ಬನಶಂಕರಿದೇವಿ ಪೀತಾಂಭರ ಸೀರೆ: ಪಾಲಕಿ ಮೆರವಣಿಗೆ

KannadaprabhaNewsNetwork |  
Published : Jan 25, 2024, 02:02 AM IST
 ಗುಡೂರ(ಎಸ್.ಸಿ) ಗ್ರಾಮದಿಂದ ಬನಶಂಕರಿ ಕ್ಷೇತ್ರಕ್ಕೆ ಪಾದಯಾತ್ರೆ ಹೊರಟಿದ್ದ ಹಂಪಿಹೇಮಕೂಟ ಶ್ರೀಗಾಯತ್ರಿ ಪೀಠದ ದಯಾನಂದಪುರಿ ಶ್ರೀಗಳನ್ನು ದೇವಾಂಗ ಸಮಾಜದವರು ಸನ್ಮಾನಿಸಿದರು. | Kannada Prabha

ಸಾರಾಂಶ

ಅಮೀನಗಡ: ಇಲಕಲ್ಲ ತಾಲೂಕಿನ ಗುಡೂರ(ಎಸ್.ಸಿ) ಗ್ರಾಮದಲ್ಲಿ ಶ್ರೀ ಹಂಪಿ ಹೇಮಕೂಟ ಶ್ರೀಗಾಯತ್ರಿ ಪೀಠದಿಂದ ಪಲ್ಲಕ್ಕಿಯೊಂದಿಗೆ ಪಾದಯಾತ್ರೆ ಮೂಲಕ ಬಾದಾಮಿಯ ಶ್ರೀ ಬನಶಂಕರೀದೇವಿಗೆ ಪೀತಾಂಬರ ಸೀರೆ ಸಮರ್ಪಣೆಗೆ ಹೊರಟಿದ್ದ ಮೆರವಣಿಗೆಯನ್ನು ಗುಡೂರಿನ ದೇವಾಂಗ ಸಮಾಜದವರು ಹಾಗೂ ಸಾರ್ವಜನಿಕರು ಗ್ರಾಮದಲ್ಲಿ ಅದ್ಧೂರಿಯಾಗಿ ಸ್ವಾಗತಿಸಿದರು.

ಕನ್ನಡಪ್ರಭವಾರ್ತೆ ಅಮೀನಗಡ

ಇಲಕಲ್ಲ ತಾಲೂಕಿನ ಗುಡೂರ(ಎಸ್.ಸಿ) ಗ್ರಾಮದಲ್ಲಿ ಶ್ರೀ ಹಂಪಿ ಹೇಮಕೂಟ ಶ್ರೀಗಾಯತ್ರಿ ಪೀಠದಿಂದ ಪಲ್ಲಕ್ಕಿಯೊಂದಿಗೆ ಪಾದಯಾತ್ರೆ ಮೂಲಕ ಬಾದಾಮಿಯ ಶ್ರೀ ಬನಶಂಕರೀದೇವಿಗೆ ಪೀತಾಂಬರ ಸೀರೆ ಸಮರ್ಪಣೆಗೆ ಹೊರಟಿದ್ದ ಮೆರವಣಿಗೆಯನ್ನು ಗುಡೂರಿನ ದೇವಾಂಗ ಸಮಾಜದವರು ಹಾಗೂ ಸಾರ್ವಜನಿಕರು ಗ್ರಾಮದಲ್ಲಿ ಅದ್ಧೂರಿಯಾಗಿ ಸ್ವಾಗತಿಸಿದರು.

