ಮುನಿರತ್ನ ಕಟ್ಟುಕತೆ ಜನತೆ ನಂಬಲ್ಲ: ಸೈಯದ್ ಟೀಕೆ

KannadaprabhaNewsNetwork |  
Published : Dec 27, 2024, 12:45 AM IST
ಕ್ಯಾಪ್ಷನ26ಕೆಡಿವಿಜಿ49 ಸೈಯದ್‌ ಖಾಲಿದ್ ಅಹ್ಮದ್‌ | Kannada Prabha

ಸಾರಾಂಶ

ಶಾಸಕ ಮುನಿರತ್ನ ಮೇಲೆ ಅಧಿಕಾರಕ್ಕೋಸ್ಕರ ಎಚ್‌ಐವಿ ಸೋಂಕಿತರನ್ನು ಬಳಸಿ ಹನಿಟ್ರ್ಯಾಪ್ ಆರೋಪ ಕೇಳಿಬಂದಿತ್ತು. ಮಾಜಿ ಮುಖ್ಯಮಂತ್ರಿಗಳಿಬ್ಬರು, ನಾಯಕರನ್ನು ಖೆಡ್ಡಾಕ್ಕೆ ಕೆಡವಲು ಯತ್ನಿಸಿದ್ದ ಬಗ್ಗೆ ಮಹಿಳೆ ಆರೋಪ ಮಾಡಿದ್ದರು. ಆದರೆ, ಈಗ ಮೊಟ್ಟೆ ಎಸೆತದ ಬಗ್ಗೆ ಹೊಸ ನಾಟಕ ಮಾಡುತ್ತಿದ್ದಾರೆ. ಅತ್ಯಾಚಾರ ಕೇಸ್‌ನಲ್ಲಿ ಜೈಲು ಸೇರಿ, ಹೊರಗೆ ಬಂದಿರುವ ಶಾಸಕ ಮುನಿರತ್ನ ಕಟ್ಟುಕಥೆ ನಂಬುವಷ್ಟ ಕರ್ನಾಟಕದ ಜನರು ಮೂರ್ಖರಲ್ಲ ಎಂದು ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಟೀಕಿಸಿದ್ದಾರೆ.

ದಾವಣಗೆರೆ: ಶಾಸಕ ಮುನಿರತ್ನ ಮೇಲೆ ಅಧಿಕಾರಕ್ಕೋಸ್ಕರ ಎಚ್‌ಐವಿ ಸೋಂಕಿತರನ್ನು ಬಳಸಿ ಹನಿಟ್ರ್ಯಾಪ್ ಆರೋಪ ಕೇಳಿಬಂದಿತ್ತು. ಮಾಜಿ ಮುಖ್ಯಮಂತ್ರಿಗಳಿಬ್ಬರು, ನಾಯಕರನ್ನು ಖೆಡ್ಡಾಕ್ಕೆ ಕೆಡವಲು ಯತ್ನಿಸಿದ್ದ ಬಗ್ಗೆ ಮಹಿಳೆ ಆರೋಪ ಮಾಡಿದ್ದರು. ಆದರೆ, ಈಗ ಮೊಟ್ಟೆ ಎಸೆತದ ಬಗ್ಗೆ ಹೊಸ ನಾಟಕ ಮಾಡುತ್ತಿದ್ದಾರೆ. ಅತ್ಯಾಚಾರ ಕೇಸ್‌ನಲ್ಲಿ ಜೈಲು ಸೇರಿ, ಹೊರಗೆ ಬಂದಿರುವ ಶಾಸಕ ಮುನಿರತ್ನ ಕಟ್ಟುಕಥೆ ನಂಬುವಷ್ಟ ಕರ್ನಾಟಕದ ಜನರು ಮೂರ್ಖರಲ್ಲ ಎಂದು ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಟೀಕಿಸಿದ್ದಾರೆ.

ರಾಜರಾಜೇಶ್ವರಿ ನಗರ ಕ್ಷೇತ್ರ ಶಾಸಕ ಮುನಿರತ್ನ ಅವರಿಗೆ ಮೊಟ್ಟೆ ಎಸೆದಿರುವುದು ಕಾಂಗ್ರೆಸ್ ಕಾರ್ಯಕರ್ತರಲ್ಲ, ಬಿಜೆಪಿ ಕಾರ್ಯಕರ್ತರು. ಪಕ್ಷದ ಹೆಸರು, ಕ್ಷೇತ್ರದ ಜನರಿಗೆ ಮಸಿ ಬಳಿಯುವ ಕೆಲಸ ಮಾಡಿದ್ದಕ್ಕಾಗಿ ಮೊಟ್ಟೆ ಎಸೆದಿದ್ದಾರೆ. ಮುನಿರತ್ನರಂಥವರಿಗೆ ಕಠಿಣ ಶಿಕ್ಷೆ ಆಗಬೇಕು. ಮುನಿರತ್ನ ಶಾಸಕನಾಗಲು ಯೋಗ್ಯತೆ ಇಲ್ಲ. ಅವರ ಮೇಲೆ ಮತದಾರರ ನಕಲಿ ವೋಟರ್ ಕಾರ್ಡ್ ಸೇರಿದಂತೆ ಹಲವು ಗುರುತರ ಆರೋಪಗಳಿವೆ. ಮೊದಲು ಇದರ ಬಗ್ಗೆ ಬಿಜೆಪಿ ನಾಯಕರು ಮಾತನಾಡಲಿ ಎಂದಿದ್ದಾರೆ.

- - - -26ಕೆಡಿವಿಜಿ49: ಸೈಯದ್‌ ಖಾಲಿದ್ ಅಹ್ಮದ್‌

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಗಳಿಂದ ಮಕ್ಕಳ ಶಿಕ್ಷಣ ಕಸಿಯುವ ಹುನ್ನಾರ
ಭಾರತದ ಭವಿಷ್ಯ ವರ್ಗ ಕೋಣೆಯಲ್ಲಿದೆ