ಕುಕನೂರು: ಪಟ್ಟಣ ಹಾಗೂ ತಾಲೂಕಿನ ಗ್ರಾಮಗಳಲ್ಲಿ ಬುಧವಾರ ಹೋಳಿ ಹಬ್ಬದ ಪ್ರಯುಕ್ತ ಜನರು ಪರಸ್ಪರ ಬಣ್ಣ ಹಚ್ಚಿಕೊಂಡು ಸಂತಸ ಪಟ್ಟರು.
ಓಕುಳಿ ಬಂಡಿ:ಪಟ್ಟಣದ ಕೋಳಿಪೇಟೆಯ ಜನತೆ ಎತ್ತಿನ ಓಕುಳಿ ಬಂಡಿ ನಿರ್ಮಿಸಿದ್ದರು.ಎತ್ತಿನ ಬಂಡಿಯಲ್ಲಿ ಬಣ್ಣ ತುಂಬಿದ ಬ್ಯಾರಲ್ ಇರಿಸಿದ್ದರು. ದಾರಿಯೂದ್ದಕ್ಕೂ ಬಣ್ಣ ಎರಚುತ್ತಾ ತೆರಳಿದರು. ಈ ಬಂಡಿಯ ಮುಂದೆ ಅಲಂಕರಿಸಿದ್ದ ಎತ್ತಿನ ಬಂಡಿ ಹಾಗೂ ಜೋಡೆತ್ತು,ಎರಡು ಕರುಗಳ ಮೆರವಣಿಗೆ ವಾದ್ಯ ಮೇಳದೊಂದಿಗೆ ಜರುಗಿತು. ಯುವಕ ವೃಂದ ಸಹ ಬಣ್ಣದಾಟದಲ್ಲಿ ಕೇಕೆ ಹಾಕುತ್ತಾ ಹೆಜ್ಜೆ ಹಾಕಿ ಸಂತಸಪಟ್ಟರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಈ ಓಕುಳಿ ಬಂಡಿ ಚಲಿಸಿತು.ದಾರಿಯುದ್ದಕ್ಕೂ ಬಂಡಿಯ ಬ್ಯಾರಲಿನಲ್ಲಿದ್ದ ಬಣ್ಣ ಎರಚುತ್ತಾ ಸಾಗಿದರು.
ಸಂಭ್ರಮ ಇಮ್ಮಡಿ:ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜನರು ಪರಸ್ಪರ ಬಣ್ಣ ಹಚ್ಚುತ್ತಾ ಸಂಭ್ರಮಿಸಿದರು.ಯುವಕರು, ಮಹಿಳೆಯರು, ಮಕ್ಕಳು ಸಂಭ್ರಮದಲ್ಲಿ ಭಾಗಿಯಾದರು. ಸ್ನೇಹತರ ಒಡಗೂಡಿ ಬಣ್ಣ ಹಚ್ಚುತ್ತಾ ಪರಸ್ಪರ ವಿನಿಮಯ ಮಾಡಿಕೊಂಡಿದ್ದ ಹೋಳಿ ಸಂಭ್ರಮ ಇಮ್ಮಡಿಗೊಳಿಸಿತ್ತು.