ದೇವಾಲಯಗಳಿಂದ ಗ್ರಾಮಗಳಲ್ಲಿ ಶಾಂತಿ, ಸೌಹಾರ್ದತೆ: ನಿಶ್ಚಲಾನಂದನಾಥ ಸ್ವಾಮೀಜಿ

KannadaprabhaNewsNetwork |  
Published : Jan 29, 2026, 01:45 AM IST
28ಕೆಎಂಎನ್ ಡಿ17 | Kannada Prabha

ಸಾರಾಂಶ

ಪೂರ್ವಿಕರು ಹಾಕಿಕೊಟ್ಟ ಹಾದಿಯಲ್ಲಿ ಎಲ್ಲರೂ ಸಾಗಬೇಕು. ಆಚಾರಕ್ಕೆ ದೇವಾಲಯ, ವಿಚಾರಕ್ಕೆ ಶಾಲೆ, ಜೀವ ಜಲಕ್ಕೆ ಕೆರೆ ಕಟ್ಟೆಗಳು ಇದ್ದರೆ ಗ್ರಾಮೀಣ ಭಾಗವು ಸಮೃದ್ಧಿಯಾಗಿ ಸಮಾತೋಲನ ಕೂಡಿರುತ್ತದೆ. ನಮ್ಮಿಂದ ಸಾಧ್ಯವಾದಷ್ಟು ಮತ್ತೊಬ್ಬರಿಗೆ ದಾನ ನೀಡುವುದರಿಂದ ಘನತೆಯ ಜತೆಗೆ ಜೀವನದಲ್ಲಿ ಯಶಸ್ಸು ಸಿಕ್ಕಿ ಮೋಕ್ಷ ಸಿಗಲಿದೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ನಮ್ಮ ಸಂಸ್ಕೃತಿಯ ಪ್ರತಿಬಿಂಬಗಳಾಗಿರುವ ದೇವಾಲಯಗಳಿಂದ ಗ್ರಾಮಗಳಲ್ಲಿ ಶಾಂತಿ, ಸೌಹಾರ್ದತೆ ಇರಲಿದೆ ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ಸಮೀಪದ ಅರೇಚಾಕನಹಳ್ಳಿಯಲ್ಲಿ ಶ್ರೀ ಪಂಚಮುಖಿ ಆಂಜನೇಯಸ್ವಾಮಿ ಪ್ರತಿಷ್ಠಾಪನೆ, ನೂತನ ದೇವಾಲಯದ ಉದ್ಘಾಟನೆ ಹಾಗೂ ಕುಂಭಾಭಿಷೇಕ ಮಹೋತ್ಸವದಲ್ಲಿ ಸಾನಿಧ್ಯ ವಹಿಸಿ ಮಾತನಾಡಿ, ಸಂಸ್ಕೃತಿ, ಸಂಸ್ಕಾರ, ಶಿಸ್ತು, ಸಂಯಮ, ಮಾತೃಭಾವನೆ ಕಲಿಸುವ ದೇವಾಲಯಗಳು ನಾಡಿನ ಆಚಾರ ಕೇಂದ್ರಗಳಾಗಿ ಪ್ರತಿಯೊಂದು ಗ್ರಾಮಗಳಲ್ಲಿ ಇರಬೇಕು ಎಂದರು.

ಪೂರ್ವಿಕರು ಹಾಕಿಕೊಟ್ಟ ಹಾದಿಯಲ್ಲಿ ಎಲ್ಲರೂ ಸಾಗಬೇಕು. ಆಚಾರಕ್ಕೆ ದೇವಾಲಯ, ವಿಚಾರಕ್ಕೆ ಶಾಲೆ, ಜೀವ ಜಲಕ್ಕೆ ಕೆರೆ ಕಟ್ಟೆಗಳು ಇದ್ದರೆ ಗ್ರಾಮೀಣ ಭಾಗವು ಸಮೃದ್ಧಿಯಾಗಿ ಸಮಾತೋಲನ ಕೂಡಿರುತ್ತದೆ. ನಮ್ಮಿಂದ ಸಾಧ್ಯವಾದಷ್ಟು ಮತ್ತೊಬ್ಬರಿಗೆ ದಾನ ನೀಡುವುದರಿಂದ ಘನತೆಯ ಜತೆಗೆ ಜೀವನದಲ್ಲಿ ಯಶಸ್ಸು ಸಿಕ್ಕಿ ಮೋಕ್ಷ ಸಿಗಲಿದೆ ಎಂದರು.

