ಮಥುರೆಯಲ್ಲಿ ಪೇಜಾವರ ಶ್ರೀ ರಾಮಕೃಷ್ಣರ ಪೂಜೆ

KannadaprabhaNewsNetwork |  
Published : Oct 08, 2026, 02:30 AM IST
ಮಥುರೆಯಲ್ಲಿ ಪೇಜಾವರ ಶ್ರೀಗಳು ಪೂಜೆ ಸಲ್ಲಿಸಿದರು  | Kannada Prabha

ಸಾರಾಂಶ

ಉಡುಪಿ: ಶ್ರೀ ಕೃಷ್ಣ ಜನ್ಮಭೂಮಿ ಮಥುರೆಯ ಕೃಷ್ಣ ಜನ್ಮಭೂಮಿ ಟ್ರಸ್ಟ್ ನ‌ ವಿಶೇಷ ಮನವಿಯ ಮೇರೆಗೆ, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಮಂಗಳವಾರ ಪವಿತ್ರ ಏಕಾದಶಿಯಂದು ಭೇಟಿ ನೀಡಿದರು. ಅಲ್ಲಿನ ಶ್ರೀ ಕೃಷ್ಣ ದೇವರ ಸನ್ನಿಧಿಯಲ್ಲಿ ತಮ್ಮ ಮಠದ ಪಟ್ಟದ ದೇವರಾದ ಶ್ರೀ ರಾಮ‌ವಿಠಲನಿಗೆ ವಿಶೇಷ ಪೂಜೆ ನೆರವೇರಿಸಿದರು.

ಉಡುಪಿ: ಶ್ರೀ ಕೃಷ್ಣ ಜನ್ಮಭೂಮಿ ಮಥುರೆಯ ಕೃಷ್ಣ ಜನ್ಮಭೂಮಿ ಟ್ರಸ್ಟ್ ನ‌ ವಿಶೇಷ ಮನವಿಯ ಮೇರೆಗೆ, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಮಂಗಳವಾರ ಪವಿತ್ರ ಏಕಾದಶಿಯಂದು ಭೇಟಿ ನೀಡಿದರು. ಅಲ್ಲಿನ ಶ್ರೀ ಕೃಷ್ಣ ದೇವರ ಸನ್ನಿಧಿಯಲ್ಲಿ ತಮ್ಮ ಮಠದ ಪಟ್ಟದ ದೇವರಾದ ಶ್ರೀ ರಾಮ‌ವಿಠಲನಿಗೆ ವಿಶೇಷ ಪೂಜೆ ನೆರವೇರಿಸಿದರು.ಬಳಿಕ ಕೃಷ್ಣ ಜನ್ಮಸ್ಥಾನದಲ್ಲಿ ಶ್ರೀ ವಿಷ್ಣುಸಹಸ್ರನಾಮಪಠಣ, ತುಲಸಿ ಪುಷ್ಪಾರ್ಚನೆ, ಗೋಪೂಜೆಯನ್ನೂ ನೆರವೇರಿಸಿ ಸಮಸ್ತ ಭಾರತ ದೇಶ, ಸನಾತನ ಧರ್ಮ ಹಾಗೂ ಜಗತ್ತಿನ ಕ್ಷೇಮಕ್ಕಾಗಿ ಕೃಷ್ಣನಿಗೆ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭ ಕೃಷ್ಣ ಜನ್ಮಭೂಮಿ ಟ್ರಸ್ಟಿನ ಮುಖ್ಯಸ್ಥರಾದ ಕಪಿಲ್ ಶರ್ಮಾ, ಈ ದಿನ ಸಮಸ್ತ ಮಥರಾ ವಾಸಿಗಳಿಗೆ ಅತ್ಯಂತ ಮಹತ್ವದ ಮತ್ತು ಸ್ಮರಣೀಯ ದಿನವಾಗಿದೆ‌.‌ ಅಯೋಧ್ಯಾ ರಾಮಜನ್ಮಭೂಮಿ ಟ್ರಸ್ಟಿನ ವಿಶ್ವಸ್ಥರಾದ ಪೇಜಾವರ ಶ್ರೀಗಳು ಇಲ್ಲಿ ಪೂಜೆ ನೆರವೇರಿಸಿರುವುದು ಮಥುರೆ-ಉಡುಪಿ, ದಕ್ಷಿಣ-ಉತ್ತರ ಹಾಗೂ ಅಯೋಧ್ಯಾ-ಮಥುರಾ ಕ್ಚೇತ್ರಗಳ ದಿವ್ಯ ಸಂಗಮ, ಪೇಜಾವರ ಶ್ರೀಗಳ ಆಗಮನ ಅಯೋಧ್ಯೆಯಂತೆ ಮಧುರೆಯ ಕೃಷ್ಣ ಜನ್ಮಭೂಮಿಯ ಮುಕ್ತಿಯ ಸಾಕಾರಕ್ಕೂ ಮುಹೂರ್ತ ಫಿಕ್ಸ್ ಆಗಿರುವಂತಿದೆ ಎಂದು ಬಣ್ಣಿಸಿದರು.ಶ್ರೀ ವಿಶ್ವಪ್ರಸನ್ನ ತೀರ್ಥರು, ರಾಮ ಜನ್ಮಭೂಮಿಯಂತೆ ಕೃಷ್ಣ ಜನ್ಮಭೂಮಿಯೂ ಶೀಘ್ರ ಮುಕ್ತಿಗೊಳ್ಳಬೇಕು, ಇಡೀ ಜಗತ್ತಿಗೆ ರಾಮ‌ - ಕೃಷ್ಣರ ಅನುಗ್ರಹದ ರಕ್ಷೆ ಲಭಿಸಬೇಕು ಎಂದು ಪ್ರಾರ್ಥಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್‌ಐಆರ್ ಲೋಪ: ರಾಷ್ಟ್ರಪತಿಗೆ ಇಂಡಿಯಾ ಒಕ್ಕೂಟ ಮನವಿ
ಸಂಸ್ಕೃತಿ ಜತೆಗೆ ಗ್ರಾಮೀಣ ಕ್ರೀಡೆ ಉಳಿಸಿ ಬೆಳೆಸಿ: ಪರಮೇಶ್ವರ್