ಶಾಂತಿ, ಸಹಬಾಳ್ವೆಯಿಂದ ನೆಮ್ಮದಿಯ ಜೀವನ

KannadaprabhaNewsNetwork |  
Published : Aug 15, 2025, 01:00 AM IST
೧೪ ವೈಎಲ್‌ಬಿ ೦೧ಯಲಬುರ್ಗಾ ತಾಲೂಕಿನ ಸಂಕನೂರಿನಲ್ಲಿ ಶ್ರೀ ಸಿದ್ದರಾಮೇಶ್ವರ ಸಂಸ್ಥಾನ ಹಿರೇಮಠದ ಶಾಖಾಮಠ ಕಟ್ಟಡ ಉದ್ಘಾಟನೆ, ಕತೃ ಗದ್ದುಗೆಗೆ ಪ್ರಾಣ ಪ್ರತಿಷ್ಠಾಪನೆ, ರುದ್ರಾಭಿಷೇಕ ಹಾಗೂ ಜಂಗಮ ವಟುಗಳಿಗೆ ಅಯ್ಯಾಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. | Kannada Prabha

ಸಾರಾಂಶ

ಗುಡಿಯೊಳಗಿನ ದೇವರು ದೇವರಲ್ಲ. ಗುಡಿಗುಂಡಾರಕ್ಕಿಂತ ಮಠಗಳು ಜೀವಂತ ದೇವರಿದ್ದಂತೆ. ಜಗತ್ತಿನಲ್ಲಿ ಭಕ್ತಿಗಿಂತ ದೊಡ್ಡಶಕ್ತಿ ಮತ್ತೊಂದಿಲ್ಲ. ದೇವರು, ದೇವಸ್ಥಾನಗಳಿಂದ ಪೂಜಾರಿಗಳಿಗೆ ಲಾಭವೇ ಹೊರತು ದೇವರಿಗಲ್ಲ. ಧರ್ಮ ಎಂದರೆ ಅಮೃತ, ಜಾತಿ ಅಂದರೆ ವಿಷ. ಜಾತಿ ವ್ಯವಸ್ಥೆಯಿಂದ ಸಮಾಜದಲ್ಲಿ ಅಶಾಂತಿ, ಕಲಹ ಉಂಟಾಗುತ್ತವೆ.

ಯಲಬುರ್ಗಾ:

ಮನುಷ್ಯ ಶಾಂತಿ ಮತ್ತು ಸಹಬಾಳ್ವೆಯಿಂದ ಬದುಕಿದರೆ ನೆಮ್ಮದಿ ಕಾಣಲು ಸಾಧ್ಯ ಎಂದು ಕುದರಿಮೋತಿಯ ಮೈಸೂರಮಠದ ವಿಜಯಮಹಾಂತ ಸ್ವಾಮೀಜಿ ಹೇಳಿದರು.

ತಾಲೂಕಿನ ಸಂಕನೂರು ಗ್ರಾಮದಲ್ಲಿ ಸಿದ್ದರಾಮೇಶ್ವರ ಸಂಸ್ಥಾನ ಹಿರೇಮಠ ಶಾಖಾಮಠದ ನೂತನ ಕಟ್ಟಡ ಉದ್ಘಾಟನೆ, ಕತೃ ಗದ್ದುಗೆಗೆ ಪ್ರಾಣ ಪ್ರತಿಷ್ಠಾಪನೆ, ರುದ್ರಾಭಿಷೇಕ ಹಾಗೂ ಜಂಗಮ ವಟುಗಳಿಗೆ ಅಯ್ಯಾಚಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗುಡಿಯೊಳಗಿನ ದೇವರು ದೇವರಲ್ಲ. ಗುಡಿಗುಂಡಾರಕ್ಕಿಂತ ಮಠಗಳು ಜೀವಂತ ದೇವರಿದ್ದಂತೆ. ಜಗತ್ತಿನಲ್ಲಿ ಭಕ್ತಿಗಿಂತ ದೊಡ್ಡಶಕ್ತಿ ಮತ್ತೊಂದಿಲ್ಲ. ದೇವರು, ದೇವಸ್ಥಾನಗಳಿಂದ ಪೂಜಾರಿಗಳಿಗೆ ಲಾಭವೇ ಹೊರತು ದೇವರಿಗಲ್ಲ. ಧರ್ಮ ಎಂದರೆ ಅಮೃತ, ಜಾತಿ ಅಂದರೆ ವಿಷ. ಜಾತಿ ವ್ಯವಸ್ಥೆಯಿಂದ ಸಮಾಜದಲ್ಲಿ ಅಶಾಂತಿ, ಕಲಹ ಉಂಟಾಗುತ್ತವೆ. ಎಲ್ಲರೂ ಜಾತಿಯಿಂದ ದೂರವಿದ್ದು, ಧರ್ಮಕ್ಕೆ ಆದ್ಯತೆ ನೀಡಬೇಕು. ಸಂಕನೂರು ಗ್ರಾಮವು ಸಾಮರಸ್ಯದ ತವರಾಗಿದೆ. ಎಲ್ಲ ಸಮುದಾಯದವರು ಸಹೋದರತ್ವದಿಂದ ಬಾಳುತ್ತಿರುವುದು ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಧರ್ಮ ಎಂದರೆ ಅಮೃತ, ಜಾತಿ ಅಂದರೆ ವಿಷ. ಧರ್ಮಕ್ಕೆ ಆದ್ಯತೆ ನೀಡಬೇಕು ಎಂದರು.

