ವಿಶ್ವನಾಥ ಮಲೇಬೆನ್ನೂರು
ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಆಸ್ತಿ ಮಾಲೀಕರಿಗೆ ಶೇಕಡ 50ರಷ್ಟು ದಂಡ ಹಾಗೂ ಬಡ್ಡಿ ಮೊತ್ತವನ್ನು ಸಂಪೂರ್ಣ ಮನ್ನಾ ಮಾಡಿ ‘ಒನ್ ಟೈಮ್ ಸೆಟ್ಲಮೆಂಟ್’ (ಓಟಿಎಸ್) ಯೋಜನೆ ಜಾರಿಗೊಳಿಸಿದ ಬಳಿಕ ಆಸ್ತಿ ತೆರಿಗೆ ಸಂಗ್ರಹದಲ್ಲಿ ಭಾರೀ ಕುಸಿತ ಉಂಟಾದ ಪರಿಣಾಮ ಬಿಬಿಎಂಪಿಯು ₹4 ಸಾವಿರ ಕೋಟಿ ಗಡಿಯನ್ನು ತಲುಪುವುದಕ್ಕೆ ಸಾಧ್ಯವಾಗಿಲ್ಲ.
ಹಲವಾರು ವರ್ಷದಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಆಸ್ತಿ ಮಾಲೀಕರಿಂದ ಬಾಕಿ ಮೊತ್ತ ವಸೂಲಿಗೆ ರಾಜ್ಯ ಸರ್ಕಾರವೂ ಒಂದು ಅವಕಾಶ ನೀಡಿ ಕಳೆದ ಫೆ.23ರಂದು ಓಟಿಎಸ್ ಯೋಜನೆ ಜಾರಿಗೊಳಿಸಿ ಜುಲೈ 31ರವರೆಗೆ ಬಾಕಿ ಪಾವತಿಗೆ ಗಡುವು ನೀಡಿ ಆದೇಶಿಸಿತ್ತು. ಆರ್ಥಿಕ ವರ್ಷದ ಅಂತ್ಯದಲ್ಲಿ ಹೆಚ್ಚಿನ ಪ್ರಮಾಣದ ತೆರಿಗೆ ವಸೂಲಿ ಆಗುವುದು ವಾಡಿಕೆ. ಆದರೆ, ಈ ಬಾರಿ ಒಟಿಎಸ್ ಜಾರಿಯಿಂದ ತೆರಿಗೆ ಸಂಗ್ರಹದಲ್ಲಿ ಹಿನ್ನೆಡೆಯಾಗಿದೆ.ಒಟಿಎಸ್ ಯೋಜನೆ ಜಾರಿಗೆ ಬರುವ ಹಿಂದಿನ ತಿಂಗಳು (ಜ.-23ರಿಂದ ಫೆ-22ರ ಅಧಿಯಲ್ಲಿ) ಬರೋಬ್ಬರಿ ₹215 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿತ್ತು. ಜಾರಿ ಬಳಿಕ ಅಂದರೆ ಫೆ.23ರಿಂದ ಮಾ.22ರ ಅವಧಿಯಲ್ಲಿ ಕೇವಲ ₹157 ಕೋಟಿ ಮಾತ್ರ ಆಸ್ತಿ ತೆರಿಗೆ ವಸೂಲಿಯಾಗಿದೆ. ಕೇವಲ ಒಂದು ತಿಂಗಳಲ್ಲಿ ₹65 ಕೋಟಿಗೂ ಅಧಿಕ ಮೊತ್ತ ಕಡಿಮೆ ವಸೂಲಿಯಾಗಿದೆ.
ಒಟಿಎಸ್ ಲಾಭ ಪಡೆಯುವುದಕ್ಕೆ ಜುಲೈ 31ರವರೆಗೆ ಅವಕಾಶವಿದೆ. ಸದ್ಯ ಬಾಕಿ ಪಾವತಿ ಮಾಡಿದರೂ ಮತ್ತು ಜುಲೈ ಅಂತ್ಯದಲ್ಲಿ ಬಾಕಿ ಪಾವತಿ ಮಾಡಿದರೂ ಯಾವುದೇ ವ್ಯತ್ಯಾಸ ಉಂಟಾಗುವುದಿಲ್ಲ ಎಂಬ ಕಾರಣಕ್ಕೆ ಸುಸ್ತಿದಾರರು ಆಸ್ತಿ ತೆರಿಗೆ ಪಾವತಿಗೆ ಮುಂದಾಗುತ್ತಿಲ್ಲ. ಜತೆಗೆ, ಭಾರೀ ಪ್ರಮಾಣದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರು ಶ್ರೀಮಂತರು ಮತ್ತು ಉದ್ಯಮಿಗಳಾಗಿದ್ದಾರೆ. ಪಾವತಿಸುವ ಬಾಕಿ ಮೊತ್ತದಿಂದ ನಾಲ್ಕು ತಿಂಗಳು ಲಾಭ ಪಡೆಯುವ ಉದ್ದೇಶ ಹೊಂದಿದ್ದಾರೆ.
ಇನ್ನಷ್ಟು ರಿಯಾಯಿತಿ ನಿರೀಕ್ಷೆಯಲ್ಲಿ:
₹4 ಸಾವಿರ ಕೋಟಿ ತಲುಪದ ಆಸ್ತಿ ತೆರಿಗೆ
ಬಿಬಿಎಂಪಿ ರಚನೆ ಆಗಿದಾಗಿನಿಂದ ಈವರೆಗೆ ಬಜೆಟ್‌ನಲ್ಲಿ ಆಸ್ತಿ ಸಂಗ್ರಹಣೆ ಬಗ್ಗೆ ಘೋಷಣೆ ಮಾಡಿಕೊಂಡ ಗುರಿಯನ್ನು ಒಂದೇ ಒಂದು ಬಾರಿಯೂ ಬಿಬಿಎಂಪಿ ಸಾಧಿಸಿಲ್ಲ. 2021-22ನೇ ಸಾಲಿನಲ್ಲಿ ₹4 ಸಾವಿರ ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿಯಲ್ಲಿ ₹3,088 ಕೋಟಿ ಸಂಗ್ರಹಿಸಿತ್ತು. 2022-23ರಲ್ಲಿ ₹4,189 ಕೋಟಿ ಆಸ್ತಿ ತೆರಿಗೆ ವಸೂಲಿ ಮಾಡುವ ಗುರಿ ಹಾಕಿಕೊಂಡಿತ್ತು. ₹3,332.72 ಕೋಟಿ ಸಂಗ್ರಹಿಸಿತ್ತು. ಈ ಬಾರಿ 2023-24ರಲ್ಲಿ ₹4,412 ಕೋಟಿ ವಸೂಲಿ ಮಾಡುವ ಗುರಿ ಹಾಕಿಕೊಂಡಿತ್ತು. ಆದರೆ, ಮಾ.28ರವರೆಗೆ ಕೇವಲ ₹3,801.61 ಕೋಟಿ ವಸೂಲಿ ಮಾಡಿದೆ.
ಕಳೆದ ಆರು ವರ್ಷ ತೆರಿಗೆ ಸಂಗ್ರಹ ವಿವರವರ್ಷಗುರಿಸಂಗ್ರಹ2018-193,1002,5292019-203,5002,6592020-213,5002,8602021-224,0003,0892022-234,1893,3322023-244,4123,801