ನೃತ್ಯದಿಂದ ಮನಸ್ಸಿಗೆ ನೆಮ್ಮದಿ

KannadaprabhaNewsNetwork |  
Published : Apr 30, 2024, 02:13 AM IST
೨೯ಬಿಹೆಚ್‌ಆರ್ ೧: ಬಾಳೆಹೊನ್ನೂರಿನ ಆದರ್ಶನಗರದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ನೃತ್ಯ ದಿನಾಚರಣೆ ಕಾರ್ಯಕ್ರಮವನ್ನು ನವೋದಯ ವಿದ್ಯಾಲಯದ ಪ್ರಾಚಾರ್ಯ ಆರ್.ಪ್ರೇಮ್‌ಕುಮಾರ್ ಉದ್ಘಾಟಿಸಿದರು. ಸುನೀತಾ, ಶಶಿಧರ್, ರಜನಿ, ರಾಜೇಂದ್ರ, ಅರ್ಜುನ್ ಕಾರ್ಡೋಜಾ ಇದ್ದರು. | Kannada Prabha

ಸಾರಾಂಶ

ನೃತ್ಯ, ಸಂಗೀತದಂತಹ ಸಾಂಸ್ಕೃತಿಕ ಕಲೆಗಳಿಂದ ಮನಸ್ಸಿಗೆ ಆಹ್ಲಾದ, ನೆಮ್ಮದಿ ದೊರೆಯಲಿದೆ ಎಂದು ಜವಾಹರ್ ನವೋದಯ ವಿದ್ಯಾಲಯದ ಪ್ರಾಚಾರ್ಯ ಆರ್.ಪ್ರೇಮ್‌ಕುಮಾರ್ ಹೇಳಿದರು.

