ವಿಪಕ್ಷ ತಿರಸ್ಕರಿಸಿ, ಬಿಜೆಪಿ ಗೆಲ್ಲಿಸಲು ಜನತೆ ಉತ್ಸುಕ

KannadaprabhaNewsNetwork |  
Published : Apr 02, 2024, 01:00 AM IST
ಗಜೇಂದ್ರಗಡ ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ನಡೆದ ಲೋಕಸಭಾ ಚುನಾವಣಾ ಪ್ರಚಾರ ಹಾಗೂ ಮತಯಾಚನೆ ಕಾರ್ಯಕ್ರಮದಲ್ಲಿ ಬಸವರಾಜ ಬೊಮ್ಮಾಯಿ ಮಾತನಾಡಿದರು. | Kannada Prabha

ಸಾರಾಂಶ

ಕಳೆದ ೧೦ ವರ್ಷದ ಅವಧಿಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ವಿಶ್ವದ ಗಮನ ಸೆಳೆಯುವುದರ ಜತೆಗೆ ಪಾರದರ್ಶಕ ಆಡಳಿತದ ಮೂಲಕ ದೇಶವನ್ನು ಅಭಿವೃದ್ಧಿ ಪಥದತ್ತ ಸಾಗುತ್ತಿದೆ

ಗಜೇಂದ್ರಗಡ: ವಿಶ್ವದ ಬಲಿಷ್ಠ ಹಾಗೂ ಸದೃಢ ರಾಷ್ಟ್ರಗಳಲ್ಲಿ ಭಾರತ ಅಗ್ರಗಣ್ಯ ಪಟ್ಟಿಯಲ್ಲಿದ್ದು, ಭಾರತವನ್ನು ವಿಶ್ವಗುರುವನ್ನಾಗಿಸಲು ದೇಶದ ಜನತೆ ಚುನಾವಣೆಯಲ್ಲಿ ವಿಪಕ್ಷಗಳನ್ನು ತಿರಸ್ಕರಿಸಿ, ಬಿಜೆಪಿ ಗೆಲ್ಲಿಸಲು ಉತ್ಸುಕವಾಗಿದ್ದಾರೆ ಎಂದು ಹಾವೇರಿ-ಗದಗ ಲೋಕಸಭಾ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.

ಲೋಕಸಭಾ ಚುನಾವಣೆ ಹಿನ್ನೆಲೆ ತಾಲೂಕಿನ ಕುಂಟೋಜಿ ಹಾಗೂ ನಿಡಗುಂದಿ ಗ್ರಾಮದಲ್ಲಿ ಸೋಮವಾರ ನಡೆದ ಪ್ರಚಾರ ಹಾಗೂ ಮತಯಾಚನೆ ಕಾರ್ಯಕ್ರಮದಲ್ಲಿ ಮತಯಾಚಿಸಿ ಮಾತನಾಡಿದರು.

ಕಳೆದ ೧೦ ವರ್ಷದ ಅವಧಿಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ವಿಶ್ವದ ಗಮನ ಸೆಳೆಯುವುದರ ಜತೆಗೆ ಪಾರದರ್ಶಕ ಆಡಳಿತದ ಮೂಲಕ ದೇಶವನ್ನು ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಹೀಗಾಗಿ ಬಿಜೆಪಿಯ ೪೦೦ಕ್ಕೂ ಅಧಿಕ ಅಭ್ಯರ್ಥಿಗಳು ಗೆದ್ದು ಲೋಕಸಭೆ ಪ್ರವೇಶಿಸಲಿದ್ದಾರೆ ಎಂಬ ಸತ್ಯ ವಿಪಕ್ಷಗಳಿಗೆ ತಿಳಿದಿದೆ. ಹೀಗಾಗಿ ರಾಜ್ಯ ಸರ್ಕಾರದಲ್ಲಿ ಒಬ್ಬ ಸಚಿವರು ಸಹ ಚುನಾವಣೆಗೆ ಸ್ಪರ್ಧಿಸುವ ಧೈರ್ಯ ಮಾಡಿಲ್ಲ ಎಂದ ಅವರು, ಬಿಜೆಪಿ ನಗರಗಳಿಂದ ಹಿಡಿದು ಗ್ರಾಮೀಣ ಜನರ ಆರೋಗ್ಯ ರಕ್ಷಣೆಗಾಗಿ ಆಯುಷ್ಮಾನ ಭಾರತ, ರೈತರ ಸಂಕಷ್ಟ ನಿವಾರಣೆಗಾಗಿ ಕಿಸಾನ್ ಸಮ್ಮಾನ್, ಹೊಗೆ ರಹಿತ ಮನೆಗಳಿಗಾಗಿ ಉಜ್ವಲ ಹಾಗೂ ಕೈಗೆಟುಕು ದರದಲ್ಲಿ ಔಷಧಿಗಾಗಿ ಜನೌಷಧಿ ಕೇಂದ್ರ ಮತ್ತು ಮನೆ, ಮನೆಗಳಿಗೆ ಜಲಜೀವನ ಮೀಷನ್ ಮೂಲಕ ಗಂಗೆ ಹರಿಸಿದ್ದಾರೆ. ಇತಂಹ ನೂರಕ್ಕೂ ಹೆಚ್ಚು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವ ಮೋದಿ ಸರ್ಕಾರವು ಮತ್ತೊಮ್ಮೆ ಕೇಂದ್ರದಲ್ಲಿ ಐತಿಹಾಸಿಕ ಗೆಲುವಿನ ಮೂಲಕ ಅಧಿಕಾರ ಹಿಡಿಯಲಿದೆ. ಪಕ್ಷದ ಕಾರ್ಯಕರ್ತರು ಮೋದಿ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಜತೆಗೆ ಕಾಂಗ್ರೆಸ್ ಸರ್ಕಾರದ ದುರಾಡಳಿತ ಜನತೆಗೆ ತಿಳಿಸಿ ಎಂದರು.

