ಬುದ್ಧನ ಪಂಚಶೀಲ, ಅಷ್ಟಾಂಗ ಮಾರ್ಗದಿಂದ ಜಗತ್ತಿನಲ್ಲಿ ಶಾಂತಿ: ಸುಗತಪಾಲ ಭಂತೇಜ

KannadaprabhaNewsNetwork |  
Published : Sep 23, 2024, 01:28 AM IST
22ಕೆಎಂಎನ್ ಡಿ15 | Kannada Prabha

ಸಾರಾಂಶ

ಬೌದ್ಧ ಧರ್ಮ ವಿಶ್ವದ ಪ್ರಾಚೀನ ಧರ್ಮಗಳಲ್ಲಿ ಒಂದು, ಶಾಂತಿ ಸಹಬಾಳ್ವೆ ಹಾಗೂ ಬಹುಜನ ಹಿತಾಯ, ಬಹುಜನ ಸುಖಾಯ ಎಂಬ ತತ್ವದಲ್ಲಿ ನಂಬಿಕೆಯಿಟ್ಟ ಧರ್ಮ ಎಂದ ಸುಗತಪಾಲ ಭಂತೇಜಿ ಬೌದ್ಧ ಧರ್ಮವು ಮಾನವೀಯತೆಯ ತಳಹದಿಯ ಮೇಲೆ ರೂಪುಗೊಂಡಿರುವ ಅತ್ಯಂತ ವೈಜ್ಞಾನಿಕ ಧರ್ಮ ಎನ್ನುವ ಕಾರಣಕ್ಕಾಗಿಯೇ ಬಾಬಾ ಸಾಹೇಬ್ ಅಂಬೆಡ್ಕರ್ ಅವರು ಬೌದ್ಧ ಧರ್ಮಕ್ಕೆ ಮತಾಂತರಗೊಂಡರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಬುದ್ಧನ ಪಂಚಶೀಲ ಹಾಗೂ ಅಷ್ಟಾಂಗ ಮಾರ್ಗದಿಂದ ಜಗತ್ತು ಶಾಂತಿಯಿಂದ ಇರಬಲ್ಲದು ಎಂದು ಕೊಳ್ಳೆಗಾಲದ ಬೌದ್ಧ ಕೇಂದ್ರದ ಸುಗತಪಾಲ ಭಂತೇಜಿ ನುಡಿದರು.

ಪಟ್ಟಣದ ಹೌಸಿಂಗ್ ಬೋರ್ಡ್ ಬಡಾವಣೆಯ ಬುದ್ಧ- ಬಸವ- ಅಂಬೇಡ್ಕರ್ ಯೋಗ ಕೇಂದ್ರದಲ್ಲಿ ಆಯೋಜಿಸಿದ್ದ ಧಮ್ಮದೀಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬೌದ್ಧ ಧರ್ಮ ಭಾರತೀಯ ಜನ್ಯ ಧರ್ಮ. ಭಾರತೀಯ ಸಂಸ್ಕೃತಿಯ ಪ್ರತಿರೂಪವಾಗಿದೆ ಎಂಬುದೇ ವಿಶೇಷ ಎಂದರು.

ಬೌದ್ಧ ಧರ್ಮ ವಿಶ್ವದ ಪ್ರಾಚೀನ ಧರ್ಮಗಳಲ್ಲಿ ಒಂದು, ಶಾಂತಿ ಸಹಬಾಳ್ವೆ ಹಾಗೂ ಬಹುಜನ ಹಿತಾಯ, ಬಹುಜನ ಸುಖಾಯ ಎಂಬ ತತ್ವದಲ್ಲಿ ನಂಬಿಕೆಯಿಟ್ಟ ಧರ್ಮ ಎಂದ ಸುಗತಪಾಲ ಭಂತೇಜಿ ಬೌದ್ಧ ಧರ್ಮವು ಮಾನವೀಯತೆಯ ತಳಹದಿಯ ಮೇಲೆ ರೂಪುಗೊಂಡಿರುವ ಅತ್ಯಂತ ವೈಜ್ಞಾನಿಕ ಧರ್ಮ ಎನ್ನುವ ಕಾರಣಕ್ಕಾಗಿಯೇ ಬಾಬಾ ಸಾಹೇಬ್ ಅಂಬೆಡ್ಕರ್ ಅವರು ಬೌದ್ಧ ಧರ್ಮಕ್ಕೆ ಮತಾಂತರಗೊಂಡರು ಎಂದರು.

