ಹನಮಸಾಗರ: ಪಟ್ಟಣದ ಸಂತೆ ಬಜಾರ್ ಪ್ರದೇಶದಲ್ಲಿರುವ ಪುರುಷರ ಶೌಚಾಲಯದ ಗೋಡೆ ಹಾಗೂ ಕಾಂಪೌಂಡ್ ಬಿದ್ದು ಕಾರಣ ಜನರಿಗೆ ತೀವ್ರ ತೊಂದರೆ ಎದುರಾಗಿದೆ.
ಗ್ರಾಮದ 6ನೇ ವಾರ್ಡ್‌ನ ವ್ಯಾಪ್ತಿಯ ಈ ಶೌಚಾಲಯದ ಗೋಡೆ ಮೂರು ನಾಲ್ಕು ತಿಂಗಳು ಹಿಂದೆಯೇ ಬಿದ್ದಿದ್ದರೂ, ಸಂಬಂಧಿಸಿದ ವಾರ್ಡ್ ಸದಸ್ಯರು ಹಾಗೂ ಗ್ರಾಪಂ ಅಧಿಕಾರಿಗಳು ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸಂತೆ ಬಜಾರ್‌ನಲ್ಲಿ ವ್ಯಾಪಾರ ಮಾಡುವವರು ಮತ್ತು ಭೇಟಿ ನೀಡುವವರು ಹಲವಾರು ಬಾರಿ ಫೋನ್ ಮುಖಾಂತರ ಗ್ರಾಪಂ ಅಧ್ಯಕ್ಷರು ಹಾಗೂ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಸ್ಪಂದನೆ ದೊರಕಿಲ್ಲ.ಸ್ಥಳೀಯರು ಸಂತೆಯ ಪ್ರದೇಶದಲ್ಲಿ ತಕ್ಷಣ ಶೌಚಾಲಯದ ಗೋಡೆ ಮತ್ತು ಕಾಂಪೌಂಡ್ ಪುನರ್‌ನಿರ್ಮಿಸಿ ಶೌಚಾಲಯ ಪುನಃ ಬಳಕೆಗೆ ತರಬೇಕು ಎಂದು ಅಧಿಕಾರಿಗಳಲ್ಲಿ ಆಗ್ರಹಿಸಿದ್ದಾರೆ.