ನಿವಾರಣೆ ಹಾಗೂ ಜನರ ಜೀವನ ಮಟ್ಟ ಸುಧಾರಣೆಗಾಗಿ ನಿರಂತರ ಶ್ರಮಿಸುವ ಪಿಡಿಒಗಳ ಕಾರ್ಯವನ್ನು ಜಿಲ್ಲಾ ಹಾಗೂ ತಾಲೂಕು ಮಟ್ಟದ ಮೇಲಾಧಿಕಾರಿಗಳು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುವುದು ಅತ್ಯಂತ ಸಂತಸದ ಜತೆಗೆ. ಈ ತರಹದ ಪುರಸ್ಕಾರಗಳಿಂದ ಗ್ರಾಮೀಣ ಜನರಿಗೆ ಸರ್ಕಾರದ ವಿವಿಧ ಯೋಜನೆಗಳ ಸಿಗುವಂತಹ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸಲು ಪ್ರೇರಣೆ ಸಿಕ್ಕಂತಾಗಿದೆ ಎಂದರು.ವಿಕೇಂದ್ರೀಕರಣ ವ್ಯವಸ್ಥೆಯಡಿ ಸ್ಥಾಪಿತವಾದ ಗ್ರಾಮ ಪಂಚಾಯಿತಿ ಗ್ರಾಮೀಣ ಜನರಿಗೆ ಅತೀ ಅವಶ್ಯಕ ಮೂಲಭೂತ ಸೌಕರ್ಯ ಒದಗಿಸುವಂತಹ ಮಹತ್ತರ ಪಾತ್ರವಹಿಸುತ್ತಿದೆ. ಇಲ್ಲಿ ಮೇಲಾಧಿಕಾರಿಗಳ ಮಾರ್ಗದರ್ಶನ, ಚುನಾಯಿತ ಜನಪ್ರತಿನಿಧಿಗಳ ಸಹಕಾರ, ಸಿಬ್ಬಂದಿ ವರ್ಗದವರ ಕಾರ್ಯ ನಿರ್ವಹಣೆಯಿಂದ ಮಾತ್ರ ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಿದ್ದು, ಸಹಕರಿಸಿದ ಹಾಗೂ ಪ್ರಶಸ್ತಿಗೆ ಪರಿಗಣಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.ಕಾರವಾರ ಉಪ ವಿಭಾಗಾಧಿಕಾರಿ ಕನಿಷ್ಕ, ಜಿಪಂ ಆಡಳಿತ ಶಾಖೆಯ ಉಪ ಕಾರ್ಯದರ್ಶಿ ನಾಗೇಶ ರಾಯ್ಕರ, ಅಭಿವೃದ್ಧಿ ಶಾಖೆಯ ಉಪ ಕಾರ್ಯದರ್ಶಿ ಎನ್.ಜಿ. ನಾಯಕ, ಮುಖ್ಯ ಯೋಜನಾಧಿಕಾರಿ ವಿನೋದ ಅಣ್ವೇಕರ ಇದ್ದರು.

ಪ್ರಶಸ್ತಿ:ಉದಯ ಬೋರಕರ್ ಡಿಎಡ್, ಬಿಎ ಪದವೀಧರರಾಗಿದ್ದು, 2016ರಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಪ್ರಾರಂಭಿಸಿದ್ದಾರೆ. ಶಿರಾಲಿ, ಹಾಡವಳ್ಳಿ ಹಾಗೂ ಮುಂಡಳ್ಳಿ ಗ್ರಾಪಂಗಳಲ್ಲಿ ಕಾರ್ಯನಿರ್ವಹಿಸಿ ಪ್ರಸ್ತುತ ಬೇಂಗ್ರೆ ಗ್ರಾಪಂನಲ್ಲಿ ಪಿಡಿಒ ಹುದ್ದೆ ಕಾರ್ಯ ನಿರ್ವಹಿಸುವ ಜತೆಗೆ ಭಟ್ಕಳ ತಾಪಂ ನರೇಗಾ ಸಹಾಯಕ ನಿರ್ದೇಶಕ ಹುದ್ದೆಯ ಪ್ರಭಾರ ವಹಿಸಿಕೊಂಡಿದ್ದಾರೆ. ಇವರ ಕಾರ್ಯಾವಧಿಯಲ್ಲಿ ಗಾಂಧಿ ಗ್ರಾಮ ಪುರಸ್ಕಾರ ಹಾಗೂ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ODF ಪ್ರಶಸ್ತಿ ಲಭಿಸಿವೆ. 2023-24ನೇ ಸಾಲಿನಲ್ಲಿ ಈಗಾಗಲೇ 63 ಶೌಚಾಲಯ ಪೂರ್ಣಗೊಳಿಸಿದ್ದು, ತಾಲೂಕಿನ ಗರಿಷ್ಠ ಸಾಧನೆಯಾಗಿದೆ. ಬೂದು ನೀರು ನಿರ್ವಹಣೆಗೆ ಸಂಬಂಧಿಸಿದಂತೆ ಬೆಂಗ್ರೆ ಮಜರೆ ಆಯ್ದುಕೊಂಡು ಸದರಿ ಮಜರೆಯ ಎಲ್ಲ ಮನೆಗಳಲ್ಲಿ ವೈಯಕ್ತಿಕ ಬೂದು ನೀರಿನ ರಚನೆ ಮಾಡಲಾಗಿದೆ.

PREV

Recommended Stories

ವಿಶ್ವಾದ್ಯಂತ ಒಂದೇ ದಿನ ಕಾಂತಾರ ಚಾಪ್ಟರ್ 1 ಬಿಡುಗಡೆ
ಈರುಳ್ಳಿ, ಹೂ, ಪಚ್ಚ ಬಾಳೆ ಬೆಲೆ ಧರೆಗೆ!