ಪಿಡಿಒ ಮರುನಿಯೋಜನೆ, ಗ್ರಾಪಂ ಪರ, ವಿರೋಧ ಗುಂಪುಗಳಿಂದ ಪ್ರತಿಭಟನೆ

KannadaprabhaNewsNetwork |  
Published : Oct 10, 2025, 01:01 AM IST
ಪೊಟೋ ಪೈಲ್ ನೇಮ್ ೯ಎಸ್‌ಜಿವಿ೧  ತಾಲೂಕಿನ ಹಳೆಬಂಕಾಪುರ ಗ್ರಾಮ ಪಂಚಾಯಿತಿಗೆ ಅಭಿವೃದ್ಧಿ ಅಧಿಕಾರಿಯಾಗಿ ವಾಣಿ ಅಲ್ಲಯ್ಯನವರನ್ನು ಮರು ನಿಯೋಜನೆ ಮಾಡಿದ್ದಕ್ಕೆ ಪರ–ವಿರುದ್ಧ ಗುಂಪುಗಳಿAದ  ಪ್ರತಿಭಟನೆ ನಡೆಯಿತು. | Kannada Prabha

ಸಾರಾಂಶ

ಶಿಗ್ಗಾಂವಿ ತಾಲೂಕಿನ ಹಳೆಬಂಕಾಪುರ ಗ್ರಾಮ ಪಂಚಾಯಿತಿಗೆ ಅಭಿವೃದ್ಧಿ ಅಧಿಕಾರಿಯಾಗಿ ವಾಣಿ ಅಲ್ಲಯ್ಯನವರನ್ನು ಮರು ನಿಯೋಜನೆ ಮಾಡಿದ್ದಕ್ಕೆ ಪರ–ವಿರುದ್ಧ ಗುಂಪುಗಳಿಂದ ಪ್ರತಿಭಟನೆ ನಡೆಯಿತು.

ಶಿಗ್ಗಾಂವಿ: ತಾಲೂಕಿನ ಹಳೆಬಂಕಾಪುರ ಗ್ರಾಮ ಪಂಚಾಯಿತಿಗೆ ಅಭಿವೃದ್ಧಿ ಅಧಿಕಾರಿಯಾಗಿ ವಾಣಿ ಅಲ್ಲಯ್ಯನವರನ್ನು ಮರು ನಿಯೋಜನೆ ಮಾಡಿದ್ದಕ್ಕೆ ಪರ–ವಿರುದ್ಧ ಗುಂಪುಗಳಿಂದ ಪ್ರತಿಭಟನೆ ನಡೆಯಿತು.ಪಿಡಿಒ ವಾಣಿ ಅಲ್ಲಯ್ಯನವರನ್ನು ಹಳೆಬಂಕಾಪುರ ಗ್ರಾಮ ಪಂಚಾಯಿತಿಯಿಂದ ಗುಡ್ಡದಚನ್ನಾಪುರಕ್ಕೆ ವರ್ಗಾವಣೆ ಮಾಡಿದ ಆದೇಶವನ್ನು ರದ್ದು ಮಾಡಿ, ಹಳೆಬಂಕಾಪುರ ಗ್ರಾಮ ಪಂಚಾಯಿತಿಗೆ ಮರುನಿಯೋಜನೆ ಮಾಡಿರುವುದನ್ನು ಖಂಡಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ ಶೆಟ್ಟೆಣ್ಣವರ ನೇತೃತ್ವದಲ್ಲಿ ಗ್ರಾ.ಪಂ. ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ವಾಣಿ ಅಲ್ಲಯ್ಯನವರ ಅಧಿಕಾರ ಅವಧಿಯಲ್ಲಿ ಹಲವಾರು ಅವ್ಯವಹಾರ ನಡೆದಿವೆ. ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ಮಾತಿಗೆ ಮನ್ನಣೆ ನೀಡದೆ ಸರ್ವಾಧಿಕಾರಿಯಂತೆ ವರ್ತಿಸಿದ್ದಾರೆ. ಕೆಲವು ಸದಸ್ಯರನ್ನು ತಮ್ಮ ತಮ್ಮ ಹಿಡಿತದಲ್ಲಿ ಇರಿಸಿಕೊಂಡು, ಗ್ರಾಮದ ಅಭಿವೃದ್ಧಿ ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು.

