ಕರ್ನಾಟಕ ಹಾಕಿ ತಂಡದ ನಾಯಕಿ ಪರ್ಲಿನ್ ಪೊನ್ನಮ್ಮ

KannadaprabhaNewsNetwork |  
Published : Nov 18, 2024, 12:05 AM IST
ಚಿತ್ರ : ಪರ್ಲಿನ್ | Kannada Prabha

ಸಾರಾಂಶ

ಪರ್ಲಿನ್‌ ಪೊನ್ನಮ್ಮ ಕರ್ನಾಟಕ ಹಾಕಿ ತಂಡದ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ. ಈಕೆ ಮಡಿಕೇರಿ ವಕೀಲ ದಂಪತಿ ಅಚ್ಚಪಂಡ ಗಿರಿ ಮತ್ತು ಪದ್ಮ ದಂಪತಿ ಪುತ್ರಿ.

ಮಡಿಕೇರಿ: ಕೊಡಗು ವಿದ್ಯಾಲಯದ 10ನೇ ತರಗತಿ ವಿದ್ಯಾರ್ಥಿನಿ ಪರ್ಲಿನ್ ಪೊನ್ನಮ್ಮ ಅ. 29 ರಿಂದ ನ. 14 ರ ವರೆಗೆ ಪೊನ್ನಂಪೇಟೆಯಲ್ಲಿ ನಡೆದ ಮಹಿಳೆಯರ ಸಬ್ ಜ್ಯೂನಿಯರ್ ರಾಜ್ಯ ಹಾಕಿ ತಂಡದ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಕರ್ನಾಟಕ ಹಾಕಿ ತಂಡದ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ.

ನ. 22 ರಿಂದ ಡಿಸೆಂಬರ್ 2 ರವರೆಗೆ ಹೈದರಾಬಾದ್ ನಲ್ಲಿ ನಡೆಯಲಿರುವ 14 ನೇ ಹಾಕಿ ತಂಡ ಸಬ್ ಜ್ಯೂನಿಯರ್ ಮಹಿಳೆಯರು ರಾಷ್ಟ್ರೀಯ ಚಾಂಪಿಯನ್ ಶಿಪ್ 2024 ರಲ್ಲಿ ತಂಡದ ನಾಯಕಿಯಾಗಿ ಪರ್ಲಿನ್ ಭಾಗವಹಿಸಲಿದ್ದಾರೆ. ಈಕೆ ಮಡಿಕೇರಿ ವಕೀಲ ದಂಪತಿ ಅಚ್ಚಪಂಡ ಗಿರಿ ಹಾಗೂ ಪದ್ಮ ದಂಪತಿ ಪುತ್ರಿ.

----------------------------------

ಮಕ್ಕಳ ದಿನಾಚರಣೆ ಪ್ರಯುಕ್ತ ವಿವಿಧ ಸ್ಪರ್ಧೆ

ಮಡಿಕೇರಿ : ಕೊಡಗು ಜಿಲ್ಲಾ ಬಾಲಭವನ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮಕ್ಕಳ ದಿನಾಚರಣೆ ಪ್ರಯುಕ್ತ 9 ರಿಂದ 16 ವರ್ಷದ ಮಕ್ಕಳಿಗೆ ನೃತ್ಯ, ಚಿತ್ರಕಲೆ, ವಿಜ್ಞಾನದಲ್ಲಿ ಸೃಜನಾತ್ಮಕ ಆವಿಷ್ಕಾರ ಹಾಗೂ ವಾದ್ಯ ಸಂಗೀತ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಪ್ರಸಕ್ತ ಸಾಲಿನಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಕೊಡಗು ಜಿಲ್ಲಾ ಬಾಲಭವನ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಜಿಲ್ಲಾ ಮಟ್ಟದಲ್ಲಿ ‘ಮಕ್ಕಳ ದಿನಾಚರಣೆ ಪ್ರಯುಕ್ತ ಸ್ಪರ್ಧಾ’ ಕಾರ್ಯಕ್ರಮವು ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯಲ್ಲಿ ನಡೆಯಲಿದೆ.