ಮಾಜಿ ಶಾಸಕ ಕಳಕಪ್ಪ ಬಂಡಿ ಮಾತನಾಡಿ, ನರೇಂದ್ರ ಮೋದಿ ಪ್ರಧಾನಿಯಾಗಿ ಕಳೆದ ೧೦ ವರ್ಷದಲ್ಲಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸುವ ಜನತೆ ನಮಗೆ ಸಿಗುವದಿಲ್ಲ. ಆದರೆ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುವ ಜನರಿದ್ದಾರೆ. ಪ್ರಧಾನಿ ಮೋದಿ ಅವರ ಆಡಳಿತ ಪಾರದರ್ಶಕ, ಜನಪರ ಮತ್ತು ರೈತಪರ ಜತೆಗೆ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ ಎಂಬುದು ಜನತೆಗೆ ತಿಳಿದಿದೆ. ಪಕ್ಷದ ಕಾರ್ಯಕರ್ತರು ಪ್ರಧಾನಿ ಮೋದಿ ಹಾಗೂ ಬಸವರಾಜ ಬೊಮ್ಮಾಯಿ ಅವರ ಅಧಿಕಾರ ಅವಧಿಯಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟು ಮತಯಾಚಿಸುವ ಮೂಲಕ ಬೊಮ್ಮಾಯಿ ಅವರಿಗೆ ಮತಕ್ಷೇತ್ರದಲ್ಲಿ ಅತಿ ಹೆಚ್ಚು ಲೀಡ್ ಕೊಡಿಸುತ್ತೇವೆ ಎಂದರು.

ಜೆಡಿಎಸ್ ಜಿಲ್ಯಾಧ್ಯಕ್ಷ ಎಂ.ವೈ. ಮುಧೋಳ (ಸಾಗರ), ರವಿ ದಂಡಿನ, ಬಿ.ಎಂ. ಸಜ್ಜನರ, ಬಸವರಾಜ ಬಂಕದ, ಜಗದೀಶ ಕರಡಿ, ದಾನು ರಾಠೋಡ, ಎಚ್.ಎಸ್. ಕೊಪ್ಪದ, ಸಂಗಪ್ಪ ಬಲಬುಣಚಿ, ಈರಣ್ಣ ಮೊಗದ, ಈರಣ್ಣ ಜಿಗಳಿ, ಶಂಕ್ರಪ್ಪ ರೊಟ್ಟಿವಾಡ, ಎಸ್.ಎಲ್. ಪಾಟೀಲ, ಬಸವರಾಜ ಮುದೆನಕೊಪ್ಪ, ವೀರಣ್ಣ ಹಡಪದ, ಬಸಪ್ಪ ಅಕ್ಕಿ, ಮುತ್ತಪ್ಪ ಕಾಡಗಿಮಠ, ಅಂದಪ್ಪ ಅಂಗಡಿ, ಸಂಜಿವ ಲೆಕ್ಕಿಹಾಳ, ರಾಮನಗೌಡ ಗೌಡ್ರ ಸೇರಿ ಪಕ್ಷದ ಪ್ರಮುಖರು ಇದ್ದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