ರೋಣ: ಪರಸ್ಪರ ಭಾತೃತ್ವತೆ, ಸಾಮರಸ್ಯದಿಂದ ಬದುಕಿದಲ್ಲಿ ದೇಶ ಮತ್ತು ಸಮಾಜದಲ್ಲಿ ಶಾಂತಿ ನೆಲೆಗೊಳ್ಳುವುದು. ದೇಶ ಅಭಿವೃದ್ಧಿ ಪಥದತ್ತ ಸಾಗಬೇಕಾದರೆ ಯುವ ಜನಾಂಗ ಭಾರತವೇ ನನ್ನ ಧರ್ಮ ಎಂದು ತಿಳಿದು ಮುನ್ನಡೆಯಬೇಕು ಎಂದು ಕೊತಬಾಳ ಗ್ರಾಮದ ಅಂಕಲಗಿ ಅಡವಿಸಿದ್ದೇಶ್ವರ ಮಠದ ಗಂಗಾಧರ ಶ್ರೀಗಳು ತಿಳಿಸಿದರು.
ರಾಷ್ಟ್ರೀಯ ಸೇವಾ ಯೋಜನೆಯು ಸೇವೆಯ ಮಹತ್ವವನ್ನು ವಿದ್ಯಾರ್ಥಿಗಳಲ್ಲಿ ನಿರಂತರವಾಗಿ ತುಂಬುತ್ತಿದ್ದು, ಸಾಮಾಜಿಕ ಸೇವೆಗೆ ಅಪಾರವಾದ ಮೌಲ್ಯವಿದೆ. ವಿದ್ಯಾರ್ಥಿ ಜೀವನದಲ್ಲಿ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಆಚಾರ್ಯ ವಿನೋಬಾ ಭಾವೆಯವರು ತಮ್ಮ ಜೀವನದುದ್ದಕ್ಕೂ ಸೇವೆಗೆ ಅಪಾರ ಮೌಲ್ಯ ತುಂಬುವ ಕೆಲಸ ಮಾಡಿದರು. ಸಮಾಜಕ್ಕಾಗಿ ಸೇವೆ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯ ನಾಗರಿಕನ ಆದ್ಯ ಕರ್ತವ್ಯವಾಗಬೇಕು. ನಮ್ಮ ನಾಡು- ನುಡಿ ಅರಣ್ಯ ಪರಿಸರ ರಕ್ಷಣೆಗೆ ಯುವಜನತೆ ಮುಂದಾಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಕೊತಬಾಳ ಗ್ರಾಪಂ ಉಪಾಧ್ಯಕ್ಷ ಹನುಮಂತಪ್ಪ ಅಸೂಟಿ, ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಯಲ್ಲಪ್ಪ ಮಾದರ, ಯುವ ಕಾಂಗ್ರೆಸ್ ಮುಖಂಡ ಸೋಮು ನಾಗರಾಜ, ಕೆಎಸ್ಎಸ್ ಕಾಲೇಜಿನ ಪ್ರಾಚಾರ್ಯ ಸಿ.ಬಿ. ಪೊಲೀಸಪಾಟೀಲ, ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಎಸ್.ಆರ್. ನದಾಫ, ಉಪನ್ಯಾಸಕ ಎ.ಎಚ್. ನಾಯ್ಕರ, ಎಂ.ವೈ. ಕಿತ್ತಲಿ, ಎಸ್.ಬಿ. ಶಿರಗುಂಪಿ, ಎಂ.ಎಚ್. ನಾಯ್ಕರ, ಎಸ್.ಎಸ್. ಮಠದ, ಎಸ್.ವಿ. ಸಂಕನಗೌಡ್ರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.ಸಾಮರ್ಥ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರ ಇಂದುಗದಗ: ಸ್ವಚ್ಛ ಭಾರತ ಮಿಷನ್ 2.0 ಯೋಜನೆಯ ಮಾಹಿತಿ, ಶಿಕ್ಷಣ ಮತ್ತು ಸಂವಹನ(ಐಇಸಿ) ಚಟುವಟಿಕೆಗಳ ಅಡಿಯಲ್ಲಿ ಗದಗ- ಬೆಟಗೇರಿ ನಗರಸಭೆ ವತಿಯಿಂದ ಒಂದು ದಿನದ ಸಾಮರ್ಥ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರ ಡಿ. 11ರಂದು ಬೆಳಗ್ಗೆ 10.30ರಿಂದ ನಗರದ ಜಿಲ್ಲಾ ಪಂಚಾಯಿತಿ ಸಭಾ ಭವನದಲ್ಲಿ ನಡೆಯಲಿದೆ.ನಗರಸಭೆಯ ಸದಸ್ಯರು ಹಾಗೂ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳಿಗೆ ಕಾರ್ಯಾಗಾರ ಆಯೋಜಿಸಲಾಗಿದೆ. ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಕಾರ್ಯಾಗಾರ ಉದ್ಘಾಟಿಸುವರು. ನಗರಸಭೆ ಪೌರಾಯುಕ್ತ ರಾಜಾರಾಮ ಎಸ್. ಪವಾರ, ಜಿಲ್ಲಾ ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಬಸನಗೌಡ ಕೊಟೂರ, ನಗರಸಭೆ ಸದಸ್ಯರಾದ ಎಲ್.ಡಿ. ಚಂದಾವರಿ, ಕೃಷ್ಣಾ ಪರಾಪುರ, ಇಲಾಖೆ ಅಧಿಕಾರಿಗಳು, ನಗರಸಭೆ ಸದಸ್ಯರು ಆಗಮಿಸಲಿದ್ದಾರೆ. ನುರಿತ ಸಂಪನ್ಮೂಲ ವ್ಯಕ್ತಿಗಳು ಸ್ವಚ್ಛತೆ, ಸುರಕ್ಷತೆ ಕ್ರಮಗಳು, ಇತರ ವಿಷಯಗಳ ಕುರಿತು ಸಮಗ್ರ ಮಾಹಿತಿ ನೀಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.