ವಿದ್ಯಾರ್ಥಿಗಳಿಗೆ ಗೆಳೆಯರ ಬಳಗ ಪ್ರೇರಣೆ

KannadaprabhaNewsNetwork |  
Published : Jun 18, 2025, 11:50 PM IST
ಗುರುವಂದನೆ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಇಂದಿನ ದಿನಗಳಲ್ಲಿ ಯಾರ ಬಳಿಯಾದ್ರೂ ನಿಮ್ಮ ಒಳ್ಳೆಯ ದಿನಗಳು ಯಾವವು ಎಂದು ಕೇಳಿದರೆ ಎಲ್ಲರೂ ಬಾಲ್ಯದ ದಿನಗಳು ಎಂದು ಉತ್ತರ ನೀಡುತ್ತಾರೆ. ಬಾಲ್ಯ ಎಂದಾಕ್ಷಣ ನಮಗೆ ಮೊದಲು ನೆನಪಾಗುವುದು ಬಾಲ್ಯದಲ್ಲಿನ ಸ್ನೇಹಿತರು ಎಂದು ಶಿವಾಚಾರ್ಯ ಮಹಾವಿದ್ಯಾಲಯದ ಅಧ್ಯಕ್ಷ ರವಿ ನಾಯಕ ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಇಂದಿನ ದಿನಗಳಲ್ಲಿ ಯಾರ ಬಳಿಯಾದ್ರೂ ನಿಮ್ಮ ಒಳ್ಳೆಯ ದಿನಗಳು ಯಾವವು ಎಂದು ಕೇಳಿದರೆ ಎಲ್ಲರೂ ಬಾಲ್ಯದ ದಿನಗಳು ಎಂದು ಉತ್ತರ ನೀಡುತ್ತಾರೆ. ಬಾಲ್ಯ ಎಂದಾಕ್ಷಣ ನಮಗೆ ಮೊದಲು ನೆನಪಾಗುವುದು ಬಾಲ್ಯದಲ್ಲಿನ ಸ್ನೇಹಿತರು ಎಂದು ಶಿವಾಚಾರ್ಯ ಮಹಾವಿದ್ಯಾಲಯದ ಅಧ್ಯಕ್ಷ ರವಿ ನಾಯಕ ಹೇಳಿದರು.

ಪಟ್ಟಣದ ತಂಗಡಗಿ ರಸ್ತೆಯಲ್ಲಿರುವ ಶಿವಾಚಾರ್ಯ ಮಹಾವಿದ್ಯಾಲಯದಲ್ಲಿ 1985ರ ಹಳೆಯ ವಿದ್ಯಾರ್ಥಿಗಳು ಹಮ್ಮಿಕೊಂಡಿರುವ ಈ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮದ ಮೂಲಕ ಎಲ್ಲಾ ಗುರುಗಳನ್ನು ಒಂದೇ ವೇದಿಕೆ ಕರೆತಂದು ಸಂಗಮ ಮಾಡಿದ್ದೀರಿ. ಇದು ಸ್ನೇಹ ಸಮ್ಮಿಲನದ ಮೂಲಕ ಮೆರುಗು ನೀಡಿ ನಿಮ್ಮ ತರಗತಿಯಲ್ಲಿನ ಸಿಹಿಕಹಿ ಘಟನೆಗಳನ್ನು ನೆನಪು ಮಾಡಿಕೊಂಡು ಗುರುಗಳಿಗೆ ಒಂದು ಆತ್ಮೀಯ ಭಾವನೆ ಮೂಡಿಸಲಾಗಿದೆ. ಮೊದಲಿಗೆ ತಂದೆ ತಾಯಿಯೇ ಗುರುಗಳು, ನಂತರದಲ್ಲಿ ಶಿಕ್ಷಕರು ಈ ಮೂರನೇ ವ್ಯಕ್ತಿಗೆ ನೀವು ಗುರುವಿಗೆ ವಿಶೇಷ ಗೌರವಿಸುತ್ತಿರುವುದು ಮಹತ್ವದಲ್ಲಿ ಒಂದಾಗಿದೆ. ಇಂದಿನ ವಿದ್ಯಾರ್ಥಿಗಳಿಗೆ ನಮ್ಮ ಗೆಳೆಯರ ಬಳಗ ಪ್ರೇರಣೆಯಾಗಿ ನಿಲ್ಲಬೇಕಿದೆ. ಕಾರಣ ಅಲ್ಲಿ ಎಷ್ಟು ನಿಷ್ಕಲ್ಮಶವಾದ ಪ್ರೀತಿ, ವಾತ್ಸಲ್ಯ ಮತ್ತು ಆತ್ಮೀಯತೆ ಇದೆ ಎಂಬುದು ತೋರಿಸುತ್ತದೆ ಎಂದು ಹೇಳಿದರು.

ಡಾ.ಸಂಜಯ್ ಮಾಲಗತ್ತಿ ಪ್ರಾಸ್ತಾವಿಕ ಮಾತನಾಡಿದರು. ಗೆಳೆಯರ ಬಳಗದ ಸದಸ್ಯರಾದ ಉಮೇಶ ವರದಪ್ಪನವರ, ಮುಕುಂದ ಕುಲಕರ್ಣಿ, ಡಾ.ಸಂಜಯ ಪಾಟೀಲ, ಶರಣು ದೇಗಿನಾಳ ಅಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಗೆಳೆಯರ ಬಳಗದಿಂದ 2025ರಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಈ ಸಮಯದಲ್ಲಿ ಗೆಳೆಯರ ಬಳಗದ ಸದಸ್ಯ ವೆಂಕಟೇಶ ಕೊರ್ತಿ, ರಾಜು ಓಸ್ವಾಲ್, ಇಕ್ವಾಲ್ ಮುದ್ದೇಬಿಹಾಳ, ಲೆಶಪ್ಪ ಪ್ಯಾಟಿಗೌಡ, ರವಿ ಪೂಜಾರಿ, ಬಸ್ಸು ಸಿದ್ದಾಪೂರ, ಎಂ.ಪಿ.ಉಪನಾಳ, ಮ್ಯಾಗೇರಿ, ಬಾಳದರಿಪ್ಪ, ಜಗದೀಶ ಸೋಮನಕಟ್ಟಿ, ಡಾ.ಬಾಬು ಗುರಿಕಾರ, ಸಿದ್ದು ಮಾತಿನ, ಪ್ರಶಾಂತ ಜವಳಗಿ, ಮುನ್ನಪ ಮುರಾಳ, ಬಸವಂತ ದೇಶಪಾಂಡೆ, ಸೇರಿ ಇತರರು ಇದ್ದರು. ಗೆಳೆಯರ ಬಳಗದ ಸದಸ್ಯ ಬಾಳು ಗಿಂಡಿ ಪ್ರಾರ್ಥಿಸಿದರು. ಶಿಕ್ಷಕ ಬಸವರಾಜ ಕಲ್ಲುಂಡಿ ನಿರೂಪಿಸಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