ಕನ್ನಡಪ್ರಭ ವಾರ್ತೆ ಭಾರತೀನಗರರೈತರು ಮತ್ತು ಜನಸಾಮಾನ್ಯರ ಪರ ಯೋಜನೆ ರೂಪಿಸಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪಂಚರತ್ನ ಯೋಜನೆಗಳು ಜನಸಾಮಾನ್ಯರಿಗೆ ಅರ್ಥವಾಗಲಿಲ್ಲ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಬೇಸರ ವ್ಯಕ್ತಪಡಿಸಿದರು.
ಕಳೆದ ಚುನಾವಣೆ ವೇಳೆ ಜನರು ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿಗಳಿಗೆ ಮರುಳಾದರು. ಇದರಿಂದ ರೈತ ಪರವಾಗಿ ನಿಂತಿದ್ದ ಎಚ್.ಡಿ.ಕುಮಾರಸ್ವಾಮಿ ಅವರ ಯೋಜನೆಗಳಿಗೆ ಹಿನ್ನಡೆಯಾಯಿತು ಎಂದರು.
ಸರ್ಕಾರ ಕೊಡುವಂತಹ 2 ಸಾವಿರದಿಂದ ನಿಮ್ಮ ಜೀವನ ನಿರ್ವಹಣೆ ಮಾಡಲು ಸಾಧ್ಯವಾಗುವುದಿಲ್ಲ. ಉಚಿತ ವಿದ್ಯುತ್ ಮತ್ತು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡುತ್ತೇವೆಂದು ಹೇಳಿ ವಿದ್ಯುತ್ ಮತ್ತು ಬಸ್‌ದರವನ್ನು ಹೆಚ್ಚಳ ಮಾಡಿ ರೈತರಿಗೆ ಬರೆ ಎಳೆದಿದ್ದಾರೆ. ಇಂತಹ ಯೋಜನೆಗಳು ನಮಗೆ ಬೇಕೇ ಪ್ರಶ್ನಿಸಿದರು.ಈ ಹಿಂದೆ ಸ್ವಾಭಿಮಾನದಿಂದ ಬದುಕುತ್ತಿದ್ದ ನಮ್ಮ ಜನ ಕೆಲವರು ಹಣ, ಹೆಂಡ, ಬಾಡುಗಳಿಗೆ ಮಾರು ಹೋಗಿದ್ದಾರೆ. ಹಿಂದಿನ ನಮ್ಮ ಪೂರ್ವಿಕರು ಜೀತ ಮಾಡಿಯಾದರೂ ಹೆಂಡತಿ-ಮಕ್ಕಳನ್ನು ಸಾಕುತ್ತಿದ್ದರು. ಯಾರ ಮುಂದೆಯೂ ಕೈ ಚಾಚುತ್ತಿರಲಿಲ್ಲ. ಇಂದು ಪರಿಸ್ಥಿತಿ ಸಂಪೂರ್ಣ ಕಲುಷಿತಗೊಳ್ಳುತ್ತಿದೆ ಎಂದು ವಿಷಾದಿಸಿದರು.
ರಾಷ್ಟ್ರ ಕವಿ ಕುವೆಂಪು ಇಂಗ್ಲೀಷ್ ಭಾಷೆಯಿಂದ ಕನ್ನಡದ ಸಾಹಿತ್ಯ, ಕವಿತೆಗಳನ್ನು ಬರೆಯಲು ಮೊದಲು ಪ್ರಾರಂಭಿಸಿದರು. ಕನ್ನಡ ಭಾಷೆಯನ್ನು ತಮ್ಮ ಉಸಿರನ್ನಾಗಿಸಿಕೊಂಡು ಪ್ರಪಂಚಕ್ಕೆ ಕನ್ನಡದ ಕಂಪುಗಳನ್ನು ಹರಡಿದಂತಹ ಮಹಾನ್ ಕವಿ ಎಂದು ಬಣ್ಣಿಸಿದರು.
ಭಾರತೀನಗರದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹುಟ್ಟುಹಬ್ಬ, ಕನ್ನಡರಾಜ್ಯೋತ್ಸವದಲ್ಲಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಧ್ವಜಾರೋಹಣ ನೆರವೇರಿಸಿದರು.-------------