ಹಿರೇಕೆರೂರು: ಪಟ್ಟಣದ ಕಾಲೇಜು ಮಹಿಳಾ ವಸತಿನಿಲಯದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕದ ವತಿಯಿಂದ ಶ್ರಾವಣ ಸಂಜೆಯ ಎರಡನೇ ಗೋಷ್ಠಿ ನಡೆಯಿತು.ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿ, ಕಸಾಪ ಗೌರವ ಕೋಶಾಧ್ಯಕ್ಷ, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಂದ್ರ ಬಡಳ್ಳಿ, ಶ್ರಾವಣ ಮಾಸ ಅತ್ಯಂತ ಪವಿತ್ರ ಮಾಸ. ಈ ದಿವಸಗಳಲ್ಲಿ ಹಬ್ಬಗಳು ಹೆಚ್ಚು. ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡುವುದು, ಪುರಾಣ ಪ್ರವಚನಗಳನ್ನು ಏರ್ಪಡಿಸುವುದರ ಮುಖಾಂತರ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಹಕಾರಿಯಾಗುತ್ತದೆ ಎಂದರು.ಸಾಂಸ್ಕೃತಿಕ ನಾಯಕ ಬಸವಣ್ಣ ವಿಷಯ ಕುರಿತು ಉಪನ್ಯಾಸ ನೀಡಿದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ಪ್ರಾದ್ಯಾಪಕ ಸಂತೋಷಕುಮಾರ, ಶ್ರವಣ ಅಂದರೆ ಆಲಿಸು. ಈ ಮಾಸದಲ್ಲಿ 12ನೇ ಶತಮಾನದಲ್ಲಿ ಸಮಾಜ ಸುಧಾರಣೆಗೆ ಬಸವಣ್ಣನವರು ಪ್ರಯತ್ನಿಸಿದರು. ತಮ್ಮ ವಚನಗಳ ಮೂಲಕ ಸಮಾಜದಲ್ಲಿನ ಜನರ ನಡೆ, ನುಡಿ ಒಂದೇ ಆಗಿರಬೇಕು. ಆಚಾರ, ವಿಚಾರಗಳು, ಪರರ ನಿಂದನೆ, ಮೇಲು ಕೀಳು ಎಂಬ ಭಾವನೆ ತೊಲಗಬೇಕು ಎಂದರು. ಕಸಾಪ ತಾಲೂಕು ಘಟಕದ ಅಧ್ಯಕ್ಷ ಎನ್. ಸುರೇಶಕುಮಾರ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಮೇಘರಾಜ ಮಾಳಗಿಮನಿ, ಬಿಸಿಎಂ ವಿಸ್ತರಣಾಧಿಕಾರಿ ಬಿ.ಎಂ. ಪಾಟೀಲ, ಕೆ.ಜೆ. ಮಡಿವಾಳರ, ಬಿ.ಟಿ. ಚಿಂದಿ, ಬಸವರಾಜ ಪೂಜಾರ, ಎಂ.ಬಿ. ಕಾಗಿನೆಲ್ಲಿ, ಪಿ.ಬಿ. ನಿಂಗನಗೌಡ್ರ, ರಮೇಶ ದೊಡ್ಮನಿ, ರಾಜೇಂದ್ರ ಬೆಟ್ಟಳ್ಳೇರ, ಕೆ.ಎಸ್. ಪುಟ್ಟಪ್ಪಗೌಡ್ರ, ರಮೇಶ ಪೂಜಾರ, ಸಿ.ಎಸ್. ಚಳಗೇರಿ, ಜೆ.ಬಿ. ಮರಿಗೌಡ್ರ, ಬಿ.ವಿ. ಸೊರಟೂರ, ಎಂ.ಎಂ. ಮತ್ತೂರ, ಪಿ.ಎಸ್. ಸಾಲಿ, ಮಂಜುನಾಥ ಕಳ್ಳಿಹಾಳ, ಎನ್.ಎಸ್. ಹೆಗ್ಗೇರಿ, ರಾಮಣ್ಣ ತೆಂಬದ, ಎನ್.ಎಸ್. ಚಿಕ್ಕನರಗುಂದಮಠ, ಬಸನಗೌಡ ಬಣಕಾರ ಸಿ.ಬಿ. ಮಾಳಗಿ, ವಸತಿನಿಲಯದ ವಿದ್ಯಾರ್ಥಿನಿಯರು ಇದ್ದರು.ಹಿಂದುಳಿದ ವರ್ಗದ ಗುತ್ತಿಗೆದಾರರ ಸಂಘ ಅಸ್ತಿತ್ವಕ್ಕೆ
ಹಾವೇರಿ: ಇಲ್ಲಿಯ ಪ್ರವಾಸಿ ಮಂದಿರದಲ್ಲಿ ತಾಲೂಕಿನ ಹಿಂದುಳಿದ ವರ್ಗದ(2ಎ) ಗುತ್ತಿಗೆದಾರರು ಸಭೆ ಸೇರಿ ಸಂಘವನ್ನು ರಚನೆ ಮಾಡಿದರು.ಸಂಘದ ಗೌರವಾಧ್ಯಕ್ಷರಾಗಿ ಅಶೋಕ ಬಣಕಾರ, ಪ್ರಧಾನ ಕಾರ್ಯದರ್ಶಿಗಳಾಗಿ ಪರಮೇಶಪ್ಪ ಶಿವಣ್ಣನವರ, ತಾಲೂಕು ಘಟಕದ ಅಧ್ಯಕ್ಷರಾಗಿ ರಾಜು ಶಿವಣ್ಣನವರ, ಉಪಾಧ್ಯಕ್ಷರಾಗಿ ಮಣಿಕಂಠ ಬಳ್ಳಾರಿ, ರೇವಣಪ್ಪ ಗೋರಪ್ಪನವರ, ಕಾರ್ಯದರ್ಶಿಯಾಗಿ ಸತೀಶ ಈಳಗೇರ, ಸಹ ಕಾರ್ಯದರ್ಶಿಯಾಗಿ ರಮೇಶ ಮತ್ತೂರ, ಪರಮೇಶ ಮಣ್ಣಮ್ಮನವರ, ಖಜಾಂಚಿಯಾಗಿ ಫಕ್ಕಿರೇಶ ವೆಂಕಟಾಪುರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.