ಪೆಂಡಾಲ್, ಶಾಮಿಯಾನ ಅಸೋಸಿಯೇಶನ್ ಜಿಲ್ಲಾ ಸಮಾವೇಶ ನಾಳೆಯಿಂದ

KannadaprabhaNewsNetwork |  
Published : Aug 01, 2025, 12:30 AM IST
31ಎಚ್‌ವಿಆರ್4- | Kannada Prabha

ಸಾರಾಂಶ

ಆ. 2ರಂದು ಬೆಳಗ್ಗೆ 8.30ಕ್ಕೆ ಧ್ವಜಾರೋಹಣ, 10.30ಕ್ಕೆ ಮಳಿಗೆಗಳ ಉದ್ಘಾಟನೆ, 11ಕ್ಕೆ ಮೆರವಣಿಗೆ ನಡೆಯಲಿದ್ದು, ಸಂಜೆ 5 ಗಂಟೆಗೆ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಮಾವೇಶದ ವೇದಿಕೆ ಕಾರ್ಯಕ್ರಮ ಜರುಗಲಿದೆ.

ಹಾವೇರಿ: ಜಿಲ್ಲಾ ಪೆಂಡಾಲ್, ಶಾಮಿಯಾನ ಸಪ್ಲೈಯರ್ಸ್ ಅಸೋಸಿಯೇಷನ್‌ನಿಂದ ಜಿಲ್ಲಾ ಮತ್ತು ತಾಲೂಕು ಸಮಾವೇಶವನ್ನು ಆ. 2 ಮತ್ತು 3ರಂದು ನಗರದ ಸಿಂದಗಿಮಠದಲ್ಲಿ ಆಯೋಜಿಸಲಾಗಿದೆ ಎಂದು ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಮಾಣಿಕಚಂದ ಲಾಡರ ತಿಳಿಸಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆ. 2ರಂದು ಬೆಳಗ್ಗೆ 8.30ಕ್ಕೆ ಧ್ವಜಾರೋಹಣ, 10.30ಕ್ಕೆ ಮಳಿಗೆಗಳ ಉದ್ಘಾಟನೆ, 11ಕ್ಕೆ ಮೆರವಣಿಗೆ ನಡೆಯಲಿದ್ದು, ಸಂಜೆ 5 ಗಂಟೆಗೆ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಮಾವೇಶದ ವೇದಿಕೆ ಕಾರ್ಯಕ್ರಮ ಜರುಗಲಿದೆ. ವೇದಿಕೆ ಕಾರ್ಯಕ್ರಮವನ್ನು ಸೋಂದಾ ಜೈನಮಠದ ಅಭಿನವ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕರು ಉದ್ಘಾಟಿಸುವರು.

