ನಿಮ್ಮ ನಾಯಕತ್ವಕ್ಕೆ ಜನ ಮತ ನೀಡ್ಲಿಲ್ಲ: ಸಿಎಂ ಸಿದ್ದರಾಮಯ್ಯಗೆ ಟಾಂಗ್
ಆಕಾಶಕ್ಕೆ ಉಗಿದರೆ ಅದು ಆಕಾಶಕ್ಕೆ ಮುಟ್ಟಲ್ಲ, ಸೂರ್ಯನಿಗೆ ತಟ್ಟಲ್ಲ, ಉಗಿದವರ ಮುಖಕ್ಕೆ ವಾಪಸ್ ಬರುತ್ತೆ. ನೀವು ಮೋದಿಯನ್ನ ಟೀಕೆ ಮಾಡೋದು ಸೂರ್ಯನಿಗೆ ಉಗಿದಂತೆ. ಅದು, ನಿಮ್ಮ ಮುಖಕ್ಕೆ ಮೆತ್ತಿಕೊಳ್ಳೋದು. ನೀವೇ ಮುಖ ತೊಳೆದುಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮೋದಿಯನ್ನ ಬೈದು ದೊಡ್ಡವರಾಗಬಹುದು ಎಂದು ಭಾವಿಸಿದ್ದಾರೆ. ಮೋದಿಗೆ 2014, 2019, 2024 ರಲ್ಲಿ ಚಾಲೆಂಜ್ ಮಾಡಿದ್ರಿ, ಆದರೆ, ಆಗಿದ್ದೇನು. ನಿಮ್ಮ ನಾಯಕತ್ವಕ್ಕೆ ಜನ ಮತ ನೀಡ್ಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಟ್ಟರು.ಸಿಎಂ ಸೂಚನೆ ಮೇರೆಗೆ ಹಳ್ಳಿ ಹಳ್ಳಿಗೆ ಹೋಗಿ ವಕ್ಫ್ ಅದಾಲತ್ ಮಾಡ್ತಿದ್ದೀನಿ ಎಂದು ಸಚಿವ ಜಮೀರ್ ಅವರು ಹೇಳುತ್ತಿದ್ದಾರೆ. ವಕ್ಫ್ ನೋಟಿಫಿಕೇಶ್ ಅಕ್ರಮ. ಚಿಕ್ಕಮಗಳೂರಿನ ಡಿ.ಆರ್. ಪೊಲೀಸ್ ಗ್ರೌಂಡ್, ರತ್ನಗಿರಿ ಬೋರೆಯನ್ನ ವಕ್ಫ್ ಆಸ್ತಿ ಅಂತ ನೊಟೀಫಿಕೇಶನ್ ಹೊರಡಿಸಿದ್ದಾರೆ. ಖಾತೆ ಇಡಿ ಅಂದ್ರೆ ಕಣ್ಮುಚ್ಚಿ ಇಟ್ರೆ ಅನ್ಯಾಯವಾಗುತ್ತೆ ಎಂದರು.
ನಿಮ್ಮ ಸರ್ಕಾರವೇ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಕಾಯ್ದೆ ತಂದಿದ್ದು, ರಾಕ್ಷಸರಿಗೆ ವರ ಕೊಟ್ಟಂತೆ ವರ ಕೊಟ್ಟಿದ್ದೀರಾ, ಆ ವರ ವಾಪಸ್ ತೆಗೆದು ಕೊಳ್ಳಿ, ವಕ್ಫ್ ಕಾಯ್ದೆ ನಿಮ್ಮ ಪಕ್ಷವೇ ಮಾಡಿದ ಪಾಪದ ಕೂಸು. ಸಮಾನ ನ್ಯಾಯದ ಬಗ್ಗೆ ಮಾತಾಡೋ ಸಿಎಂ ಅಪರಿಮಿತ ಅಧಿಕಾರವನ್ನ ಕಾಯ್ದೆ ಮೂಲಕ ವಕ್ಫ್ ಬೋರ್ಡ್ ಗೆ ಕೊಟ್ಡಿದ್ದೇ ಪರಮಾಘಾತ. ಆ ಕಾಯ್ದೆ ರದ್ದಾಗಲು ಧ್ವನಿ ಎತ್ತುದ್ರೆ ಮಾತ್ರ ಪೂರ್ಣ ನ್ಯಾಯ ಸಿಗುತ್ತೆ. ಜನಾಭಿಪ್ರಾಯಕ್ಕೆ ಹೆದರಿ ನೀವು ಒಂದು ಹೆಜ್ಜೆ ಮುಂದಿಟ್ಟಿದ್ದೀರಾ ಆ ಕಾಯ್ದೆ ಬಲದಿಂದ ಅವರು ಈ ಕೆಲಸ ಮಾಡಿದ್ದು ಕಾಯ್ದೆ ರದ್ದಾಗದಿದ್ರೆ ತೂಗುಗತ್ತಿ ತರ ರೈತರು, ದಲಿತರ ನೆತ್ತಿ ಮೇಲೆ ತೂಗ್ತಿರುತ್ತೆ. ಆ ಕತ್ತಿ ಕೆಳಗಿಳಿಯಬೇಕು ಎಂದು ಹೇಳಿದರು.
ಡಿಕೆಶಿ ಹೇಳಿಕೆಗೆ ತಿರುಗೇಟು:
ಕೇಂದ್ರ ಸರ್ಕಾರ ₹100 ಲಕ್ಷ ಕೋಟಿ ಯನ್ನು ಮೂಲ ಸೌಕರ್ಯಕ್ಕೆ ಹೂಡಿಕೆ ಮಾಡಿದೆ. ನೀವೇನು ಮಾಡಿದ್ದೀರಾ, ಬೆಂಗಳೂರಿನ ಗುಂಡಿ ಮುಚ್ಚುವ ಯೋಗ್ಯತೆ ನಿಮಗಿಲ್ಲ, ನಿಮ್ಮ ಮುಖ್ಯಮಂತ್ರಿಗಳೇ ಈ ವರ್ಷ ಏನು ಕೇಳಬೇಡಿ, ಎಲ್ಲಾ ಹಣ ಗ್ಯಾರೆಂಟಿಗೆ ಖರ್ಚು ಮಾಡುತ್ತಿದ್ದೀವಿ ಎಂದು ಶಾಸಕರಿಗೆ ಪಾಠ ಹೇಳಿದ್ರು ಎಲ್ಲಾ ಸರಿ ಇಲ್ಲದ ಕಾರಣಕ್ಕೆ ನಿಮ್ಮ ಮುಖ್ಯಮಂತ್ರಿಗಳು ಪಾಠ ಹೇಳುವ ಸ್ಥಿತಿಗೆ ಬಂದಿರುವುದು ಎಂದರು.