ಲೋಕಕಲ್ಯಾಣಾರ್ಥವಾಗಿ ನಡೆಸುವ ಪ್ರತ್ಯಂಗಿರಾ ಹೋಮವು ಸಮಾಜದಲ್ಲಿ ಶಾಂತಿ, ಸಮೃದ್ಧಿ ಮತ್ತು ನಕಾರಾತ್ಮಕ ಶಕ್ತಿಗಳ ನಿವಾರಣೆಗಾಗಿ ಕೈಗೊಳ್ಳುವ ಅತ್ಯಂತ ಶಕ್ತಿಶಾಲಿ ಹಾಗೂ ಉಗ್ರ ಸ್ವರೂಪದ ವೈದಿಕ ಯಜ್ಞವಾಗಿದೆ ಎಂದು ಕಡೆ ನಂದಿಹಳ್ಳಿ ದುಗ್ಲಿಯ ರೇವಣಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಶಿಗ್ಗಾಂವಿ: ಲೋಕಕಲ್ಯಾಣಾರ್ಥವಾಗಿ ನಡೆಸುವ ಪ್ರತ್ಯಂಗಿರಾ ಹೋಮವು ಸಮಾಜದಲ್ಲಿ ಶಾಂತಿ, ಸಮೃದ್ಧಿ ಮತ್ತು ನಕಾರಾತ್ಮಕ ಶಕ್ತಿಗಳ ನಿವಾರಣೆಗಾಗಿ ಕೈಗೊಳ್ಳುವ ಅತ್ಯಂತ ಶಕ್ತಿಶಾಲಿ ಹಾಗೂ ಉಗ್ರ ಸ್ವರೂಪದ ವೈದಿಕ ಯಜ್ಞವಾಗಿದೆ ಎಂದು ಕಡೆ ನಂದಿಹಳ್ಳಿ ದುಗ್ಲಿಯ ರೇವಣಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಚಿಕ್ಕಬೆಂಡಿಗೇರಿ ಗ್ರಾಮದಲ್ಲಿ ಸಂತೋಷ ಮಾತಾ ಜ್ಯೋತಿಷ್ಯ ಸಂಶೋಧನಾ ಕೇಂದ್ರ. ಕಾಳಿಕಾದೇವಿ ಶಕ್ತಿಪೀಠ ಬೃಹಸ್ಪತಿ ಗ್ರಹದಲ್ಲಿ ಜರುಗಿದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ಈ ಪೂಜೆಯು ದುಷ್ಟ ಶಕ್ತಿಗಳನ್ನು ಓಡಿಸಿ, ಲೋಕದಲ್ಲಿ ಧರ್ಮ ಮತ್ತು ಧನಾತ್ಮಕತೆಯನ್ನು ನೆಲೆಗೊಳಿಸಲು ಹಾಗೂ ಸಮಸ್ತ ಜನತೆಯ ರಕ್ಷಣೆಗಾಗಿ ಅರ್ಪಿತವಾಗಿದೆ ಎಂದರು.
ಸುಕ್ಷೇತ್ರ ಅಂಕಲಿಮಠದ ತಪೋ ಕ್ಷೇತ್ರದ ವೀರಭದ್ರ ಮಹಾಸ್ವಾಮಿಗಳು, ವೀರಭದ್ರ ಮಹಾಸ್ವಾಮಿಗಳು ಸಮ್ಮಖವನ್ನು ವಹಿಸಿದ್ದರು. ಇಷ್ಟಲಿಂಗ ಮಹಾಪೂಜಾ ನಂತರ ಶ್ರೀಗಳವರಿಗೆ ತುಲಾಭಾರ ಸೇವೆ, ಪೂಜಾ ಕಾರ್ಯಕ್ರಮ ಜರುಗಿದವು.
ಸಾವಿರಕ್ಕೂ ಹೆಚ್ಚು ವನಸ್ಪತಿಗಳು, ಸಾವಿರ ಕಿಲೋ ತೂಕದಷ್ಟು ಮೆಣಸಿನ ಕಾಯಿಯೊಂದಿಗೆ ಪ್ರತ್ಯಂಗಿರಾ ಹೋಮ ಪೂಜೆ ನೆರವೇರಿಸಲಾಯಿತು ಎಂದು ಲಿಂಗಾಯತ ಸಂಘಟನಾ ವೇದಿಕೆಯ ಪುರೋಹಿತ ಘಟಕದ ರಾಜ್ಯ ಉಪಾಧ್ಯಕ್ಷ ಸಂತೋಷ ಕುಮಾರಯ್ಯ ಶಾಸ್ತ್ರಿಗಳು ಬಾಗಲಕೋಟಿಮಠ ಹೇಳಿದರು. ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ಸಿದ್ದೇಶ್ ನೇತೃತ್ವ ತಂಡ ತಿಪಟೂರು ಸಂತೋಷ ಕುಮಾರಯಾ, ಡಾ. ಮಂಜುನಾಥ್ ಆರಾಧ್ಯ ಕೊಳ್ಳೇಗಾಲ, ಶಿವಶಂಕರಯ್ಯ ಶಾಸ್ತ್ರಿಗಳು ಹಿರೇಮಠ. ಗಂಗಾಧರಯ್ಯ ಹುಚ್ಚಯ್ಯನವರಮಠ, ಕಲ್ಲಯ್ಯ ಹಿರೇಮಠ್, ಬಸಯ್ಯ ಹಿರೇಮಠ, ಚನ್ನವೀರಯ್ಯ ಶಾಸ್ತ್ರಿಗಳು, ಚನ್ನಬಸಯ್ಯ ಹಿರೇಮಠ ಸೇರಿ ಇನ್ನು ಹಲವಾರು ಶಾಸ್ತ್ರಿಗಳವರಿಂದ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಕೆಸಿಸಿ ಬ್ಯಾಂಕ್ ನಿರ್ದೇಶಕ ಸಂಗಮೇಶ್ವರ ಕಂಬಾಳಿಮಠ, ಕೆಎಂಎಫ್ ನಿರ್ದೇಶಕ ತಿಪ್ಪಣ್ಣ ಸಾತಣ್ಣವರ್, ಜಿಲ್ಲಾ ಉಪಾಧ್ಯಕ್ಷ ಶಿವಾನಂದ ಮ್ಯಾಗೇರಿ, ಉದ್ಯಮಿಗಳಾದ ನರಹರಿ ಕಟ್ಟಿ, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಚಂಬಣ್ಣ ಮ್ಯಾಗೇರಿ, ಸಮಾಜ ಸೇವಕರಾದ ಬಸವಂತಪ್ಪ ಮೇಗೇರಿ, ಉಮೇಶ ಬೆನಕನಹಳ್ಳಿ, ರುದ್ರಗೌಡ ಪಾಟೀಲ್, ಹರ್ಕೆ ಫಕೀರ ಗೌಡ, ಬೈಲಪ್ಪ ಗೌಡರು, ರುದ್ರಗೌಡ ನಡುವಿನಮನಿ ಅವರು ಧರ್ಮಗೌಡ ಬೈಲಪ್ ಗೌಡ್ರು, ಶಿವಾಯ್ ಕಟ್ಟಿಗೌಡ್ರ, ಈಶ್ವರ ಹರಕುಣ್ಣಿ, ನಬಿಸಾಬ ಪಾಲ್ಗೊಂಡರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.