ಬೌದ್ಧ ಬಿಕ್ಕುಣಿ ಗೌತಮಿ ಮಾತಾಜಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅಂದು ಬೇರೆ ಪಾಶ್ಚಾತ್ಯ ಧರ್ಮಕ್ಕೆ ಮತಾಂತರಗೊಂಡಿದ್ದರೆ ಇಂದಿನ ಭಾರತದ ಪರಿಸ್ಥಿತಿ ಏನಾಗುತ್ತಿತ್ತು ಎಂಬುದನ್ನು ಯೋಚಿಸಬೇಕು. ಅಂಬೇಡ್ಕರ್ ಭಾರತೀಯ ಸಂಸ್ಕೃತಿ ವಿರೋಧಿಗಳಾಗಿರಲಿಲ್ಲ. ಬದಲಾಗಿ ಸುಧಾರಕರಾಗಿದ್ದರು. ಆದ್ದರಿಂದ ಮೌಢ್ಯ ಆಚರಣೆ ಕೈಬಿಟ್ಟು ನಾವು ಭಾರತೀಯರು ಎಂದು ಒಗ್ಗಟ್ಟಿನಿಂದ ಬದುಕಬೇಕು ಎಂದರು.

ಇತಿಹಾಸ ಸಂಶೋಧಕ ಶಿಕ್ಷಕ ರಂಗಸ್ವಾಮಿ ಮಾತನಾಡಿ, ಧೀನ ದಲಿತರ ಸೇವೆ, ಸಮಾನತೆ ಮತ್ತು ಒಗ್ಗಟು ಇಂದು ಅವಶ್ಯಕವಾಗಿದೆ. ಸನಾತನ ಭಾರತೀಯ ಸಂಸ್ಕೃತಿ ಸುಧಾರಕರಾದ ಬುದ್ಧ, ಬಸವ, ಅಂಬೇಡ್ಕರ್ ಅವರು ತೋರಿಸಿದ ಶಾಂತಿ ನಾವು ಅನುಸರಿಸಬೇಕು. ಭಾರತ ಸರ್ವ ಜನಾಂಗದ ಸಾಂತಿಯ ತೋಟವಾಗಿಯೇ ಉಳಿಯಬೇಕೆಂದರು.

ಕಾರ್ಯಕ್ರಮದಲ್ಲಿ ಬೀದರ್‌ನ ಧಮ್ಮ ದಿನ ಮಾತಾಜಿ ಮಾತನಾಡಿದರು. ಬೌದ್ಧ ಧರ್ಮದ ಪ್ರಕಾರ ಯೋಗಗುರು ಎಸ್.ಎಂ. ಅಲ್ಲಮ ಪ್ರಭುರವರು ಮೈತ್ರಿ ಧ್ಯಾನ ಪ್ರಾರ್ಥನೆ ಮಾಡಿಸಿದರು. ತಾಲೂಕು ಎಸ್.ಸಿ, ಎಸ್.ಟಿ ಮಾದ್ಯಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಹಳಿಯೂರು ಯೋಗೇಶ್, ಶಿಕ್ಷಕರಾದ ಭೈರಯ್ಯ, ಕುಮಾರ, ಧನೇಂದ್ರ ಗೌಡ, ಪ್ರಕಾಶ್, ಮಂಜುನಾಥ್, ನಾಗಯ್ಯ, ರಾಜುನಾಯ್ಕ, ಆಲಂಬಾಡಿ ರವಿ, ನಟೇಶ್ ಗಾಂಧಿನಗರ ಕಾಂತರಾಜು ನೂರಾರು ಜನ ಪಾಲ್ಗೊಂಡಿದ್ದರು. ನಂತರ ವಿವಿಧ ಜಾತಿ ಸಮೂಹಗಳ ಜನರಿಗಾಗಿ ಸಾಮೂಹಿಕ ಭೋಜನ ನಡೆಯಿತು.

PREV

Recommended Stories

‘ಚಾಮುಂಡೇಶ್ವರಿ ಬಗ್ಗೆ ಬಾನು ತಮ್ಮ ಗೌರವ ಸ್ಪಷ್ಟಪಡಿಸಲಿ’ : ವಿಜಯೇಂದ್ರ
ಗ್ಯಾರಂಟಿ ಯೋಜನೆಗಳ ಜತೆ ರಾಜ್ಯವು ಅಭಿವೃದ್ಧಿ