ಕನ್ನಡಪ್ರಭ ವಾರ್ತೆ ಚನ್ನಗಿರಿ
ತಾಲೂಕಿನ ಕರೇಕಟ್ಟೆ ಗ್ರಾಮದಲ್ಲಿ ತಾಲೂಕು ಆಡಳಿತ ವತಿಯಿಂದ ಶನಿವಾರ ಜನತಾ ದರ್ಶನ ಕಾರ್ಯಕ್ರಮ ನಡೆಸಲಾಯಿತು.ಈ ಸಮಾರಂಭದ ಉದ್ಘಾಟನೆಯನ್ನು ಕ್ಷೇತ್ರದ ಶಾಸಕ ಬಸವರಾಜು ವಿ.ಶಿವಗಂಗಾ ನೆರವೇರಿಸಿ ಮಾತನಾಡಿ ಚನ್ನಗಿರಿ ತಾಲೂಕು ರಾಜ್ಯದಲ್ಲಿಯೇ ಎರಡನೇ ಅತಿ ದೊಡ್ಡ ತಾಲೂಕು ಆಗಿದ್ದು 61 ಗ್ರಾಮ ಪಂಚಾಯಿತಿ, ಒಂದು ಪುರಸಭೆ ಒಳಗೊಂಡಿದ್ದು ತಾಲೂಕಿನ ಜನರು ವಿವಿಧ ಕೆಲಸಗಳಿಗಾಗಿ ತಾಲೂಕು ಕೇಂದ್ರದಲ್ಲಿರುವ ಸರ್ಕಾರಿ ಕಚೇರಿಗಳಿಗೆ ಬಂದಾಗ ಅವರ ಅಲೆದಾಡಿಸದೆ ಅವರ ಕೆಲಸಗಳ ಮಾಡಿಕೊಡಿ. ಜನರ ಸಮಸ್ಯೆಗಳ ತಿಳಿಯಲು ತಾಲೂಕು ಆಡಳಿತ ಸಹಿತ ಗ್ರಾಮಗಳಲ್ಲಿ ಜನತಾದರ್ಶನ ಕಾರ್ಯಕ್ರಮ ಮೂಲಕ ಸ್ಥಳದಲ್ಲಿಯೇ ಸಮಸ್ಯೆ ಬಗೆಹರಿಸಲಾಗುವುದು ಎಂದರು.
ಹಳ್ಳಿಗಾಡಿನಲ್ಲಿ ವಾಸಿಸುವ ರೈತರು ಕೂಲಿ ಕಾರ್ಮಿಕರು, ವೃದ್ಧರು, ಶಾಲಾ ವಿದ್ಯಾರ್ಥಿಗಳ ಸಮಸ್ಯೆಗಳ ತಿಳಿದು ಸ್ಥಳದಲ್ಲಿಯೇ ಬಗೆಹರಿಸಲಿದ್ದು ಸರ್ಕಾರದ ಹಂತಗಳಲ್ಲಿ ಆಗಬೇಕಾದ ಕೆಲಸಗಳು ಹಂತ-ಹಂತವಾಗಿ ಮಾಡಿಕೊಡಲಾಗುವುದು ಎಂದರು.ತಹಸೀಲ್ದಾರ್ ಎರ್ರಿಸ್ವಾಮಿ ಮಾತನಾಡಿ ಗ್ರಾಮೀಣ ಪ್ರದೇಶಗಳ ಜನರು ಸಣ್ಣ-ಪುಟ್ಟ ಕೆಲಸಗಳಿಗೆ ಕಚೇರಿಗೆ ತಿರುಗಾಡಬಾರದು ಎಂಬ ಉದ್ದೇಶದಿಂದ ಸರ್ಕಾರವು ಇಂತಹ ಕಾರ್ಯಕ್ರಮಗಳ ಮಾಡುತ್ತಾ ಸಮಸ್ಯೆಗಳಿಗೆ ಪರಿಹಾರ ನೀಡಲು ಸಹಕಾರಿ. ಅರ್ಹ ಫಲಾನುಭವಿಗಳಿಂದ ಸೂಕ್ತ ದಾಖಲೆಗಳ ಪಡೆದು 20 ಮಂದಿಗೆ ಸಾಮಾಜಿಕ ಭದ್ರತಾ ಯೋಜನೆಯ ಆದೇಶ ಪ್ರತಿಗಳ ವಿತರಿಸಿದ್ದು ಜಮೀನುಗಳಿಗೆ ಸಂಬಂಧಪಟ್ಟಂತೆ ಎಂಟು ಪೌತಿ ಖಾತೆಗಳ ಇತ್ಯರ್ಥಪಡಿಸುವ ಜೋತೆಗೆ ಇ ಸ್ವತ್ತು ಗಳಿಲ್ಲದ ಮನೆಗಳಿಗೆ ಇ ಸ್ವತ್ತು ನೀಡುವ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದರು. ಈಗೆ ಇಂತಹ ಕಾರ್ಯಕ್ರಮಗಳಿಂದ ಜನತೆಗೆ ಅನುಕೂಲವಾಗುತ್ತಿದ್ದು ಸರ್ಕಾರದ ಇಂತಹ ಕಾರ್ಯಕ್ರಮಗಳ ಬಗ್ಗೆ ಪ್ರಶಂಶಿಸಿದರು.
ಸಮಾರಂಭದಲ್ಲಿ ಡಿ.ವೈ.ಎಸ್.ಪಿ ಪ್ರಶಾಂತ್ ಜಿ.ಮುನ್ನೋಳಿ, ತಾ.ಪಂ ಕಾರ್ಯನಿರ್ವಾಣಾಧಿಕಾರಿ ಬಿ.ಕೆ.ಉತ್ತಮ, ಆಹಾರ ಇಲಾಖೆಯ ಶಿರಾಸ್ತೆದಾರ್ ಜಯರಾಂ, ಸಿಡಿಪಿಒ ಸದಾನಂದ್, ಜಿ.ಪಂ ಅಭಿಯಂತರ ಷಣ್ಮುಖಪ್ಪ, ಗ್ರಾಮೀಣ ಕುಡಿಯುವ ನೀರು ಇಲಾಖೆಯ ಅಭಿಯಂತರ ಲೋಹಿತ್ ಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರವೀಂದ್ರಕುಮಾರ್ ಅಥರ್ಗ, ಸಮಾಜ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ್ ಸೇರಿ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.