ಕುಕನೂರು: ಧಾರ್ಮಿಕ ಕಾರ್ಯಗಳಿಂದ ನೆಮ್ಮದಿ ಸಾಧ್ಯ ಎಂದು ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಇಟಗಿಯ ಶ್ರೀಶಿವಶರಣ ಶ್ರೀ ಗದಿಗೆಪ್ಪಜ್ಜನವರು ಮಾತನಾಡಿ, ದುರ್ಗಾದೇವಿಯ ಆರಾಧನೆಯಿಂದ ಭಕ್ತಿ ಲಭಿಸುತ್ತದೆ. ಭಕ್ತಿಯಿಂದ ಮನಸ್ಸಿಗೆ ಚೈತನ್ಯ ಲಭ್ಯ. ಪ್ರತಿಯೊಬ್ಬರು ಶಿಕ್ಷಣವಂತರಾಗಿ ಮುಂದುವರೆಯಬೇಕು. ಶಿಕ್ಷಣದಿಂದ ಸಮಾಜ ಹಾಗು ಬದುಕು ಬದಲಿಸುವ ಶಕ್ತಿ ಇದೆ. ಅದನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
ಜಿಪಂ ಮಾಜಿ ಸದಸ್ಯ ಈರಪ್ಪ ಕುಡಗುಂಟಿ ಮಾತನಾಡಿ, ಸಮಾಜದಲ್ಲಿ ಹಿಂದುಳಿದಿದ್ದೇವೆ ಎಂದು ಗುರುತಿಸಿಕೊಳ್ಳಬಾರದು. ನಾನಾ ಕ್ರೀಯಾಶೀಲ ಕಾರ್ಯಗಳಿಂದ ಸಮಾಜಮುಖಿ ಕಾರ್ಯ ಮಾಡಬೇಕು. ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಧಾರ್ಮಿಕ ಕಾರ್ಯಗಳಿಂದ ಎಲ್ಲರೂ ಒಗ್ಗೂಡಲು ಸಾಧ್ಯ. ಹಿರಿಯರ, ಕಿರಿಯರ ಸಮಾಗಮ ಹಾಗು ನಾನಾ ಪೂಜಾ ಕಾರ್ಯಗಳು ಹೊಸತನ ಮೂಡಿಸುತ್ತವೆ ಎಂದರು.ಗ್ರಾಮದಲ್ಲಿ ದೇವಿ ಜಾತ್ರಾ ಮಹೋತ್ಸವ ಪ್ರಯುಕ್ತ ಕುಂಭ ಮೆರವಣಿಗೆ ವಾದ್ಯ ಮೇಳದೊಂದಿಗೆ ಜರುಗಿತು.
ಹಿರಿಯ ಚಂದಾಲಿಂಗಪ್ಪ ಮಾಲಗಿತ್ತಿ,ಯುವ ಮುಖಂಡ ಶಿವಕುಮಾರ ಗುಳಗಣ್ಣವರ, ವಿರೇಶ ಸಬರದ, ಶಶಿ ಭಜಂತ್ರಿ, ದೇವಪ್ಪ ದೇವರಮನಿ, ಮುತ್ತಪ್ಪ ದೊಡ್ಡಮನಿ, ಚಂದಪ್ಪ ಭಾವಿಮನಿ, ಶಿವಲಿಂಗಪ್ಪ ಮಾಲಗಿತ್ತಿ, ಶರಣಪ್ಪ ಮಾಲಗಿತ್ತಿ, ದೊಡ್ಡ ಹನುಮಂತ ಭಾವಿಮನಿ, ರಾಮಪ್ಪ ಭಾವಿಮನಿ, ಬಸವರಾಜ, ಪ್ರೇಮರಾಜ ಮಾಲಗಿತ್ತಿ, ಯಲಪ್ಪ ಮಾಲಗಿತ್ತಿ, ಶಿವಪ್ಪ ಮಾಲಗಿತ್ತಿ, ಚಂದ್ರಕಾಂತ ದೊಡ್ಡಮನಿ, ಜಗದೀಶ ಇತರರಿದ್ದರು.