ಅಭಿವೃದ್ಧಿಗೆ ಜನರ ಸಹಕಾರ ಅಗತ್ಯ: ಮಹೇಶ್‌

KannadaprabhaNewsNetwork |  
Published : Feb 25, 2026, 02:00 AM IST
ಪಟ್ಟಣದ ಸಮಗ್ರ ಅಭಿವೃದ್ಧಿಗೆ ಎಲ್ಲರೂ ಸಹಕರಿಸಿ-ಮುಖ್ಯಾಧಿಕಾರಿ | Kannada Prabha

ಸಾರಾಂಶ

ಪಟ್ಟಣದ ಸಮಗ್ರ ಅಭಿವೃದ್ದಿಯ ಹಿತದೃಷ್ಟಿಯಿಂದ ಎಲ್ಲರೂ ಪಟ್ಟಣ ಪಂಚಾಯ್ತಿಯೊಂದಿಗೆ ಸಹಕರಿಸಬೇಕೆಂದು ಪ.ಪಂ ಮುಖ್ಯಾಧಿಕಾರಿ ಎಂ.ಪಿ. ಮಹೇಶ್‌ ಕುಮಾರ್‌ ಹೇಳಿದರು.

ತಹಸೀಲ್ದಾರ್‌ ನಯನಾ, ಮುಖ್ಯಾಧಿಕಾರಿ ಮಹೇಶ್‌ ಕುಮಾರ್‌ ಬಜೆಟ್‌ ಪೂರ್ವ ಸಭೆ---

ಕನ್ನಡಪ್ರಭ ವಾರ್ತೆ ಯಳಂದೂರುಪಟ್ಟಣದ ಸಮಗ್ರ ಅಭಿವೃದ್ದಿಯ ಹಿತದೃಷ್ಟಿಯಿಂದ ಎಲ್ಲರೂ ಪಟ್ಟಣ ಪಂಚಾಯ್ತಿಯೊಂದಿಗೆ ಸಹಕರಿಸಬೇಕೆಂದು ಪ.ಪಂ ಮುಖ್ಯಾಧಿಕಾರಿ ಎಂ.ಪಿ. ಮಹೇಶ್‌ ಕುಮಾರ್‌ ಹೇಳಿದರು.ಮಂಗಳವಾರ ಆಡಳಿತಾಧಿಕಾರಿ ತಹಶೀಲ್ದಾರ್‌ ಎಸ್. ಎಲ್. ನಯನರ ನೇತೃತ್ವದಲ್ಲಿ ನಡೆದ ಬಜೆಟ್‌ ಪೂರ್ವಭಾವಿ ಸಭೆ ಬಳಿಕ ಮಾತನಾಡಿದರು. ನಮ್ಮ ಪಂಚಾಯ್ತಿ ಚಿಕ್ಕದಾಗಿದೆ. ಇಲ್ಲಿಗೆ ಆದಾಯದ ಮೂಲಗಳು ಕಡಿಮೆ. ಇದನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸದಸ್ಯರು, ಸಾರ್ವಜನಿಕರು ಸೂಕ್ತ ಸಲಹೆ, ಸೂಚನೆಗಳನ್ನು ಕೊಡಬೇಕು. ಹಳೆ ಕಚೇರಿಯ ಕಟ್ಟಡದಲ್ಲಿ ಮಳಿಗೆಗಳ ನಿರ್ಮಾಣ, ಓವರ್‌ ಹೆಡ್ ಟ್ಯಾಂಕ್ ಇದ್ದ ಕಡೆ ಮಳಿಗೆ, ಮಾರುಕಟ್ಟೆ ಅಭಿವೃದ್ಧಿ, ಸೂಕ್ತ ವಾಹನ ನಿಲುಗಡೆಗೆ ಸ್ಥಳಾವಕಾಶ, ದ್ವಿಪಥ ರಸ್ತೆಯಲ್ಲಿ ವಿದ್ಯುತ್ ಬಲ್ಬ್‌ಗಳ ಅಳವಡಿಕೆ, ಪಾರ್ಕ್ ನಿರ್ಮಾಣ, ಇ-ಸ್ವತ್ತು ಯೋಜನೆ ಖಾತೆ ಮಾಡಿಸಿಕೊಳ್ಳಲು ಸರ್ಕಾರ ತಂದಿರುವ ಹೊಸ ಮಾರ್ಗಸೂಚಿಗಳನ್ನು ಮನೆ-ಮನೆಗಳಿಗೆ ತಲುಪಿಸಿ ಇಲ್ಲಿಂದ ಆದಾಯ ಕ್ರೋಡೀಕರಿಸುವುದು ಆದಾಯದ ಮೂಲಗಳನ್ನು ಪಟ್ಟಿ ಮಾಡಿ ಅಭಿವೃದ್ಧಿಗೆ ಪೂರಕವಾಗಿರುವ ಬಜೆಟ್ ಮಂಡಿಸಲಾಗುವುದು ಎಂದರು.ಆಡಳಿತಾಧಿಕಾರಿ ಎಸ್.ಎಲ್. ನಯನ ಮಾತನಾಡಿ, ಅನೇಕರು ಇಲ್ಲಿನ ಫುಟ್‌ಪಾತ್ ತೆರವು, ವಾಹನ ನಿಲ್ದಾಣಕ್ಕೆ ಸ್ಥಳಾವಕಾಶ, ದ್ವಿಚಕ್ರ ವಾಹನ, ಆಟೋ ನಿಲ್ದಾಣ, ಕಸ ತೆರವುಗೊಳಿಸುವುದು ಸೇರಿದಂತೆ ಇತರೆ ಅನೇಕ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಇದನ್ನು ನಾನು ಖುದ್ದು ಪರಿಶೀಲಿಸಿ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.ಪಪಂ ಮಾಜಿ ಸದಸ್ಯರಾದ ಮಹೇಶ್, ಭೀಮಪ್ಪ, ಉಮಾಶಂಕರ, ಮುನವ್ವರ್‌ ಬೇಗ್, ಮುಖಂಡರಾದ ಮಹೇಶ್, ರೋಟರಿ ಅಧ್ಯಕ್ಷ ವೈ.ಜಿ. ನಿರಂಜನ ಸ್ವಾಮಿ, ರಾಜಶೇಖರ್‌, ಮಲ್ಲು, ಶಂಕರ ಜೆಇ ನಾಗೇಂದ್ರ, ಆರೋಗ್ಯ ನಿರೀಕ್ಷಕ ರಾಘವೇಂದ್ರ, ಜಯಲಕ್ಷ್ಮಿ, ಲಕ್ಷ್ಮಿ, ರೇಖಾ, ಮಲ್ಲಿಕಾರ್ಜುನ, ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಡುಗೊಲ್ಲರ ಸಾಂಪ್ರದಾಯಿಕ ಆಚರಣೆಗಳು ಮುಂದುವರಿಯಬೇಕು
ದೌರ್ಜನ್ಯ ಪ್ರಕರಣಗಳ ವಿಚಾರಣೆ ತ್ವರಿತ ನ್ಯಾಯಾಲಯಗಳಲ್ಲಿ ನಡೆಯಲಿ: ಪಿ.ಯಶೋಧ