ವ್ಯಸನ ಮುಕ್ತ ಬದುಕಿನಿಂದ ನೆಮ್ಮದಿ ಸಾಧ್ಯ

KannadaprabhaNewsNetwork |  
Published : Jun 04, 2025, 01:48 AM IST
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ಪಾಳ್ಯ ವಲಯದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕ್ರಮವನ್ನು ಉದ್ಘಾಟಿಸಿ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಸತೀಶ್  ಮಾತನಾಡಿದರು | Kannada Prabha

ಸಾರಾಂಶ

ತಂಬಾಕು ಹಾಗೂ ಇತರೆ ಮಾದಕ ವಸ್ತುಗಳು ಆರೋಗ್ಯಕ್ಕೆ ಮಾರಕವಾದವು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಸತೀಶ್ ತಿಳಿಸಿದರು. ಹಲವರು ಅತಿಯಾದ ಮೊಬೈಲ್ ಬಳಕೆ, ಪಾನ್ ಬೀಡಾಗಳು, ನಶೆ ಬರಿಸುವ ಮಾದಕ ವಸ್ತುಗಳನ್ನು ಬಳಸುತ್ತಿದ್ದು, ಅದರ ಚಟಕ್ಕೆ ಬಿದ್ದಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಶೆ ಭರಿಸುವ ವಸ್ತುಗಳು ಬಹಳ ಸುಲಭವಾಗಿ ಮಾರುಕಟ್ಟೆಯಲ್ಲಿ ಸಿಗುತ್ತಿರುವುದು ಆತಂಕದ ವಿಚಾರವಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಆಲೂರು

ತಂಬಾಕು ಹಾಗೂ ಇತರೆ ಮಾದಕ ವಸ್ತುಗಳು ಆರೋಗ್ಯಕ್ಕೆ ಮಾರಕವಾದವು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಸತೀಶ್ ತಿಳಿಸಿದರು. ಪಟ್ಟಣದ ಕಸಾಪ ಭವನದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ಪಾಳ್ಯ ವಲಯದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವ್ಯಸನ ಮುಕ್ತ ಬದುಕಿನಿಂದ ನೆಮ್ಮದಿ ಸಾಧ್ಯ. ತಂಬಾಕು ಇನ್ನಿತರೆ ಮಾದಕ ವಸ್ತುಗಳಿಂದ ಆಗುತ್ತಿರುವ ದುಷ್ಪರಿಣಾಮಗಳು ಮನುಷ್ಯನ ದೇಹದಲ್ಲಿ ಕಾಣುತ್ತಿದ್ದು, ಆರೋಗ್ಯ ಸಮಸ್ಯೆ ಹೆಚ್ಚಾಗಿದೆ. ಇದರಿಂದ ಜನತೆ ಜಾಗೃತರಾಗಬೇಕಾಗಿದೆ ಎಂದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಟ್ರಸ್ಟ್ ನ ತಾಲೂಕು ಯೋಜನಾಧಿಕಾರಿ ರತ್ನಕರ್ ಕೊಠಾರಿ ಮಾತನಾಡಿ, ಹಲವರು ಅತಿಯಾದ ಮೊಬೈಲ್ ಬಳಕೆ, ಪಾನ್ ಬೀಡಾಗಳು, ನಶೆ ಬರಿಸುವ ಮಾದಕ ವಸ್ತುಗಳನ್ನು ಬಳಸುತ್ತಿದ್ದು, ಅದರ ಚಟಕ್ಕೆ ಬಿದ್ದಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಶೆ ಭರಿಸುವ ವಸ್ತುಗಳು ಬಹಳ ಸುಲಭವಾಗಿ ಮಾರುಕಟ್ಟೆಯಲ್ಲಿ ಸಿಗುತ್ತಿರುವುದು ಆತಂಕದ ವಿಚಾರವಾಗಿದೆ. ಅದೇ ರೀತಿಯಲ್ಲಿ ಜಾಹಿರಾತಿನ ಮೋಹಕ್ಕೆ ಬಲಿಯಾಗಿ ಮಕ್ಕಳು ತಂಪು ಪಾನೀಯಗಳಿಗೆ ಮಾರುಹೋಗುತ್ತಿದ್ದಾರೆ. ಇದರಿಂದ ಹೊರ ಬರಲು ನಮ್ಮ ದೈನಂದಿನ ದಿನಚರಿ, ಅಭ್ಯಾಸ ಗಳನ್ನು ಬದಲಾಯಿಸಿಕೊಳ್ಳಬೇಕು ಎಂದ ಅವರು, ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಒಕ್ಕೂಟ ಅಧ್ಯಕ್ಷ ಪಾಲಾಕ್ಷ, ಜನಜಾಗೃತಿ ಸದಸ್ಯರಾದ ಎಚ್ ಬಿ ಧರ್ಮರಾಜ್, ಬಾಲಕೃಷ್ಣ ಶೆಟ್ಟಿ, ಆರೋಗ್ಯ ನಿರೀಕ್ಷಣಾಧಿಕಾರಿ ರಾಜು, ಸಮಾಜ ಸೇವಕ ಕಟ್ಟೆಗದ್ದೆ ನಾಗರಾಜ್, ಕನ್ನಡ ಸೇನೆ ಅಧ್ಯಕ್ಷ ಮೋಹನ್, ವಲಯ ಮೇಲ್ವಿಚಾರಕರಾದ ಯಶೋಧ, ಜ್ಞಾನವಿಕಾಸ ಸಮನ್ವಯಾಧಿಕಾರಿ ಸರಸ್ವತಿ, ಸೇವಾ ಪ್ರತಿನಿಧಿ ಸಣ್ಣಮ್ಮ, ನಾಗಮಣಿ, ಕೇಂದ್ರ ಸಂಘದ ಸದಸ್ಯರು ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಈ ಸಾಲಲ್ಲಿ ಅಬಕಾರಿ ರಾಜಸ್ವ ಟಾರ್ಗೆಟ್‌ ಕಷ್ಟ? 11 ತಿಂಗಳಲ್ಲಿ ಮದ್ಯ ಮಾರಾಟ ಗಣನೀಯ ಕುಸಿತ
ನಾಳೆ ಸಿದ್ದರಾಮಯ್ಯ ಬಜೆಟ್‌ : ವಲಯವಾರು ನಿರೀಕ್ಷೆಗಳೇನು?