ಕನ್ನಡಪ್ರಭ ವಾರ್ತೆ ಹರಿಹರ
ನಗರದ ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣದ ಸುತ್ತಮುತ್ತ ಇರುವ ಅಂಗಡಿಗಳ ಮೇಲೆ ಮುಖ್ಯ ಜಾಗೃತ ಅಧಿಕಾರಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆ ಆದೇಶದಂತೆ ಅಧಿಕಾರಿಗಳು ದಾಳಿ ನಡೆಸಿದರು.
ದಾವಣಗೆರೆ ಗ್ರಾಮಾಂತರ ಪೊಲೀಸ್ ಉಪಾಧಿಕ್ಷಕ ಬಿ.ಎಸ್ ಬಸವರಾಜ್ ಮಾತನಾಡಿ, ಈಗಾಗಲೇ ಒಂದು ಬಾರಿ ತಿಳಿವಳಿಕೆ ಹೇಳಿ ₹೨೦೦ ದಂಡ ವಿಧಿಸಲಾಗಿದೆ. ಕೋಟ್ಪಾ ಕಾಯ್ದೆ ಪ್ರಕಾರ ಪದೇಪದೇ ಉಲ್ಲಂಘನೆ ಕಂಡುಬಂದಲ್ಲಿ ಸೆಕ್ಷನ್ ೨೧ರ ಅಡಿಯಲ್ಲಿ ₹೨೦೦೦ ವರೆಗೂ ದಂಡ ವಿಧಿಸಬಹುದಾಗಿದೆ ಎಂದು ತಿಳಿಸಿದರು.ಹರಿಹರ ತಾಲೂಕು ಆರೋಗ್ಯ ಅಧಿಕಾರಿ ಡಾಕ್ಟರ್ ಅಬ್ದುಲ್ ಖಾದರ್, ಜಿಲ್ಲಾ ಸಲಹೆಗಾರ ಸತೀಶ್ ಕಲಹಳ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಉಮ್ಮಣ್ಣ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ನಾಗರಾಜ್, ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕರಾದ ರವಿಪ್ರಕಾಶ್, ಅಮ್ರೀನ್, ಸಂತೋಷ್ ಕುಮಾರ್, ದಾದಾಪೀರ್ ಇತರರು ಭಾಗವಹಿಸಿದ್ದರು.
- - - -೨೪ಎಚ್‌ಆರ್‌ಆರ್‌೧:ಹರಿಹರ ನಗರದಲ್ಲಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸುತ್ತಮುತ್ತಲ ಅಂಗಡಿಗಳ ಮೇಲೆ ತಂಬಾಕು ನಿಯಂತ್ರಣ ಕಾಯ್ದೆಯಡಿ ಅಧಿಕಾರಿಗಳು ನಡೆಸಿ, ದಂಡ ವಿಧಿಸಿ, ಕೊಪ್ಟಾ-೨೦೦೩ ಕಾಯ್ದೆ ಜಾಗೃತಿ ಮೂಡಿಸಿದರು.