ಹಂಪಿಹೇಮಕೂಟ ಶ್ರೀಗಾಯತ್ರಿಪೀಠದ ದಯಾನಂದಪುರಿ ಶ್ರೀಗಳ ನೇತೃತ್ವದಲ್ಲಿ ಹೊರಟ ಪಾದಯಾತ್ರೆಯನ್ನು ಗ್ರಾಮದ ಮಳಿಯಪ್ಪಜ್ಜನ ಕಟ್ಟೆಯಲ್ಲಿ ಸ್ವಾಗತಿಸಿ, ಬಸ್ ನಿಲ್ದಾಣ, ಹೊರವಲಯ ಪೋಲೀಸ್‌ ಠಾಣೆ, ಶ್ರೀ ಹುಲ್ಲೆಶ್ವರ ದೇವಸ್ಥಾನ, ನಾಗಪ್ಪನ ಕಟ್ಟೆ, ವಿಜಯ ಮಹಾಂತೇಶ್ವರ ಬ್ಯಾಂಕ್, ಕಾಯಿಪಲ್ಯ ಮಾರುಕಟ್ಟೆ, ಮೈಬೂಬಸಾಬ ಕಟ್ಟೆಯ ಮೂಲಕ ಶ್ರೀ ಬನಶಂಕರಿದೇವಿ ದೇವಸ್ಥಾನ ತಲುಪಿತು. ಮೆರವಣಿಯುದ್ದಕ್ಕೂ ಜಯಘೋಷಣೆ, ಮಹಿಳೆಯರಿಂಧ ಆರತಿ, ಕುಂಭ ಮೆರವಣಿಗೆ, ಮಂಗಳವಾದ್ಯಗಳು ಜರುಗಿದವು. ರಾಜ್ಯದೇವಾಂಗ ಸಮಾಜದ ಅಧ್ಯಕ್ಷ ರವೀಂದ್ರ ಕಲಬುರ್ಗಿ ಇದ್ದರು.

ಈ ಕುರಿತು ಮಾತನಾಡಿದ ದೇವಾಂಗ ಸಮಾಜದ ಹಿರಿಯರಾದ ಈಶ್ವರ ಕಳಸಾ, ಉತ್ತರ ಕರ್ನಾಟಕದಲ್ಲೇ ಪ್ರಖ್ಯಾತಗೊಂಡ ಬದಾಮಿಯ ಬನಶಂಕರೀದೇವಿ ಜಾತ್ರೆಗೆ, ಗುಡೂರು ಮಾರ್ಗವಾಗಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾದಯಾತ್ರೆ ಹೋಗುತ್ತಿದ್ದು, ಹಂಪಿ ಹೇಮಕೂಟ ಶ್ರೀಗಾಯತ್ರಿಪೀಠದ ದಯಾನಂದಪುರಿ ಶ್ರೀಗಳ ನೇತೃತ್ವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾದಯಾತ್ರೆ ಹೋಗುತ್ತಾರೆ. ಈ ಬಾರಿ ಲಿಂಗಸೂರಿನ ಡಾ.ಈಶ್ವರ ಕಿರಗಿ ಬನಶಂಕರೀದೇವಿಗೆ ನೀಡಿದ ಪೀತಾಂಭರ ಸೀರೆಯಯೊಂದಿಗೆ, ಪಾಲಕಿ ಮೆರವಣಿಗೆ ಅದ್ದೂರಿಯಾಗಿ ಜರುಗಿದ್ದು, ಗ್ರಾಮದ ವಿವಿಧ ಸಂಘಟನೆಗಳು, ವ್ಯಾಪಾರಸ್ಥರು ಪಾದಯಾತ್ರೆಗಳಿಗೆ ಉಚಿತ ಪ್ರಸಾದ, ತಂಪು ಪಾನೀಯ,ವಿಶ್ರಾಂತಿ ಕೊಠಡಿ, ಸಿಹಿ ವಿತರಣೆ ಮುಂತಾದ ಸೇವೆ ಮಾಡಲಾಯಿತು ಎಂದು ತಿಳಿಸಿದರು.

ಮೆರವಣಿಗೆಯಲ್ಲಿ ದೇವಾಂಗ ಸಮಾಜದ ಅಧ್ಯಕ್ಷ ಚಂದಪ್ಪ ಕಳಸಾ, ಅರ್ಚಕರಾದ ಮಲ್ಲಪ್ಪ ಬೆಲ್ಲದ, ಜಂಪಣ್ಣ ಬಲಕುಂದಿ, ಶ್ರೀಕಾಂತ ಕಳಸಾ, ನಿಂಗಪ್ಪ ಲಾಯದಗುಂದಿ, ಡೀಕಪ್ಪ ಕಳಸಾ, ದೊಡ್ಡಪ್ಪ ಕಳಸಾ, ರವಿ ಕಳಸಾ, ಮಲ್ಲಪ್ಪ ವೀರಾಪುರ ಸೇರಿದಂತೆ, ಶ್ರೀದೇವಲ ಮಹರ್ಷಿ ತರುಣ ಸಂಘದ ಕಾರ್ಯಕರ್ತರು, ಮಹಿಳೆಯರು ಪಾಲ್ಗೊಂಡಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