ದೇವಾಲಯಕ್ಕೆ ಶಾಸಕ ಕೆ.ಎಂ.ಉದಯ್, ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ಮಾಜಿ ಶಾಸಕ ಡಿ.ಸಿ.ತಮ್ಮಣ್ಣ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಮತ್ತಿತರು ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಈ ವೇಳೆ ದೇವಾಲಯ ಅಭಿವೃದ್ಧಿ ಸಮಿತಿ ಸದಸ್ಯರಾದ ರಂಗೋಲಿ ಲೋಕೇಶ್, ಹನುಮೇಗೌಡ, ಪ್ರೇಮ್ ಕುಮಾರ್, ಚಿಕ್ಕ ಹನುಮೇಗೌಡ, ಮಹೇಶ್ ,ಮಹೇಂದ್ರ, ಪ್ರೀತಮ್ ಗೌಡ, ಶಿವಲಿಂಗೇಗೌಡ, ಜವರಾಯಿಗೌಡ, ಶಿವಶಂಕರ್(ಭದ್ರ) ಮತ್ತಿತರು ಇದ್ದರು.

ಜ.31 ರಂದು ರಾಜ್ಯ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ: ಎಚ್.ಸಿ.ಕೃಷ್ಣೇಗೌಡ

ಪಾಂಡವಪುರ: ಪಟ್ಟಣದ ಹೇಮಾವತಿ ಕಾಲೋನಿ ಬಳಿಯ ಬನ್ನಿಮಂಟಪ ವೃತ್ತದಲ್ಲಿ ಹಾರೋಹಳ್ಳಿ ಶ್ರೀಲಕ್ಷ್ಮೀದೇವಿ ಯುವಕರ ಬಳಗದಿಂದ ಜ.31ರಂದು ರಾಜ್ಯ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಜೆಡಿಎಸ್ ಯುವ ಮುಖಂಡ ಪಟೇಲ್ ಎಚ್.ಸಿ.ಕೃಷ್ಣೇಗೌಡ ತಿಳಿಸಿದರು.

ತಾಲೂಕಿನ ಕೆ.ಬೆಟ್ಟಹಳ್ಳಿ ಲಕ್ಷ್ಮೀದೇವಿ ಹಬ್ಬ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ವಾಲಿಬಾಲ್ ಪಂದ್ಯಾವಳಿಗೆ ಗ್ರಾಮಸ್ಥರು, ಯುವಕರು, ವಾಲಿಬಾಲ್ ಪ್ರೇಮಿಗಳ ಸಕರಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು. ಪಂದ್ಯಾವಳಿಗೆ ಪ್ರವೇಶ ಶುಲ್ಕ ವಿಧಿಸಲಾಗಿದ್ದು, ವಿಜೇತರಿಗೆ 30 ಸಾವಿರ ರು. ಪ್ರಥಮ, 20 ಸಾವಿರ ರು. ದ್ವಿತೀಯ, 10 ಸಾವಿರ ರು., ತೃತೀಯ ಹಾಗೂ 7 ಸಾವಿರ ರು. ನಗದು ಚತುರ್ಥ ಬಹುಮಾನ ಹಾಗೂ ಆಕರ್ಷಕ ಬಹುಮಾನ ನೀಡಿ ಗೌರವಿಸಲಾಗುವುದು ಎಂದರು.

ಆಸಕ್ತರು ಹೆಚ್ಚಿನ ಮಾಹಿತಿ ಹಾಗೂ ಹೆಸರು‌ ನೋಂದಾವಣೆಗೆ ವರುಣ್- 7676790717, ಕಾರ್ತಿಕ್-9886540630, ರವಿ-7026735697, ಅಪ್ಪು (ಮೇಘರಾಜು)-9964228990 ಅವರನ್ನು ಸಂಪರ್ಕಿಸುವಂತೆ ಕೋರಿದರು.

ಸುದ್ಧಿಗೋಷ್ಠಿಯಲ್ಲಿ ಮನು, ರವಿ, ಆಕಾಶ್ ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೈಲಲ್ಲೂ ದರ್ಶನ್‌ಗೆ ‘ಅಭಿಮಾನಿಗಳು’ ಕಾಟ!
ನಾಳೆ ಹಲವು ಸಾಧಕರಿಗೆ ಗಾಂಧಿ ಪುರಸ್ಕಾರ ಪ್ರದಾನ