ಸ್ಪರ್ಧೆಯನ್ನು ನಡೆಸುವುದರೊಂದಿಗೆ, ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದರ ಮೂಲಕ ಅವರಲ್ಲಿ ಆತ್ಮಸ್ಥೈರ್ಯ, ಭರವಸೆಯ ದೃಢವಾದ ವ್ಯಕ್ತಿತ್ವ, ವಿಚಾರವಂತಿಕೆ, ಕಲಾಪ್ರತಿಭೆಯನ್ನು ಪ್ರೇರೇಪಿಸುವ ನಿಟ್ಟಿನಲ್ಲಿ 2 ವಿಭಾಗಗಳಾಗಿ ವಿಂಗಡಿಸಿ ಯಾವುದಾದರು ಒಂದು ಚಟುವಟಿಕೆಯಲ್ಲಿ ಭಾಗವಹಿಸುವುದು.

9 ರಿಂದ 12, 13 ರಿಂದ 16 ವರ್ಷ ಮಕ್ಕಳಿಗೆ ಶಾಸ್ತ್ರೀಯ ನೃತ್ಯ, ಜಾನಪದ ನೃತ್ಯ, ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಸಂಗೀತ, ಸುಗಮ ಸಂಗೀತ.

9 ರಿಂದ 12, 13 ರಿಂದ 16 ವರ್ಷ ಮಕ್ಕಳಿಗೆ ವಾದ್ಯ ಸಂಗೀತ, ತಬಲ, ಮೃದಂಗ, ಕೀಬೋರ್ಡ್, ಕೊಳಲು, ಡೊಳ್ಳು ಮತ್ತು ನಗಾರಿ. 9 ರಿಂದ 12, 13 ರಿಂದ 16 ವರ್ಷ ಮಕ್ಕಳಿಗೆ ವಿಜ್ಞಾನ ಸೃಜನಾತ್ಮಕ ಆವಿಷ್ಕಾರ. 9 ರಿಂದ 12, 13 ರಿಂದ 16 ವರ್ಷ ಮಕ್ಕಳಿಗೆ ಚಿತ್ರ ಕಲೆ ಸ್ಪರ್ಧಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ವಿಜೇತ ಮಕ್ಕಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಗುತ್ತದೆ. ಹಾಗೆಯೇ ಕಾರ್ಯಕ್ರಮದಲ್ಲಿ ವಿಜೇತರಾದ ಮಕ್ಕಳನ್ನು ನವೆಂಬರ್, 28 ರಂದು ನಡೆಯುವ ರಾಜ್ಯ ಮಟ್ಟದ ಕಲಾಶ್ರೀ ಸ್ಪರ್ಧಾ ಕಾರ್ಯಕ್ರಮಕ್ಕೆ ಕರೆದೊಯ್ಯಲಾಗುವುದು.

ಆದ್ದರಿಂದ ಈ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಸಕ್ತಿ ಇರುವ ಮಕ್ಕಳು ನ. 20 ರೊಳಗೆ ದೂರವಾಣಿ ಸಂಖ್ಯೆ: 6363285685, 8618861505 ಸಮಯ 10.30 ರಿಂದ 5 ರವರೆಗೆ ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳುವಂತೆ ತಿಳಿಸಿದೆ. ಹೆಸರು ನೋಂದಾಯಿಸಿದ ಮಕ್ಕಳಿಗೆ ಮಾತ್ರ ಭಾಗವಹಿಸಲು ಆದ್ಯತೆ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಲವು ನಾಯಿಯನ್ನು ಅಲ್ಲಾಡಿಸಲು ಸಾಧ್ಯವಿಲ್ಲ : ಸಚಿವ ಮಹದೇವಪ್ಪ
ಸಿಎಂ ಗೊಂದಲ ಶೀಘ್ರವೇ ಬಗೆಹರಿಸಿ : ದೇಶಪಾಂಡೆ