ಇವರ ಅಧಿಕಾರ ಅವಧಿಯಲ್ಲಿ ನಡೆದ ಅವ್ಯವಹಾರಗಳ ಕುರಿತು ತನಿಖೆ ನಡೆಸಬೇಕು. ಸರ್ಕಾರದ ಆದೇಶದಂತೆ ಗುಡ್ಡದಚನ್ನಾಪುರದಿಂದ ಹಳೆಬಂಕಾಪುರ ಗ್ರಾಮಕ್ಕೆ ವರ್ಗಾವಣೆಗೊಂಡ ಕವಿತಾ ಕೊಡ್ಲಿವಾಡ ಅವರನ್ನೇ ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ಮಾಲತೇಶ ಭಾವಿಕಟ್ಟಿ, ಸುರೇಶ ಮುರಾರಿ, ಗಂಗಮ್ಮ ಹರಿಜನ, ನಿರ್ಮಲಾ ಈಳಗೇರ, ರುಕ್ಮವ್ವ ತಳವಾರ, ರಮೇಶ ಹಿತ್ತಲಮನಿ, ಉಳವಪ್ಪ ಗುದಗಿ, ಮುದಕಪ್ಪ ಮಲ್ಲಾಡದ, ನಾಗರಾಜ ಪಾಟೀಲ, ನಾಗಣ್ಣ ಅಂಗಡಿ, ಮುರಗೆಪ್ಪ ಮುರಾರಿ, ಬಸವರಾಜ ಹರಿಜನ, ಹನುಮಂತಪ್ಪ ತಳ್ಳಿಹಳ್ಳಿ, ಸುಭಾಷ ತಳವಾರ ಇದ್ದರು. ಪಿಡಿಒ ಸೇವೆ ಮುಂದುವರಿಸಿ: ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗಿರೀಶ ಬೈಲವಾಳ ನೇತೃತ್ವದ ಮತ್ತೊಂದು ತಂಡ, ಪಿಡಿಒ ವಾಣಿ ಅಲ್ಲಯ್ಯನವರನ್ನು ಹಳೆಬಂಕಾಪುರ ಗ್ರಾಮ ಪಂಚಾಯಿತಿಯಲ್ಲೇ ಮುಂದುವರಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿತು. ವಾಣಿ ಅವರ ಅಧಿಕಾರಾವಧಿಯಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಸಮರ್ಪಕವಾಗಿ ಮಾಡಿದ್ದಾರೆ. ಗ್ರಾಮದ ಅಭಿವೃದ್ಧಿಗೆ ಅವರ ಸೇವೆ ಅತ್ಯವಶ್ಯವಾಗಿದೆ ಎಂದರು. ಈ ಸಂದರ್ಭದಲ್ಲಿ ಎರಡು ಬಣಗಳ ನಡುವೆ ಮಾತಿನ ಚಕಮಕಿ ನಡೆಯಿತು. ಸ್ಥಳಕ್ಕೆ ಆಗಮಿಸಿದ ಪಿಎಸ್‌ಐ ಮಂಜುನಾಥ ಕುರಿ ನೇತೃತ್ವದ ಪೊಲೀಸ್ ಸಿಬ್ಬಂದಿ ಹಾಗೂ ತಾಲೂಕು ಪಂಚಾಯಿತಿ ಎನ್.ಆರ್.ಜಿ. ಸಹಾಯಕ ನಿರ್ದೇಶಕ ನೃಪತಿ ಬೂಸರೆಡ್ಡಿ, ಪ್ರಕಾಶ ಔದಕರ ಸ್ಥಳಕ್ಕೆ ಭೇಟಿ ನೀಡಿದರು. ಎರಡೂ ಬೇಡಿಕೆಯನ್ನು ಮೇಲಧಿಕಾರಿಗಳ ಗಮನಕ್ಕೆ ತರುವುದು. ಅವ್ಯವಹಾರ ಆರೋಪದ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

PREV

Recommended Stories

ಸಂಪುಟ ಪುನರ್‌ ರಚನೆ ಸುಳಿವು : ದಲಿತ ಸಚಿವರ ಸಭೆ!
ಶೂದ್ರ ಶ್ರೀನಿವಾಸ್‌ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