ಜಿಪಂ ಮಾಜಿ ಸದಸ್ಯ ಸಿ.ಎಚ್. ಪಾಟೀಲ್ ಮಾತನಾಡಿ, ಧಾರ್ಮಿಕ ಕಾರ್ಯ ನಡೆದಾಗ ಮಾತ್ರ ನೆಮ್ಮದಿ ಕಾಣಲು ಸಾಧ್ಯ. ಸಾಮಾಜಿಕ ಮಾಧ್ಯಮಗಳ ಹಾವಳಿಯಿಂದ ಸಮಾಜ ಅಧಃಪತನಕ್ಕೆ ಸಾಗುತ್ತಿದೆ. ಮಠ ಮಾನ್ಯಗಳು ಬಡಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ಕೊಟ್ಟಿವೆ. ತಾಯಂದಿರು ಮಕ್ಕಳಿಗೆ ಶಿಕ್ಷಣ ಕೊಡಿಸುವ ಜತೆಗೆ ಸಂಸ್ಕಾರ ಕೊಡಿಸಬೇಕು ಎಂದರು.

ಸಂಸ್ಥಾನ ಹಿರೇಮಠದ ಸಿದ್ದರಾಮೇಶ್ವರ ಸ್ವಾಮೀಜಿ, ಕುಷ್ಟಗಿಯ ಮದ್ದಾನೇಶ್ವರ ಹಿರೇಮಠದ ಕರಿಬಸವೇಶ್ವರ ಸ್ವಾಮೀಜಿ, ಗಜೇಂದ್ರಗಡದ ಮೌನಯೋಗಿ ಹಜರತ್ ಸೈಯದ್ ನಿಜಾಮುದ್ದಿನ್ ಷಾ, ಮಾನಿಹಳ್ಳಿಯ ಪುರವರ್ಗ ಮಠದ ಮಳಿಯೋಗಿಶ್ವರ ಸ್ವಾಮೀಜಿ, ಕುಕನೂರಿನ ಅನ್ನದಾನೀಶ್ವರ ಶಾಖಾ ಮಠದ ಮಹಾದೇವ ಸ್ವಾಮೀಜಿ ಮಾತನಾಡಿದರು. ಮಂಗಳೂರಿನ ಅರಳೆಲೆ ಹಿರೇಮಠದ ಸಿದ್ಧಲಿಂಗ ಸ್ವಾಮೀಜಿ, ರಾಜೂರು-ಆಡ್ನೂರು ದಾಸೋಹ ಮಠದ ಅಭಿನವ ಪಂಚಾಕ್ಷರಿ ಸ್ವಾಮೀಜಿ, ಸಂಕನೂರಿನ ಅಭಿಮನ್ಯಪ್ಪ ಧರ್ಮರ ಸಾನ್ನಿಧ್ಯ ವಹಿಸಿದ್ದರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ನಾಗಮ್ಮ ಕಲ್ಲಪ್ಪ ತಳವಾರ್, ಪಿಡಿಒ ಎಫ್.ಡಿ.ಕಟ್ಟಿಮನಿ, ಶೇಖರಯ್ಯ ಹಿರೇಮಠ, ವೀರಯ್ಯ ಶಶಿಮಠ, ಶರಣಯ್ಯ, ಮಲ್ಲಿಕಾರ್ಜುನ ತೊಂಡಿಹಾಳ, ಶರಣಯ್ಯ ಭೂಸನೂರಮಠ, ಅಶೋಕ ಈರಗಾರ, ರಾಮಣ್ಣ ಕೊಪ್ಪದ, ಜಂಗ್ಲಿಸಾಬ್ ಮುಜಾವರ, ಕೊಪ್ಪದ, ಮುಖಪ್ಪ ಕಟ್ಟಿಮನಿ, ಅಮರಪ್ಪ ಕೊಪ್ಪದ, ಮಾಬುಸಾಬ್ ಇಟಗಿ, ಮಾನಪ್ಪ ತೊಂಡಿಹಾಳ, ಗುರಯ್ಯ ಹಿರೇಮಠ, ಲಕ್ಷ್ಮಪ್ಪ ಹೋಲಿ, ವೀರಭದ್ರಪ್ಪ, ಶರಣಪ್ಪ ಹಡಪದ ಸೇರಿದಂತೆ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!