ಅಂತಾರಾಷ್ಟ್ರೀಯ ನೃತ್ಯ ದಿನಾಚರಣೆ ಉದ್ಘಾಟನೆಯಲ್ಲಿ ಪ್ರೇಮ್‌ಕುಮಾರ್

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ನೃತ್ಯ, ಸಂಗೀತದಂತಹ ಸಾಂಸ್ಕೃತಿಕ ಕಲೆಗಳಿಂದ ಮನಸ್ಸಿಗೆ ಆಹ್ಲಾದ, ನೆಮ್ಮದಿ ದೊರೆಯಲಿದೆ ಎಂದು ಜವಾಹರ್ ನವೋದಯ ವಿದ್ಯಾಲಯದ ಪ್ರಾಚಾರ್ಯ ಆರ್.ಪ್ರೇಮ್‌ಕುಮಾರ್ ಹೇಳಿದರು.ಪಟ್ಟಣದ ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆ, ಸೀನಿಯರ್ ಚೇಂಬರ್ ಇಂಟರ್‌ನ್ಯಾಶನಲ್ ಸಂಸ್ಥೆ ಹಾಗೂ ಸಂಸ್ಕೃತಿ ಪೂರ್ವ ಪ್ರಾಥಮಿಕ ಶಾಲೆ ಸಹಯೋಗದಲ್ಲಿ ಆದರ್ಶನಗರ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ನೃತ್ಯ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ಸಾಂಸ್ಕೃತಿಕ ಕಲೆಗಳು ನಮ್ಮ ದೇಶದ ಜೀವನಾಡಿಯಾಗಿದ್ದು, ಕಲೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದರಿಂದ ಮನಸ್ಸಿಗೆ ಸಂತೋಷ ದೊರೆಯುತ್ತದೆ. ಈ ನಿಟ್ಟಿನಲ್ಲಿ ಯುವ ಜನರ ಪ್ರೋತ್ಸಾಹಿಸುವ ಉದ್ದೇಶದಿಂದ ನೃತ್ಯ ದಿನಾಚರಣೆ ವಿಶೇಷ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು.ಶೃಂಗೇರಿ ನಾಟ್ಯವೈಭವ ನೃತ್ಯ ಅಕಾಡೆಮಿ ಮುಖ್ಯಸ್ಥೆ ಸುನೀತಾ ನವೀನ್ ಮಾತನಾಡಿ, ಇಂದಿನ ಪುಟಾಣಿಗಳು, ಯುವಜನರಲ್ಲಿ ಸಾಕಷ್ಟು ಕಲೆಗಳು ಅಡಗಿದ್ದು, ಅವುಗಳನ್ನು ವೇದಿಕೆಗಳ ಮೂಲಕ ಅನಾವರಣಗೊಳಿಸಬೇಕಿದೆ. ನೃತ್ಯ ಕಲೆಗೆ ದೇಶದಲ್ಲಿ ಹತ್ತಾರು ಅವಕಾಶಗಳಿದ್ದು, ಅವುಗಳನ್ನು ಬಳಸಿಕೊಂಡು ಸಾಧನೆ ಮಾಡಬೇಕಿದೆ.ನೃತ್ಯ ಕಲೆಯಲ್ಲಿ ಹಲವು ವಿಭಿನ್ನ ಪ್ರಾಕಾರಗಳಿದ್ದು ಅವುಗಳನ್ನು ಕಲಿತು ವಿವಿಧ ವೇದಿಕೆಗಳಲ್ಲಿ ಯುವಜನರು, ವಿದ್ಯಾರ್ಥಿಗಳು ಪ್ರದರ್ಶನ ತೋರಬೇಕಿದೆ ಎಂದರು.ಸಂಸ್ಕೃತಿ ಶಾಲೆಯ ವಿದ್ಯಾರ್ಥಿಗಳು ವಿವಿಧ ನೃತ್ಯ ಪ್ರದರ್ಶಿಸಿದರು. ಜೇಸಿಐ ಅಧ್ಯಕ್ಷ ಎನ್.ಶಶಿಧರ್, ಕಾರ್ಯದರ್ಶಿ ಶೃಜಿತ್, ಸಂಸ್ಕೃತಿ ಶಾಲೆ ಪ್ರಾಚಾರ್ಯೆ ರಜನಿ ದೇವಯ್ಯ, ಅಧ್ಯಕ್ಷ ಬಿ.ಜಿ.ದೇವಯ್ಯ, ಸೀನಿಯರ್ ಚೇಂಬರ್ ಅಧ್ಯಕ್ಷ ಡಿ.ರಾಜೇಂದ್ರ, ಕಾರ್ಯದರ್ಶಿ ಕೆ.ಎಂ.ರಾಘವೇಂದ್ರ, ಸೀಗೋಡು ಕೆಫೆ ಮಾಲೀಕ ಅರ್ಜುನ್ ಕಾರ್ಡೋಜಾ, ಕಾರ್ಯಕ್ರಮ ಸಂಯೋಜಕ ಚೈತನ್ಯ ವೆಂಕಿ, ಕಾರ್ಯಕ್ರಮ ನಿರ್ದೇಶಕ ಕೆ.ಪ್ರಶಾಂತ್ ಕುಮಾರ್, ಮಂಜುನಾಥ್ ತುಪ್ಪೂರು, ಜೇಸಿ ನಿಕಟಪೂರ್ವ ಅಧ್ಯಕ್ಷ ಬಿ.ಎಸ್.ಅಜಿತ್, ವಿದ್ಯಾಗಣಪತಿ ಸಮಿತಿ ಅಧ್ಯಕ್ಷ ರಾಘವೇಂದ್ರ ಮತ್ತಿತರರು ಹಾಜರಿದ್ದರು.

೨೯ಬಿಹೆಚ್‌ಆರ್ ೧:

ಬಾಳೆಹೊನ್ನೂರಿನ ಆದರ್ಶನಗರದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ನೃತ್ಯ ದಿನಾಚರಣೆಯನ್ನು ನವೋದಯ ವಿದ್ಯಾಲಯದ ಪ್ರಾಚಾರ್ಯ ಆರ್.ಪ್ರೇಮ್‌ಕುಮಾರ್ ಉದ್ಘಾಟಿಸಿದರು. ಸುನೀತಾ, ಶಶಿಧರ್, ರಜನಿ, ರಾಜೇಂದ್ರ, ಅರ್ಜುನ್ ಕಾರ್ಡೋಜಾ ಇದ್ದರು.

PREV

Recommended Stories

ವಾಲ್ಮೀಕಿಗೆ ದೇವರ ಪಟ್ಟ ಕೊಡದಿರುವುದು ದುರಂತ: ಡಾ.ಗೋಪಾಲ
ಚರ್ಚ್‌ನಲ್ಲಿ ನಡೆದಿರುವುದು ಆತ್ಮಹತ್ಯೆಯಲ್ಲ, ಕೊಲೆ: ಆರೋಪ