ದೇಗುಲಗಳಿಂದ ಗ್ರಾಮಗಳಲ್ಲಿ ಶಾಂತಿ, ಸಮಾಧಾನ ಸಾಧ್ಯ

KannadaprabhaNewsNetwork | Published : Apr 9, 2024 12:46 AM

ಸಾರಾಂಶ

ಗ್ರಾಮಗಳಲ್ಲಿ ದೇವಾಲಯಗಳಿದ್ದರೆ ಶಾಂತಿ- ಸಮಾಧಾನ ಸಿಗುವುದು. ಜೊತೆಗೆ ನಾವು ಯಾವುದೇ ಕೆಲಸಗಳಿಗೆ ಹೋದರೂ ಯಶಸ್ಸು ಲಭಿಸುತ್ತದೆ. ಹಾಗೆಯೇ, ಪ್ರತಿ ದಿನವೂ ದೇವಾಲಯಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ಪೂಜೆಗಳು ನಡೆಯುತ್ತಿರಬೇಕು ಎಂದು ಹೊಸದುರ್ಗ ತಾಲೂಕಿನ ಚಿನ್ಮೂಲಾದ್ರಿ ಶಿಲಾಪುರಿ ಮಹಾ ಸಂಸ್ಥಾನದ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದ ಪುರಿ ಮಹಾಸ್ವಾಮೀಜಿ ಚನ್ನಗಿರಿಯಲ್ಲಿ ನುಡಿದಿದ್ದಾರೆ.

ಕನ್ನಡಪ್ರಭ ವಾರ್ತೆ, ಚನ್ನಗಿರಿ

ಗ್ರಾಮಗಳಲ್ಲಿ ದೇವಾಲಯಗಳಿದ್ದರೆ ಶಾಂತಿ- ಸಮಾಧಾನ ಸಿಗುವುದು. ಜೊತೆಗೆ ನಾವು ಯಾವುದೇ ಕೆಲಸಗಳಿಗೆ ಹೋದರೂ ಯಶಸ್ಸು ಲಭಿಸುತ್ತದೆ. ಹಾಗೆಯೇ, ಪ್ರತಿ ದಿನವೂ ದೇವಾಲಯಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ಪೂಜೆಗಳು ನಡೆಯುತ್ತಿರಬೇಕು ಎಂದು ಹೊಸದುರ್ಗ ತಾಲೂಕಿನ ಚಿನ್ಮೂಲಾದ್ರಿ ಶಿಲಾಪುರಿ ಮಹಾ ಸಂಸ್ಥಾನದ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದ ಪುರಿ ಮಹಾಸ್ವಾಮೀಜಿ ನುಡಿದರು.

ತಾಲೂಕಿನ ನಲ್ಲೂರು ಗ್ರಾಮದಲ್ಲಿ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ನೂತನ ದೇವಾಲಯ ಮತ್ತು ಶಿಲಾಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹಣ ಮತ್ತು ಮಹಾ ಕುಂಬಾಭಿಷೇಕ ಕಾರ್ಯಕ್ರಮ ಅಂಗವಾಗಿ ನಡೆದ ಧಾರ್ಮಿಕ ಸಮಾರಂಭದ ದಿವ್ಯ ಸಾನ್ನಿಧ್ಯ ಮತ್ತು ಉದ್ಘಾಟನೆಯನ್ನು ನೆರವೇರಿಸಿ ಅವರು ಆಶೀರ್ವಚನ ನೀಡಿದರು.

ರಾಂಪುರದ ಶ್ರೀ ಶಿವಕುಮಾರ ಹಾಲಸ್ವಾಮೀಜಿ ಮಾತನಾಡಿ, ದೇವಾಲಯಗಳಿದ್ದರೆ ಮನುಷ್ಯರಿಗೆ ನೆಮ್ಮದಿ ದೊರೆಯಲಿದೆ. ಯಾವುದೇ ಕೆಲಸ- ಕಾರ್ಯಗಳಿಗೆ ಹೋಗುವ ಮುನ್ನ ದೇವಸ್ಥಾನಗಳಿಗೆ ಹೋಗಿ, ನಮಸ್ಕಾರ ಮಾಡಬೇಕು. ಬಳಿಕ ಮುಂದೆ ಸಾಗಿದರೆ ಯಶಸ್ಸು ಲಭಿಸಲಿದೆ ಎಂದರು.

ಹೊನ್ನಾಳಿ ತಾಲೂಕು ರಾಂಪುರದ ಶ್ರೀ ಗುರು ಹಾಲಸ್ವಾಮಿ ಮಹಾಸಂಸ್ಥಾನ ಮಠದ ಶ್ರೀ ಶಿವಕುಮಾರ ಹಾಲಸ್ವಾಮಿಗಳು ಸಾನ್ನಿಧ್ಯದ ಕಾರ್ಯಕ್ರಮದಲ್ಲಿ ದೇವಾಲಯ ಧರ್ಮದರ್ಶಿ ದೊಡ್ಡಜ್ಜರ ರಂಗಪ್ಪ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, ಉಪ್ಪಾರ ಕಟ್ಟೆಮನೆ ಸಮಾಜದ ಅಧ್ಯಕ್ಷ ಆರ್.ಕೆಂಚಪ್ಪ, ಉಪ್ಪಾರ ಸಮಾಜದ ಪ್ರಮುಖ ಮುಖಂಡರಾದ ಯು.ಸಿ. ಹಾಲಪ್ಪ, ಆರ್.ಪರಮೇಶ್, ಉರುಮರುಡಪ್ಪ, ಗೋದಿಹುಗ್ಗಿ ರಂಗಪ್ಪ, ಗೌಡರ ರಂಗಪ್ಪ, ತಪಾಲಿ ಹನುಮಂತಪ್ಪ, ಚಂದ್ರಪ್ಪ, ಮೂಡ್ಗುಗಿರಿಯಪ್ಪ ರುದ್ರಪ್ಪ, ಬಾಗ್ಗಜ್ಜರ ಹನುಮಂತಪ್ಪ, ಆರ್.ಮಂಜಪ್ಪ, ಸಾವಿತ್ರಮ್ಮ, ಸಿ.ರವಿ, ಪದ್ಮ ಬಸವರಾಜ್, ಗಂಗಮ್ಮ ಆನಂದ್ ಹಾಜರಿದ್ದರು.

ಸಮಾರಂಭದಲ್ಲಿ ಶ್ರೀ ದುರ್ಗಾಂಬಿಕಾ ದೇವಾಲಯ ಪ್ರಧಾನ ಅರ್ಚಕ ಪೂಜಾರ್ ಹಾಲಪ್ಪ ಅವರನ್ನು ಸನ್ಮಾನಿಸಲಾಯಿತು.

- - - -8ಕೆಸಿಎನ್‌ಜಿ1:

ಧಾರ್ಮಿಕ ಸಮಾರಂಭದ ಉದ್ಘಾಟನೆಯನ್ನು ಹೊಸದುರ್ಗ ತಾಲೂಕಿನ ಚಿನ್ಮೂಲಾದ್ರಿ ಶಿಲಾಪುರಿ ಮಹಾಸಂಸ್ಥಾನದ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದ ಪುರಿ ಮಹಾಸ್ವಾಮೀಜಿ ನೆರವೇರಿಸಿದರು.

Share this article