ನೇತೃತ್ವವನ್ನು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠ ಹಾಗೂ ಶಿರೋಳ ತೋಂಟದಾರ್ಯಮಠದ ಶಾಂತಲಿಂಗ ಸ್ವಾಮೀಜಿ ಹಾಗೂ ಉಡುಪಿ ಜಮಾಹತೆ ಇಸ್ಲಾಮಿ ಹಿಂದ ರಾಜ್ಯ ಕಾರ್ಯದರ್ಶಿ ಹಜರತ್ ಅಕ್ಬರಲಿ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಜಿಲ್ಲಾ ಪೆಂಡಾಲ, ಶಾಮಿಯಾನ ಸಪ್ಲೈಯರ್ಸ್‌ ಅಸೋಸಿಯೇಶನ್ ಜಿಲ್ಲಾಧ್ಯಕ್ಷ ಮುರುಗೇಶ ಹುಂಬಿ ವಹಿಸಿಕೊಳ್ಳಲಿದ್ದಾರೆ ಎಂದರು.ಅಸೋಸಿಯೇನ್ ಜಿಲ್ಲಾಧ್ಯಕ್ಷ ಮುರುಗೇಶ ಹುಂಬಿ ಮಾತನಾಡಿ, ಕಾರ್ಯಕ್ರಮದಲ್ಲಿ ಸುಮಾರು 25ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಿ ವೃತ್ತಿಯವರಿಗೆ ವ್ಯಾಪಾರದ ಅನುಕೂಲತೆ ಕಲ್ಪಿಸಿಕೊಡಲಾಗುವುದು ಎಂದರು. ಸಮಾವೇಶದಲ್ಲಿ ಜಿಲ್ಲೆಯ ಸುಮಾರು ಸಾವಿರಕ್ಕೂ ಹೆಚ್ಚಿನ ಶಾಮಿಯಾನಗಳ ಮಾಲೀಕರು ಹಾಗೂ ಅವರ ಸಹಾಯಕರು ಸೇರಿದಂತೆ ಸುಮಾರು 2000ಕ್ಕೂ ಹೆಚ್ಚಿನ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು. ಸಂಘಟನೆಯ ಉಪಾಧ್ಯಕ್ಷ ಇಂದುಧರ ಮುಳಗುಂದ, ರಬ್ಬಾನಿ ಚೂಡಿಗಾರ, ಶಿವಯೋಗಿ ಹೂಗಾರ, ಇರ್ಫಾನ್ ಅಗಡಿ ಇತರರು ಇದ್ದರು.ವಾಟ್ಸ್‌ಆ್ಯಪ್‌ ಲಿಂಕ್‌ ಒತ್ತಿ ₹2.16 ಲಕ್ಷ ಕಳೆದುಕೊಂಡ ವ್ಯಕ್ತಿ

ಹಾವೇರಿ: ಹಣವನ್ನು ಇನ್ವೆಸ್ಟ್ ಮಾಡಿದರೆ ಲಾಭಾಂಶ ಕೊಡುವುದಾಗಿ ಹೇಳಿ ಅಪರಿಚಿತ ವ್ಯಕ್ತಿ ಕಳುಹಿಸಿದ ಲಿಂಕ್‌ನ್ನು ಒತ್ತಿದ್ದರಿಂದ ವ್ಯಕ್ತಿಯೊಬ್ಬ 2.16 ಲಕ್ಷ ಹಣವನ್ನು ಕಳೆದುಕೊಂಡ ಘಟನೆ ನಡೆದಿದೆ.

ಹಾವೇರಿಯ ಬಸವೇಶ್ವರ ನಗರ ಸಿ ಬ್ಲಾಕ್ ನಿವಾಸಿ ಪ್ರವೀಣ ಗುಡ್ಡಪ್ಪ ಮಡಿವಾಳರ ಎಂಬಾತನೇ ಮೋಸ ಹೋಗಿರುವ ವ್ಯಕ್ತಿ. ಯಾರೋ ಅಪರಿಚಿತರು ವಾಟ್ಸ್ಆ್ಯಪ್‌ಗೆ ಲಿಂಕ್‌ವೊಂದನ್ನು ಕಳುಹಿಸಿ ಕ್ಲಿಕ್ ಮಾಡುವಂತೆ ಸೂಚಿಸಿದ್ದಾರೆ. ಬಳಿಕ ಲಾಗಿನ್ ಕ್ರಿಯೆಟ್ ಮಾಡಿಸಿ, ಹಣವನ್ನು ಇನ್ವೆಸ್ಟ್ ಮಾಡಿದರೆ ಲಾಭಾಂಶ ಕೊಡುವುದಾಗಿ ಹೇಳಿ ನಂಬಿಸಿ ವಿವಿಧ ಬ್ಯಾಂಕ್ ಅಕೌಂಟ್‌ಗಳಿಂದ ಒಟ್ಟು 2,16 ಲಕ್ಷವನ್ನು ಹಾಕಿಸಿಕೊಂಡು ಮೋಸ ಮಾಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಿದೆ. ಹಾವೇರಿ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